Colorless Chicken Kebab Recipe: ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಬಣ್ಣವಿಲ್ಲದೆ ಬಾಡಿಸಿ ಚಿಕನ್!

ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಅಪಾಯಕಾರಿ ಬಣ್ಣ ಬಳಸದೆ ಚಿಕನ್ ತಯಾರಿಸಬಹುದು. ಅಡುಗೆ ಮಾಡಲು ಬರುತ್ತೆ ಅನ್ನೋರಿಗೆ ಇದು ತುಂಬಾ ಸುಲಭ. ಯಾಕೆಂದರೆ ಮನೆಯಲ್ಲಿ ಅಡುಗೆ ರುಚಿಯಾಗಿ ಶುಚಿಯಾಗಿ ಮಾಡಲು ಬಯಸುವವರು ಬಣ್ಣವನ್ನು ಬಳಕೆ ಮಾಡುವುದೇ ಇಲ್ಲ.

ಬದಲಿಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಚಿಕನ್‌ ಕಲರ್‌ಫುಲ್ ಆಗಿ ತಯಾರಿಸಬಹುದು. ಹಾಗಾದರೆ ಬಣ್ಣವಿಲ್ಲದೇ ಚಿಕನ್ ಕಲರ್‌ಫುಲ್ಲಾಗಿ ತಯಾರಿಸುವುದು ಹೇಗೆ? ಮನೆಯಲ್ಲಿರುವ ಯಾವೆಲ್ಲಾ ಪದಾರ್ಥಗಳನ್ನು ಬಳಸಿದರೆ ಯಾವ ಕಲರ್ ಬರುತ್ತೆ ಅನ್ನೋದನ್ನು ಈಗ ತಿಳಿಯೋಣ.

Colorless Chicken Kebab Recipe How to make Chicken Kebab without using colour in Kannada

ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಮತ್ಯಾಕೆ ತಡ ಚಿಕನ್ ಕಬಾಬ್ ಬಣ್ಣವನ್ನು ಬಳಸದೇ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಕಲರ್‌ಫುಲ್ ಆಗಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಚಿಕನ್ ಕಬಾಬ್:

* ಚಿಕನ್ ಒಂದು ಕೆಜಿ

* ಕಾರ್ನ್‌ ಫ್ಲೋರ್ ಒಂದು ಕಪ್

* ಅಕ್ಕಿ ಹಿಟ್ಟು ಅರ್ಧ ಟೇಬಲ್ ಸ್ಪೂನ್

* ಕಡ್ಲೆ ಬೇಳೆ ಹಿಟ್ಟು ಅರ್ಧ ಟೇಬಲ್ ಸ್ಪೂನ್

* ಕೆಂಪು ಮೆಣಸಿನಕಾಯಿ 5

* ಟೊಮೆಟೋ ಒಂದು

* ಖಾರದ ಪುಡಿ ಒಂದು ಚಮಚ

* ಉಪ್ಪು

* ಪೆಪ್ಪರ್ ಪೌಡರ್

*ಎಣ್ಣೆ

* ನಿಂಬೆಹಣ್ಣು

* ಕರಿಬೇವು

* ಹಸಿ ಮೆಣಸಿನಕಾಯಿ 5

* ಪುದೀನಾ ಸ್ವಲ್ಪ

* ಪಾಲಕ್ ಸೊಪ್ಪು ಸ್ವಲ್ಪ

ಚಿಕನ್ ಕಬಾಬ್ ತಯಾರಿಸುವ ವಿಧಾನ:

* ಚಿಕನ್ ಅನ್ನು ಚಿಕ್ಕ ಚಿಕ್ಕ ಪೀಸ್ ಮಾಡಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ, ನಂತರ ಎರಡು ಪಾತ್ರೆಯಲ್ಲಿ ಅರ್ಧದಷ್ಟು ಪ್ರತ್ಯೇಕವಾಗಿ ಇರಿಸಿ.

* ನಂತರ ಎರಡು ಪಾತ್ರೆಯಲ್ಲಿ ಇರಿಸಿದ ಚಿಕನ್ ಪೀಸ್‌ಗಳಿಗೆ ಉಪ್ಪು, ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಮಿಚ್ಚಿಡಿ.

Colorless Chicken Kebab Recipe How to make Chicken Kebab without using colour in Kannada

* ಬಳಿಕ ಒಂದು ಚಿಕನ್ ಭಾಗಕ್ಕೆ ಕಾರ್ನ್‌ ಫ್ಲೋರ್, ಅಕ್ಕಿ ಹಿಟ್ಟು, ಕಡ್ಲೆ ಬೇಳೆ ಹಿಟ್ಟು, ರುಬ್ಬಿದ ಕೆಂಪು ಮೆಣಸಿನಕಾಯಿ ಹಾಗೂ ಟೊಮೆಟೋ ಪೇಸ್ಟ್, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಪೆಪ್ಪರ್ ಪೌಡರ್ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಬಿಡಿ.

*ಇನ್ನೊಂದು ಪಾತ್ರೆಯಲ್ಲಿ ಇರುವ ಚಿಕನ್ ತುಂಡುಗಳಿಗೆ ಕಾರ್ನ್‌ ಫ್ಲೋರ್, ಅಕ್ಕಿ ಹಿಟ್ಟು, ಕಡ್ಲೆ ಬೇಳೆ ಹಿಟ್ಟು, ರುಬ್ಬಿದ ಹಸಿ ಮೆಣಸಿನಕಾಯಿ, ಸ್ವಲ್ಪ ಪುದೀನಾ, ಸ್ವಲ್ ಪಾಲಕ್ ಸೊಪ್ಪು ಹಾಕಿ ಮಿಕ್ಸ್ ಮಾಡಿ.

* ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಕಡಿಮೆ ಉರಿಯಲ್ಲಿ ಚಿಕನ್ ತುಂಡುಗಳನ್ನು ಹಾಕಿ ಡೀಪ್ ಫ್ರೈ ಮಾಡಿ.

* ಚಿಕನ್ ಚೆನ್ನಾಗಿ ಬೆಂದ ಬಳಿಕ ಎಣ್ಣೆಯಿಂದ ತೆಗೆದು, ಆ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಅದನ್ನು ಹುರಿದು ಚಿಕನ್ ಕಬಾಬ್ ಜೊತೆಗೆ ಮಿಕ್ಸ್ ಮಾಡಿದರೆ ರುಚಿಕರವಾದ ಕಲರ್‌ಫುಲ್ ಕಬಾಬ್ ರೆಡಿಯಾಗುತ್ತದೆ.

ಹೀಗೆ ಮನೆಯಲ್ಲಿ ಕೆಂಪು ಹಾಗೂ ಹಸಿರು ಬಣ್ಣದಲ್ಲಿ ರುಚಿಕರವಾದ ಕಬಾಬ್ ಅನ್ನು ತಯಾರಿಸಬಹುದು. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+