Death Capsule: ನೋವು ಇಲ್ಲದೆ ನಿಮಿಷದಲ್ಲಿ ಸಾವು ನೀಡುವ ಪವಾಡ ಯಂತ್ರ: ಜುಲೈನಲ್ಲಿ ಜಾರಿಗೆ ಬರುವ ಸಾಧ್ಯತೆ!

ಎಲ್ಲರಿಗೂ ಆರೋಗ್ಯವಾಗಿ ಇರಬೇಕು ಅನ್ನೋ ಆಸೆ ಇರುತ್ತೆ. ಆದರೆ ಕೆಲವರ ಹಣೆಯಲ್ಲಿ ಅದು ಬರೆದಿರುವುದಿಲ್ಲ. ಯಾಕೆಂದರೆ ಕೆಲ ಮಾರಣಾಂತಿಕ ರೋಗಗಳಿಂದಾಗಿ ಜೀವನವಿಡೀ ನರಕವನ್ನು ಅನುಭವಿಸುವವರು ಇದ್ದಾರೆ. ಇಂತವರು ಸಾಯಲು ಬಯಸುತ್ತಾರೆ ಆದರೆ ಸಾವು ಅವರಿಗೆ ಬೇಗ ಬರುದಿಲ್ಲ. ಹೀಗಾಗಿ ನೋವಿನಿಂದ ಬಳಲುವಂತಾಗುತ್ತದೆ. ಇಂತವರಿಗಾಗಿ 'ಡೆತ್ ಕ್ಯಾಪ್ಸುಲ್' ಎಂಬ ಮಷೀನ್ ಕಂಡುಹಿಡಿಯಲಾಗಿದೆ.

ಹೌದು.... ಆತ್ಮಹತ್ಯೆಗೆ ಅನುಕೂಲವಾಗುವಂತೆ 'Death Capsule' ಎಂಬ ಮಷೀನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಈ ತಿಂಗಳು ಮೊದಲ ಬಾರಿಗೆ ಬಳಸಲಾಗುವುದು ಎಂದು ಸ್ವಿಸ್ ಮಾಧ್ಯಮ ವರದಿ ಮಾಡಿದೆ. ದಯಾಮರಣ ರೋಗಿ ಇದರೊಳಗೆ ಕುಳಿತುಕೊಂಡು ಗುಂಡಿಯನ್ನು ಒತ್ತಿದರೆ ಸೆಕೆಂಡುಗಳಲ್ಲಿ ಯಾವುದೇ ನೋವು ಇಲ್ಲದಂತೆ ಸಾವನ್ನಪ್ಪುತ್ತಾನೆ.

Death Capsule A miracle machine that gives death in minutes without pain

ಡೆತ್ ಕ್ಯಾಪ್ಸುಲ್ ನೋಡಲು ಹೇಗಿದೆ?

ಡೆತ್ ಕ್ಯಾಪ್ಸುಲ್ ನೋಡಲು ಒಂದು ಪುಟ್ಟ ಕಾರಿನಂತಿದೆ. ಇದರ ಹಿಂದೆ ಕಂಪನಿಯ ಪ್ರಕಾರ ಎಕ್ಸಿಟ್ ಸ್ವಿಟ್ಜರ್ಲೆಂಡ್ ಎಂದು ಬರೆಯಲಾಗಿದೆ. ಆಮ್ಲಜನಕದ ಕೊರತೆಯಿಂದ ರೋಗಿಯು ಪ್ರಜ್ಞೆ ಕಳೆದುಕೊಂಡು ನಂತರ ಸಾವನ್ನಪ್ಪುತ್ತಾನೆ. ಹೀಗಾಗಿ ರೋಗಿಗೆ ಸಾವಿನ ಅರಿವಾಗಲಿ ಅಥವಾ ನೋವಾಗಲಿ ಇರುವುದಿಲ್ಲ. ಇದರಲ್ಲಿ ಕುಳಿತುಕೊಳ್ಳುವ ಹಾಗೂ ಬಟನ್ ಒತ್ತುವ ಧೈರ್ಯ ಮಾಡಬೇಕು ಅಷ್ಟೇ. ಇದು ನೋವು ರಹಿತವಾಗಿ ಸಾಯಲು ಅನುವು ಮಾಡಿಕೊಡುತ್ತದೆ.

