Black Ivory Coffee: ಕಾಫಿ ಪ್ರಿಯರೇ ಆನೆ ಲದ್ದಿ ಕಾಫಿ ಕುಡಿದಿದ್ದೀರಾ? ಇಲ್ಲಿದೆ ಮಾಹಿತಿ...
ನೀವೆಲ್ಲಾ ಕಾಫಿ ಬೀಜದಿಂದ ತಾಯಾರಾದ ದುಬಾರಿ ಕಾಫಿ ಕುಡಿದಿರುತ್ತೀರಿ. ಅಮ್ಮಮ್ಮಾ ಅಂದರೆ ಅದರ ಬೆಲೆ 100 ರಿಂದ 500 ರೂಪಾಯಿ ಇರಬಹುದು. ಇದಕ್ಕೂ ಹೆಚ್ಚು ಅಂದರೆ 1000 ರೂಪಾಯಿವರೆಗೂ ಇರಬಹುದೆನೋ. ಆದರೆ ನೀವು ಎಂದಾದರೂ ಎರಡುವರೆ ಲಕ್ಷ ರೂಪಾಯಿಯ ಕಾಫಿಯನ್ನ ಕುಡಿದಿದ್ದೀರಾ? ಕುಡಿದಿರಲು ಸಾಧ್ಯವೇ ಇಲ್ಲ ಬಿಡಿ. ಯಾಕೆಂದರೆ ಇದು ಆನೆ ಲದ್ದಿಯಿಂದ ತಯಾರಾಗುವ ಕಾಫಿ.
ಆನೆ ಲದ್ದಿ ಅಂದ ತಕ್ಷಣ ಕೆಲವರು ಮುಖವನ್ನು ತಿರುಗಿಸಿ ವ್ಯಾ... ಅಂದಿರಬಹುದು. ಆದರೆ ಇದು ವಿಶ್ವದ ದುಬಾರಿ ಹಾಗೂ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಕಾಫಿ ಆಗಿದೆ. ಹೌದು... ಬಹುಶ: ನೀವು ಆನೆ ಲದ್ದಿಯಿಂದ ತಯಾರಾಗುವ ಕಾಫಿಯನ್ನು ಕುಡಿದಿರುವುದಿರಲಿ ಅದನ್ನು ನೋಡಿರಲು ಕೂಡ ಸಾಧ್ಯವಿಲ್ಲ. ಹಾಗಾದರೆ ಏನಿದು ಆನೆ ಲದ್ದಿ ಕಾಫಿ ಅನ್ನೋದನ್ನು ತಿಳಿಯೋಣ.

ಸಾಮಾನ್ಯವಾಗಿ ರುಚಿಗೆ ಹಾಗೂ ಅದರಿಂದಾಗುವ ಪ್ರಯೋಜನದಿಂದಾಗಿ ನೀವು ಇಂಥಹದ್ದೇ ಕಾಫಿಯನ್ನು ಆಯ್ಕೆ ಮಾಡಿ ಕುಡಿದಿರಬಹುದು. ಆದರೆ ಇಂದು ನಾವು ನಿಮಗೆ ಒಂದು ವಿಶಿಷ್ಟ ಹಾಗೂ ವಿಶೇಷವಾದ ಕಾಫಿ ಬಗ್ಗೆ ಹೇಳಲು ಹೊರಟಿದ್ದೇವೆ. ಅದುವೇ ಆನೆ ಲದ್ದಿಯಿಂದ ತಯಾರಾಗುವ ಕಾಫಿ..
ಆನೆ ಲದ್ದಿ ಕಾಫಿ ಪೌಡರ್ ಎಲ್ಲಿ ತಯಾರಾಗುತ್ತೆ...?
ಆನೆ ಲದ್ದಿ ಕಾಫಿಗೆ ವಿಶ್ವದಾದ್ಯಂತ ಎಲ್ಲಿಲ್ಲದ ಬೇಡಿಕೆ ಇದೆ. ಇದು ದುಬಾರಿ ಕೂಡ ಹೌದು. ಆನೆ ಲದ್ದಿಯಿಂದ ತಯಾರಾಗುವ ಕಾಫಿ ಹೆಸರು ಬ್ಲಾಕ್ ಐವರಿ ಕಾಫಿ (Black Ivory Coffee). ಈ ಬ್ಲಾಕ್ ಐವರಿ ಕಾಫಿಯನ್ನು ಬ್ಲೇಕ್ ಡಿಕ್ಕಿನ್ ಅನ್ನೋರು ಕಂಡು ಹಿಡಿದಿದ್ದಾರೆ. ಇವರು ಮೊದಲು ಉತ್ತರ ಥೈಲಾಂಡ್‌ನ ಚಿಯಾಂಗ್ ಸೇನ್ ನಲ್ಲಿ ಆನೆಗಳಿಗೆ ಅರೇಬಿಕಾ ಕಾಫಿ ಬೀಜಗಳನ್ನು ತಿನ್ನಿಸಿದರು. ನಂತರ ಈ ಒಂದು ಕಾಫಿಯನ್ನು ಕಂಡು ಹಿಡಿದರು. ಬಳಿಕ ಇದನ್ನು ವಿಶ್ವಕ್ಕೆ ಪರಿಚರಿಸಿದ್ದಾರೆ. ಇದು ಈಗ ವಿಶ್ವದೆಲ್ಲೆಡೆ ತುಂಬಾ ದುಬಾರಿಯಾದ ಕಾಫಿ ಆಗಿ ಪ್ರಖ್ಯಾತಿಯನ್ನು ಪಡೆದಿದೆ.

