Get Updates
Get notified of breaking news, exclusive insights, and must-see stories!

Custard Apple Leaves: ಚರ್ಮ ಮತ್ತು ಕೂದಲಿನ ಸಮಸ್ಯೆನಾ? ಹಾಗಾದರೆ ಸೀತಾಫಲದ ಎಲೆಗಳನ್ನೊಮ್ಮೆ ಬಳಸಿ ನೋಡಿ...

ಸೀತಾಫಲ ಭಾರತದಲ್ಲಿ ಸುಲಭವಾಗಿ ದೊರೆಯುತ್ತದೆ. ಚಳಿಗಾಲದಲ್ಲಿ ಈ ಹಣ್ಣು ಹೇರಳವಾಗಿ ಲಭ್ಯವಿರುತ್ತದೆ. ಇದು ತುಂಬಾ ರುಚಿ ಮತ್ತು ಪೌಷ್ಟಿಕ ಹಣ್ಣು. ಮಾತ್ರವಲ್ಲದೆ ಇದು ಆರೋಗ್ಯಕ್ಕೂ ನಾನಾ ಪ್ರಯೋಜನವನ್ನು ನೀಡುತ್ತದೆ. ಅಷ್ಟೇ ಅಲ್ಲ ಚಳಿಗಾಲದಲ್ಲಿ ತ್ವಚೆ ಹಾಗೂ ಕೂದಲ ಸಮಸ್ಯೆಗಳಿಗೆ ಈ ಹಣ್ಣಿನ ಎಲೆಗಳೂ ತುಂಬಾನೇ ಪ್ರಯೋಜನಕಾರಿಯಾಗಿದೆ.

ವಿಟಮಿನ್ ಎ, ವಿಟಮಿನ್ ಸಿ, ಪ್ರೋಟೀನ್, ಪೊಟ್ಯಾಸಿಯಮ್, ಫೈಬರ್ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಈ ಹಣ್ಣು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಸೀತಾಫಲವು ನಿಮ್ಮ ಜೀರ್ಣಕ್ರಿಯೆ, ಕಣ್ಣುಗಳು ಮತ್ತು ಹೃದಯದ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ.

sitafal-leaves-benefits-for-skin-and-hair

ಮಾತ್ರವಲ್ಲದೆ ಸೀತಾಫಲದ ಎಲೆಗಳಲ್ಲಿಯೂ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತವೆ. ಹಾಗಾದರೆ ಸೀತಾಫಲದ ಎಲೆಗಳಿಂದ ನಿಮ್ಮ ತ್ವಚೆ ಮತ್ತು ಕೂದಲನ್ನು ಹೇಗೆ ಆರೋಗ್ಯಕರವಾಗಿ ಕಾಪಾಡಬಹುದು ಎಂಬುದನ್ನು ತಿಳಿಯೋಣ.

ಕೂದಲು ಮತ್ತು ಚರ್ಮಕ್ಕಾಗಿ ಸೀತಾಫಲ ಎಲೆಗಳ ಪ್ರಯೋಜನಗಳು:-

ರೋಗ ನಿರೋಧಕಗಳು ಸಮೃದ್ಧ

ಸೀತಾಫಲ ಆರೋಗ್ಯಕ್ಕೆ ಉತ್ತಮ ಫಲ ನೀಡುವ ಹಣ್ಣು. ಇದರ ಎಲೆಗಳು ಕೂಡ ವಿಟಮಿನ್ ಎ ಮತ್ತು ಸಿ ಸೇರಿದಂತೆ ರೋಗ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಚರ್ಮ ಮತ್ತು ಕೂದಲನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿನ ಆಂಟಿಆಕ್ಸಿಡೆಂಟ್‌ಗಳು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತವೆ. ಜೊತೆಗೆ ಮುಖದ ಮೇಲಿನ ರೇಖೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.

sitafal-leaves-benefits-for-skin-and-hair

ನೈಸರ್ಗಿಕ ಸ್ಕಿನ್ ಕ್ಲೆನ್ಸರ್

ಸೀತಾಫಲ ಎಲೆಗಳು ನೈಸರ್ಗಿಕ ಶುದ್ಧೀಕರಣ ಗುಣಗಳನ್ನು ಹೊಂದಿವೆ. ಈ ಪ್ಯಾಕ್ ಚರ್ಮದಿಂದ ಕೊಳೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಎಲೆಗಳ ಪೇಸ್ಟ್ ಅಥವಾ ದ್ರವದ ನೀರು ಚರ್ಮವನ್ನು ರಿಫ್ರೆಶ್ ಮಾಡಲು ಕೂಡ ಸಹಾಯ ಮಾಡುತ್ತದೆ.

