ಮುಟ್ಟಿನ ಸಮಯದಲ್ಲಿ ಅನಾನಸ್ ಜ್ಯೂಸ್ ಕುಡಿಯುವುದರಿಂದ ಇದೆ ಇಷ್ಟೆಲ್ಲ ಪ್ರಯೋಜನಗಳು!
ಮುಟ್ಟಿನ ಸಮಯದಲ್ಲಿ ಮಹಿಳೆಯರು ಸೇವಿಸುವ ಆಹಾರವು ಕೂಡ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಮಹಿಳೆಯರು ದೇಹಕ್ಕೆ ತಂಪು ನೀಡುವ ಆಹಾರಗಳನ್ನು ಸೇವಿಸಬೇಕು. ಜೀರಿಗೆ, ಮಂತ್ಯೆ ಕಷಾಯಗಳನ್ನು ಹೆಚ್ಚಾಗಿ ಕುಡಿಯಬೇಕು ಜೊತೆಗೆ ಹಣ್ಣಿನ ಜ್ಯೂಸ್‌ಗಳನ್ನು ಕುಡಿಯುವುದು ಕೂಡ ಮುಖ್ಯ. ರಕ್ತಸ್ರಾವ ಹಾಗೂ ಇತರ ದೈಹಿಕ ನೋವುಗಳಿಂದ ಈ ಸಮಯದಲ್ಲಿ ಮಹಿಳೆಯರಿಗೆ ಸುಸ್ತು ಹೆಚ್ಚಾಗುತ್ತದೆ. ಹೀಗಾಗಿ ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸಬೇಕು.
ಮುಟ್ಟಿನ ಸಮಯದಲ್ಲಿ ಅನಾನಸ್ ಅಥವಾ ಪರಂಗಿ ಹಣ್ಣುಗಳನ್ನು ಸೇವಿಸುವುದು ತಪ್ಪೋ ಸರಿಯೋ ಎನ್ನುವ ಗೊಂದಲ ಹಲವು ಹೆಣ್ಣು ಮಕ್ಕಳಲ್ಲಿದೆ. ಇದಕ್ಕೆ ಸೂಕ್ತವಾದ ಉತ್ತರ ಇಲ್ಲಿದೆ. ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ಅನಾನಸ್ ಜ್ಯೂಸ್ ಉತ್ತಮ ಆಯ್ಕೆಯಾಗಿದೆ. ಅನಾನಸ್ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6 ಮತ್ತು ಮ್ಯಾಂಗನೀಸ್‌ನಂತಹ ಅಗತ್ಯವಾದ ಜೀವಸತ್ವಗಳಿದ್ದು, ಖನಿಜಾಂಶವು ಕೂಡ ಈ ಹಣ್ಣಿನಲ್ಲಿ ಸಮೃದ್ಧವಾಗಿದೆ. ಇದರಿಂದ ಇದು ನಿಮ್ಮ ದೇಹ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ಅನಾನಸ್ ಜ್ಯೂಸ್‌ನ ಪ್ರಯೋಜನಗಳೇನು..?
ಅನಾನಸ್ ಜ್ಯೂಸ್‌ನಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಉತ್ತಮವಾಗಿರುತ್ತದೆ. ಇದು ಮುಟ್ಟಿನ ಸೆಳೆತ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಅನಾನಸ್ ಜ್ಯೂಸ್‌ನಲ್ಲಿರುವ ವಿಟಮಿನ್ ಸಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಮಹಿಳೆಯನ್ನು ಅತಿಯಾಗಿ ಕಾಡುವ ಪಿಎಮ್‌ಎಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅನಾನಸ್ ಜ್ಯೂಸ್‌ನಲ್ಲಿ ಬ್ರೋಮೆಲೈನ್‌ನಲ್ಲಿ ಸಮೃದ್ಧವಾಗಿದೆ. ಇದು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕಾಡುವ ಸೆಳೆತದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅನಾನಸ್ ಜ್ಯೂಸ್ ಮುಟ್ಟಿನ ರಕ್ತ ಸ್ರಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಹಣ್ಣಿನಲ್ಲಿನ ಬ್ರೋಮೆಲಿನ್ ಕಿಣ್ವವು ರಕ್ತದಲ್ಲಿನ ಪ್ರೋಟೀನ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಇದು ಮುಟ್ಟಿನ ಸಮಯದಲ್ಲಿ ರಕ್ತ ಸ್ರಾವವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಹಿಳೆಯರಿಗೆ ಸುಸ್ತು ಕಡಿಮೆಯಾಗುತ್ತದೆ.

ಅನಾನಸ್ ಜ್ಯೂಸ್‌ನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಇದು ಮಹಿಳೆಯರಿಗೆ ಅವರ ಋತುಚಕ್ರದ ಸಮಯದಲ್ಲಿ ಅತ್ಯಗತ್ಯವಾಗಿರುತ್ತದೆ. ಒಂದು ವೇಳೆ ಕಬ್ಬಿಣಾಂಶ ಕಡಿಮೆಯಾದರೆ ರಕ್ತಹೀನತೆಗೆ ಕಾರಣವಾಗುತ್ತದೆ. ಹೀಗಾಗಿ ಅನಾನಸ್ ಜ್ಯೂಸ್ ಕುಡಿಯುವುದು ಉತ್ತಮ.
ಅನಾನಸ್ ಜ್ಯೂಸ್ ಮಹಿಳೆಯರ ಶಕ್ತಿ ಹೆಚ್ಚಿಸುತ್ತದೆ ಹಾಗೂ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಜ್ಯೂಸ್ ಮೂತ್ರನಾಳದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮುಟ್ಟಿನ ಸಮಯದಲ್ಲಿ ಯೀಸ್ಟ್ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಅನಾನಸ್ ಜ್ಯೂಸ್ ಸಹಾಯ ಮಾಡುತ್ತದೆ. ಅನಾನಸ್ ಜ್ಯೂಸ್ ಪಿರಿಯಡ್ಸ್ ಸಮಯದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನಾನಸ್‌ನಲ್ಲಿನ ಹೆಚ್ಚಿನ ಫೈಬರ್ ಅಂಶವು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಮಾನಸಿಕ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ದೇಹಕ್ಕೆ ನೀರಿನಾಂಶದ ಅಗತ್ಯ ಹೆಚ್ಚಿರುತ್ತದೆ. ಅನಾನಸ್ ಜ್ಯೂಸ್‌ನಲ್ಲಿರುವ ಹೆಚ್ಚಿನ ನೀರಿನ ಅಂಶವು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮುಟ್ಟಿನ ಅವಧಿ ಪ್ರಾರಂಭವಾಗುವ ಕನಿಷ್ಠ ಒಂದು ವಾರದ ಮೊದಲು ಅನಾನಸ್ ಜ್ಯೂಸ್ ಕುಡಿಯಲು ಪ್ರಾರಂಭಿಸಿ ಮತ್ತು ಮುಟ್ಟಿನ ಅವಧಿ ಮುಗಿಯುವವರೆಗೆ ಅದನ್ನು ಕುಡಿಯುವುದರಿಂದ ಈ ಸಮಯದಲ್ಲಿ ಸಂಭಿಸುವ ಅನೇಕ ಸಮಸ್ಯೆಗಳಿಂದ ದೂರ ಇರಬಹುದು.












Click it and Unblock the Notifications