ಇದರ ಸೃಷ್ಟಿಕರ್ತ 'ಡಾಕ್ಟರ್ ಡೆತ್' ಎಂದು ಕರೆಯಲ್ಪಡುವ ವಕೀಲ ಡಾ ಫಿಲಿಪ್ ನಿಟ್ಷ್ಕೆ (Dr Nitschke). ಇವರು ಸಾಯಲು ಇಚ್ಚಿಸಲು ಬಯಸುವ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳ ಅನುಕೂಲಕ್ಕಾಗಿ ತಯಾರಿಸಲಾಗಿದೆ. ಇದನ್ನು ದಯಾಮರಣದ ಯಂತ್ರ ಅಂತಲೂ ಕರೆಯಲಾಗುತ್ತದೆ. ಆದರೆ ಈ ಯಂತ್ರದ ಬಗ್ಗೆ ಕೆಲ ಭಿನ್ನಾಭಿಪ್ರಾಯಗಳು ಕೇಳಿ ಬಂದಿವೆ.

ಈ 3D-ಮುದ್ರಿತ ಸಾಧನ 'ಆತ್ಮಹತ್ಯೆಗೆ ಉತ್ತೇಜನ ನೀಡಬಹುದು' ಎಂದು ಪ್ರೊ-ಲೈಫ್ ಗುಂಪುಗಳು ಎಚ್ಚರಿಸಿವೆ. ಆದರೆ ಡಾ ಫಿಲಿಪ್ ನಿಟ್ಷ್ಕೆ ತಮ್ಮ ಸಾಧನ ಜನರು ತಮ್ಮ ಜೀವನವನ್ನು 'ಶಾಂತಿಯುತ' ರೀತಿಯಲ್ಲಿ ಕೊನೆಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳುತ್ತಾರೆ.

ಸದ್ಯಕ್ಕಿನ್ನೂ ಈ ಯಂತ್ರ ಬಳಕೆಗೆ ಬಂದಿಲ್ಲ. ಎಕ್ಸಿಟ್ ಸ್ವಿಟ್ಜರ್‌ಲ್ಯಾಂಡ್ ವೆಬ್‌ಸೈಟ್‌ನಲ್ಲಿ 'ಡೆತ್ ಕ್ಯಾಪ್ಸುಲ್' ಕಮಿಂಗ್ ಸೂನ್ ಎಂದು ಹೇಳುತ್ತದೆ. ಆದರೆ ಹೆಚ್ಚಿನ ವಿವರಗಳಿಲ್ಲ. ಜೂನ್ 10 ರಂದು ನಿಟ್ಷ್ಕೆ ಆನ್‌ಲೈನ್ ಸೈಟ್‌ನಲ್ಲಿ ಈ ಡೆತ್ ಕ್ಯಾಪ್ಸುಲ್ ಬಳಕೆಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಮುಂದಿನ ಕೆಲವು ವಾರಗಳಲ್ಲಿ ನಿರೀಕ್ಷಿಸಲಾಗುತ್ತದೆ ಎಂದು ಬರೆದಿದ್ದಾರೆ.

ಎಕ್ಸಿಟ್ ಸ್ವಿಟ್ಜರ್ಲೆಂಡ್ ಉತ್ಪಾದನಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಜುಲೈನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕಂಪನಿಯ ಮೂಲಗಳು ವೆಬ್‌ಸೈಟ್‌ಗೆ ತಿಳಿಸಿವೆ. ದಯಾಮರಣಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದ್ದು, ಅವರು ಈಗಾಗಲೇ ಸ್ವಿಟ್ಜರ್ಲೆಂಡ್‌ಗೆ ಆಗಮಿಸಿದ್ದಾರೆ. ಆ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಡಾ ನಿಟ್ಷ್ಕೆ ಮತ್ತು ಅವರ ತಂಡವು ಈ ವರದಿಗಳನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.

ಡೆತ್ ಕ್ಯಾಪ್ಸುಲ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಕಳೆದ ವರ್ಷ MailOnline ಗೆ ನೀಡಿದ ಸಂದರ್ಶನದಲ್ಲಿ, Dr Nitschke ಅವರ ಆವಿಷ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು. ಅದರ ಪ್ರಕಾರ 'ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗೆ ಯಂತ್ರದ ಒಳಕೆ ಕುಳಿತಾಗ ಮೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆ ಮೂರು ಪ್ರಶ್ನೆಗಳಿಗೆ ದಯಾಮರಣ ಹೊಂದಲು ಬಯಸುವ ವ್ಯಕ್ತಿ ಮೌಖಿಕವಾಗಿ ಉತ್ತರಿಸುತ್ತಾರೆ

'1. ನೀವು ಯಾರು?',

'2. ನೀವು ಎಲ್ಲಿದ್ದೀರಿ?' ಮತ್ತು

'3. ನೀವು ಗುಂಡಿಯನ್ನು ಒತ್ತಿದಾಗ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?'

ಅವರು ಆ ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಿದರೆ, ಸಾಫ್ಟ್‌ವೇರ್ ಪವರ್ ಆನ್ ಆಗುತ್ತದೆ. ಬಳಿಕ ಬಟನ್ ಒತ್ತಲಾಗುತ್ತದೆ. ಅವರು ಗುಂಡಿಯನ್ನು ಒತ್ತಿದರೆ ಅವರು ಬೇಗನೆ ಸಾಯುತ್ತಾರೆ.

ಡೆತ್ ಕ್ಯಾಪ್ಸುಲ್ ಒಳಗೆ ಆರಂಭದಲ್ಲಿ ಆಮ್ಲಜನಕದ ಮಟ್ಟವು 21 ಪ್ರತಿಶತದಷ್ಟಿರುತ್ತದೆ. ಗುಂಡಿಯನ್ನು ಒತ್ತಿದ ನಂತರ ಆಮ್ಲಜನಕ ಒಂದು ಶೇಕಡಾಕ್ಕಿಂತ ಕಡಿಮೆಗೆ ಇಳಿಯಲು 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಆಗ ರೋಗಿ ಅರಿವಿಲ್ಲದಂತೆ ಅಂದರೆ ಯಾವುದೇ ನೋವಿಲ್ಲದಂತೆ ಸಾವನ್ನಪ್ಪುತ್ತಾನೆ.

ಆದರೆ ಈ ಡೆತ್ ಕ್ಯಾಪ್ಸುಲ್ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇವೆ. CARE ನ ಕಾರ್ಯನಿರ್ವಾಹಕ ನಿರ್ದೇಶಕ ಜೇಮ್ಸ್ ಮಿಲ್ಡ್ರೆಡ್ ಪ್ರಕಾರ, 'ಫಿಲಿಪ್ ನಿಟ್ಷ್ಕೆ ಅವರ ಈ ಸಾಧನವನ್ನು ಖಂಡಿಸಿದ್ದಾರೆ. ಇದು ಆತ್ಮಹತ್ಯೆಯನ್ನು ಹೆಚ್ಚಿಸುತ್ತದೆ. ಅದನ್ನು ಗ್ಲಾಮರೈಸ್ ಕೂಡ ಮಾಡುತ್ತದೆ' ಎಂದು ಆರೋಪಿಸಿದ್ದಾರೆ. ಅದಾಗ್ಯೂ ಸ್ವಿಸ್ ಅಧಿಕಾರಿಗಳು ಯಂತ್ರದ ಬಳಕೆಯಿಂದ ಕಾನೂನು ಕ್ರಮ ಕೈಗೊಳ್ಳಬಹುದೇ ಎಂಬುದು ಅಸ್ಪಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+