ಚರ್ಮದ ಹೈಡ್ರೇಟ್

ಸಾಮಾನ್ಯವಾಗಿ ಶಾಖ ಮತ್ತು ಸೂರ್ಯನ ಬೆಳಕಿನಿಂದ ಚರ್ಮ ಒಣಗಲು ಪ್ರಾರಂಭಿಸುತ್ತದೆ. ತ್ವಚೆಯನ್ನು ಹೈಡ್ರೇಟ್ ಮಾಡಲು ಸೀತಾಫಲದ ಎಲೆಗಳನ್ನು ಬಳಸಬಹುದು. ಈ ಪ್ಯಾಕ್ ತ್ವಚೆಯನ್ನು ಹೈಡ್ರೇಟ್ ಮಾಡಿ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

sitafal-leaves-benefits-for-skin-and-hair

ಕೂದಲಿನ ಬೆಳವಣಿಗೆ ಸುಧಾರಣೆ

ಸೀತಾಫಲ ಎಲೆಗಳ ಹೇರ್ ಪ್ಯಾಕ್ ಕೂದಲಿಗೆ ಆಳವಾದ ಪೋಷಣೆಯನ್ನು ಒದಗಿಸುತ್ತದೆ. ಇದು ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿ ಮಾಡುವುದಲ್ಲದೆ ಕೂದಲು ಕಿರುಚೀಲಗಳನ್ನು ಬಲಪಡಿಸಲು ಈ ಎಲೆಗಳು ಉಪಯುಕ್ತವಾಗಿವೆ. ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.

ತಲೆಹೊಟ್ಟು ನಿವಾರಣೆ

ಸೀತಾಫಲದ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ಇದು ನೆತ್ತಿಯ ಸೋಂಕನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ಕೂದಲಿನ ಬೇರುಗಳು ಬಲವಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ. ಕೂದಲು ನೈಸರ್ಗಿಕ ಎಣ್ಣೆಯನ್ನು ಪಡೆಯುತ್ತದೆ. ಇದರ ನಿಯಮಿತ ಬಳಕೆಯಿಂದ ತಲೆಹೊಟ್ಟು ಕಡಿಮೆಯಾಗಲು ಪ್ರಾರಂಭವಾಗುತ್ತದೆ.

sitafal-leaves-benefits-for-skin-and-hair

ಚರ್ಮ ಮತ್ತು ಕೂದಲಿಗೆ ಸೀತಾಫಲ ಎಲೆಗಳನ್ನು ಬಳಸುವುದು ಹೇಗೆ?

ತ್ವಚೆಗೆ ಸೀತಾಫಲ ಎಲೆಗಳ ಪ್ಯಾಕ್:-

ಸೀತಾಫಲ ಎಲೆಗಳನ್ನು ಪುಡಿಮಾಡಿ. ಈ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ಇರಿಸಿ. ಇದಕ್ಕೆ ಒಂದು ಚಮಚ ರೋಸ್ ವಾಟರ್ ಸೇರಿಸಿ. ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಮತ್ತು ಚರ್ಮದ ಮೇಲೆ 15 ರಿಂದ 20 ನಿಮಿಷಗಳ ಕಾಲ ಅನ್ವಯಿಸಿ. ಪ್ಯಾಕ್ ಒಣಗಿದಾಗ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕೂದಲು ಬೆಳವಣಿಗೆಗೆ ಸೀತಾಫಲದ ಹೇರ್ ಮಾಸ್ಕ್:-

ಸೀತಾಫಲ ಎಲೆಗಳನ್ನು ರುಬ್ಬಿಕೊಳ್ಳಿ. ಇದಕ್ಕೆ ಸುಮಾರು ಒಂದು ಚಮಚ ಮೊಸರು ಸೇರಿಸಿ. ಜೊತೆಗೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಪೇಸ್ಟ್ ಅನ್ನು ಚೆನ್ನಾಗಿ ಬೆರೆಸಿ ಅದನ್ನು ಕೂದಲಿಗೆ ಅನ್ವಯಿಸಿ. ಈ ಪೇಸ್ಟ್ ಅನ್ನು ಕೂದಲಿನ ಮೇಲೆ ಸುಮಾರು 20 ನಿಮಿಷಗಳ ಕಾಲ ಬಿಡಿ. ಇದರ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+