ಈ ಎಣ್ಣೆಯನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ಸೊಂಪಾಗಿ ಬೆಳೆಯುವುದು ಕೂದಲು
ಅಂದವಾಗಿ ಕಾಣಿಸಲು ಮೇಕಪ್ ಎಷ್ಟು ಮುಖ್ಯವೋ ಕೂದಲು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ.ಹಾಗಾಗಿ ಮುಖ ಸೌಂದರ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಕೂದಲಿಗೂ ನೀಡಬೇಕು. ಅದು ಕೂದಲಿನ ಬೆಳವಣಿಗೆಯಾಗಿರಬಹುದು, ಕೂದಲ ಬಣ್ಣ ಇರಬಹುದು, ಟೆಕ್ಚರ್ ಆಗಿರಬಹುದು. ಕೂದಲು ಎಷ್ಟು ಆರೋಗ್ಯವಾಗಿರುತ್ತದೆಯೋ ಅಷ್ಟು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಹೆಣ್ಣು ಮಕ್ಕಳು ಕೂದಲ ಆರೋಗ್ಯದ ಕಡೆಗೆ ವಿಶೇಷ ಒತ್ತು ನೀಡುತ್ತಾರೆ.ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಮೊರೆ ಹೋಗುತ್ತಾರೆ. ಇದರ ಬದಲು ಸರಿಯಾದ ಎಣ್ಣೆಯನ್ನು ಆರಿಸಿ, ಸೂಕ್ತವಾದ ರೀತಿಯಲ್ಲಿ ಬಳಸಿದರೆ ಕೂದಲು ಸೊಂಪಾಗಿ ಬೆಳೆಯುವುದರ ಜೊತೆಗೆ ಕೇಶದ ಅನೇಕ ಸಮಸ್ಯೆಗಳು ಕೂಡಾ ನಿವಾರಣೆಯಾಗುವುದು.
ಕೆಲವರು ಕೂದಲಿಗೆ ತೆಂಗಿನ ಎಣ್ಣೆ ಬಳಸಿದರೆ, ಇನ್ನು ಕೆಲವರು ಸಾಸಿವೆ ಎಣ್ಣೆ ಬಳಸುತ್ತಾರೆ.ಆದರೆ, ನಿಜವಾಗಿಯೂ ಕೂದಲ ಆರೋಗ್ಯಕ್ಕೆ ಯಾವ ಎಣ್ಣೆ ಉತ್ತಮ? ಅಥವಾ, ಯಾವ ಎಣ್ಣೆ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡಬಹುದು? ಯಾವ ಎಣ್ಣೆಯ ಗುಣಲಕ್ಷಣಗಳು ಯಾವುವು? ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ಇಲ್ಲಿ ನಾವು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ ಕೂದಲಿಗೆ ಬಳಸುವ ಎಣ್ಣೆಯ ಬಗ್ಗೆ ವಿವರವಾದ ಮಾಹಿತಿ ನೀಡುತ್ತಿದ್ದೇವೆ.

ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯನ್ನು ತೆಂಗಿನ ಕಾಯಿ ಅಥವಾ ಕೊಬ್ಬರಿಯಿಂದ ತಯಾರಿಸಲಾಗುತ್ತದೆ. ತೆಂಗಿನ ಎಣ್ಣೆಯನ್ನು ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಅಡುಗೆಗೂ ಬಳಸಲಾಗುತ್ತದೆ. ಇದು ಭಾರತ, ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿಯೂ ಅತ್ಯಂತ ಜನಪ್ರಿಯವಾಗಿದೆ.