ಇಲ್ಲಿನ ಆನೆಗಳಿಗೆ ಮೊದಲು 30 ಕೆಜಿ ಕಾಫಿ ಬೀಜಗಳನ್ನು ತಿನ್ನಿಸಲಾಗುತ್ತದೆ. ಇದು ನಂತರ ಲದ್ದಿಯಾಗಿ ಆಚೆ ಬರುತ್ತೆ. ಬಳಿಕ ಲದ್ದಿಯಲ್ಲಿರುವ ಕಾಫಿ ಬೀಜವನ್ನು ಸಂಗ್ರಹ ಮಾಡಿ, ಇದರಿಂದ ದುಬಾರಿ ಕಾಫಿ ಪೌಡರ್ ತಯಾರಿಸಲಾಗುತ್ತದೆ. ನಂತರ ಇದನ್ನು ಹಾಲಿಗೆ ಬೆರಸಿ ನೀಡಲಾಗುತ್ತದೆ. ಇದರಲ್ಲಿ ವಿಟಮಿನ್ ಹಾಗೂ ಪ್ರೋಟೀನ್ ಇರುವುದರಿಂದ ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇನ್ನೂ ಒಂದು ಕೆಜಿ ಕಾಫಿ ಪೌಡರ್‌ಗೆ ಬರೋಬ್ಬರಿ ಎರಡುವರೆ ಲಕ್ಷ ರೂಪಾಯಿ ಬೆಲೆ ಇದೆ. ಇದನ್ನು ಶ್ರೀಮಂತ ಜನರು ಮಾತ್ರ ಹೆಚ್ಚಾಗಿ ಸೇವಿಸುತ್ತಾರೆ.
ಆನೆ ಲದ್ದಿಯಿಮದ ಇದೆಲ್ಲವೂ ತಯಾರಿಸಲಾಗುತ್ತೆ....
ಬ್ಲ್ಯಾಕ್ ಐವರಿ ಕಾಫಿಯು ಪ್ರಪಂಚದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾಗಿದ್ದು ಈ ಕಾಫಿ ಪುಡಿಯನ್ನು ಆಯ್ದ ಐಷಾರಾಮಿ ಹೋಟೆಲ್‌ಗಳಿಗೆ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಆನೆ ಲದ್ದಿಯಿಂದ ಕಾಫಿ ಮಾತ್ರವಲ್ಲದೆ ಬಿಯರ್ ಕೂಡ ತಯಾರಿಸಲಾಗುತ್ತದೆ. ಜಪಾನ್ ದೇಶದಲ್ಲಿ ಕೆಲವು ಬಿಯರ್ ತಯಾರು ಮಾಡಲು ಕಂಪನಿಗಳು ಆನೆ ಲದ್ದಿ ಮತ್ತು ಕಾಫಿ ಬೀಜವನ್ನು ಬಳಕೆ ಮಾಡಿ ಬಿಯರ್ ತಯಾರು ಮಾಡುತ್ತಾರೆ. ಅದನ್ನು 'ಉನ್ ಕೊನೋ ಕುರೋ' ಎಂದು ಕರೆಯಲಾಗುತ್ತದೆ.

ಇದಲ್ಲದೆ ಆನೆ ಲದ್ದಿಯಿಂದ ಸಾಕಷ್ಟು ಪ್ರಯೋಜನಗಳು ಇವೆ. ಆನೆ ಲದ್ದಿಯನ್ನು ರಸ್ತೆ ಗುಂಡಿ ಮುಚ್ಚಲು ಬಳಕೆ ಮಾಡಲಾಗುತ್ತದೆ. ಕಾಗದ ತಯಾರಿಸಲು ಬಳಕೆ ಮಾಡಲಾಗುತ್ತದೆ. ಅಲ್ಲದೆ ಗೊಬ್ಬರ ತಯಾರಿ, ಅಡುಗೆ ಮನೆಯಲ್ಲಿ ಕಟ್ಟಿಗೆಯಾಗಿ, ಸೊಳ್ಳೆ ನಿರೊಧಕವಾಗಿಯೂ ಆನೆ ಲದ್ದಿಯನ್ನು ಬಳಕೆ ಮಾಡಲಾಗುತ್ತದೆ.
ಅಲ್ಲದೆ ಈ ಆನೆ ಲದ್ದಿ ಕಾಫಿ ಪೌಡರ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಕೂಡ ಮಾಡಬಹುದು. ನೀವೇನಾದ್ರು ಕಾಫಿ ಪ್ರಿಯರಾಗಿದ್ದರೆ, ವಿಭಿನ್ನ ಕಾಫಿಯ ರಚಿ ನೋಡಬೇಕು ಅಂದುಕೊಂಡಿದ್ದರೆ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವನನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.












Click it and Unblock the Notifications