ಕೂದಲಿನ ಮೇಲೆ ತೆಂಗಿನ ಎಣ್ಣೆಯ ಪರಿಣಾಮ:
ತೆಂಗಿನ ಎಣ್ಣೆಯು ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಆಗಿ ಕೆಲಸ ಮಾಡುತ್ತದೆ. ಇದು ಕೂದಲಿನ ಬುಡದ ಮೇಲೆ ಪದರವನ್ನು ರೂಪಿಸುವ ಎಮೋಲಿಯಂಟ್‌ಗಳನ್ನು ಹೊಂದಿರುತ್ತದೆ. ಇದು ಹೊರಪೊರೆಯನ್ನು ಮುಚ್ಚುತ್ತದೆ ಮತ್ತು ಮಾಯಿಶ್ಚರ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ.ಇದರಿಂದ ಕೂದಲು ರೇಷ್ಮೆಯಂತೆ ಮೃದುವಾಗುತ್ತದೆ.ಈ ನಯವಾದ ಕೂದಲು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇದು ಕೂದಲಿನ ಆರೋಗ್ಯ ಮತ್ತು ಅಂದ ಎರಡನ್ನೂ ಹೆಚ್ಚಿಸುತ್ತದೆ.ತೆಂಗಿನ ಎಣ್ಣೆ ಕೂದಲಿಗೆ ಬೇಕಾದ ಪ್ರೋಟೀನ್ ಅನ್ನು ಒದಗಿಸುತ್ತದೆ.ಹಾಗಾಗಿ ಕೂದಲು ಬೇರಿನಿಂದಲೇ ಗಟ್ಟಿಯಾಗಿರುತ್ತದೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಕೂದಲಿಗೆ ಬಾದಾಮಿ ಎಣ್ಣೆ:
ಅಧ್ಯಯನಗಳ ಪ್ರಕಾರ, ಬಾದಾಮಿ ಎಣ್ಣೆಯನ್ನು ಬಾದಾಮಿಯಿಂದ ತಯಾರಿಸಲಾಗುತ್ತದೆ.ಬಾದಾಮಿಯನ್ನು ಪ್ರುನಸ್ ಅಮಿಗ್ಡಾಲಸ್ ಎಂಬ ಸಸ್ಯದಿಂದ ಪಡೆಯಲಾಗುತ್ತದೆ.ಆಯುರ್ವೇದದ ಪ್ರಕಾರ ಈ ಎಣ್ಣೆಯು ಕಾಮೋತ್ತೇಜಕ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು, ಮೊನೋ ಸ್ಯಾಚ್ಯುರೇಟೆಡ್‌ಫಾಟಿ ಆಯಿಲ್, ಪಾಲಿ ಅನ್‌ಸ್ಯಾಚ್ಯುರೆಟೆಡ್ ಫ್ಯಾಟಿ ಆಯಿಲ್ , ಲಿನೋಲಿಕ್ ಆಸಿಡ್ , ಮತ್ತು ಫೋಲಿಕ್ ಆಸಿಡ್ ಜೊತೆಗೆ ಸ್ಟಿಯರಿಕ್ ಆಸಿಡ್ ಮತ್ತು ಪಾಲ್ಮಿಟಿಕ್ ಆಸಿಡ್ ಅನ್ನು ಹೊಂದಿದೆ. ಬಾದಾಮಿ ಎಣ್ಣೆ ವಿಟಮಿನ್ ಇ ಯ ಸಮೃದ್ಧ ಮೂಲವಾಗಿದೆ.
ಅಧ್ಯಯನಗಳ ಪ್ರಕಾರ, ಇದು ಹಾನಿಕಾರಕ UV ಕಿರಣಗಳಿಂದ ಕೂದಲು ಹಾನಿಯಾಗದಂತೆ ರಕ್ಷಿಸುತ್ತದೆ. ಬಾದಾಮಿ ಎಣ್ಣೆಯಲ್ಲಿರುವ ಫ್ಯಾಟಿ ಅಸಿಡ್ ಯುವಿ ವಿಕಿರಣದಿಂದ ಉಂಟಾಗುವ ಹಾನಿಯಿಂದ ರಕ್ಷಣೆ ನೀಡುತ್ತದೆ. ಈ ಎಣ್ಣೆಯಲ್ಲಿರುವ ಎಮೊಲಿಯೆಂಟ್ಸ್ ಒಣ ಕೂದಲನ್ನು ಮೃದುಗೊಳಿಸುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications