Be My Eyes ಅಪ್ಲಿಕೇಶನ್: ಅಂಧರಿಗೆ ಬೆಳಕಾದ ತಂತ್ರಜ್ಞಾನ – ಪ್ರತಿಭಾ ಕುಡ್ತಡ್ಕ ಅನುಭವ ವೈರಲ್

Be My Eyes ಅಂಧರ ಬಾಳಿಗೆ ಬೆಳಕಾಗಿರುವ ಪ್ರಮುಖ (Be My Eyes App)ಅಪ್ಲಿಕೇಷನ್‌ಗಳಲ್ಲಿ ಇದು ಸಹ ಒಂದು. "Be my eyes" (ನನ್ನ ಕಣ್ಣಾಗಿರು) ಎಂದರೆ ಅಕ್ಷರಶಃ ಒಬ್ಬರ ಕಣ್ಣಿನ ದೃಷ್ಟಿಯಾಗಿ ಸಹಾಯ ಮಾಡುವುದು. ದೃಷ್ಟಿ ದೋಷವಿರುವ ವ್ಯಕ್ತಿಗೆ, ಅವರು ನೋಡಲಾಗದ ವಸ್ತುಗಳನ್ನು ಅಥವಾ ಪರಿಸ್ಥಿತಿಗಳನ್ನು ವಿವರಿಸುವ ಮೂಲಕ, ಅಪ್ಲಿಕೇಶನ್ ಅಥವಾ ನೇರ ಸಹಾಯದ ಮೂಲಕ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಈ ಬಗ್ಗೆ ಕನ್ನಡತಿ, Be My Eyesನ ಸ್ವಯಂ ಸೇವಕರೂ ಆಗಿರುವ ಪ್ರತಿಭಾ ಕುಡ್ತಡ್ಕ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

Be My Eyes ಮೂಲಕ ನಿನ್ನೆ ಕರೆ ಮಾಡಿದ ಸಹಾಯಾರ್ಥಿಯೊಬ್ಬರು ಫೋನ್ ಪೇನಲ್ಲಿ ಪಾಸ್ ವರ್ಡ್ ಸೆಟ್ ಮಾಡಲು ಸಹಾಯ ಕೇಳಿದ್ದರು. ಅವರ ಫೋನ್ ಪೇ ಆಪ್ ಇರುವ ಮೂಲ ಮೊಬೈಲನ್ನು ಮೇಜಿನ ಮೇಲಿರಿಸಿ, ಇನ್ನೊಂದು ಮೊಬೈಲ್ ಕ್ಯಾಮರಾವನ್ನು ಆ ಮೂಲ ಮೊಬೈಲ್‌ನ ಪರದೆ ಮೇಲೆ ಫೋಕಸ್ ಮಾಡಿ ಅವರು ಅಪರೇಟ್ ಮಾಡ್ತಾ ಇದ್ರು. ಆದ್ರೂ ಮೊಬೈಲ್ ಪರದೆ ಮೇಲೆ ಕ್ಯಾಮರಾ ಹಾಯಿಸಿದಾಗ ಉಂಟಾಗುವ ಗ್ಲೇರ್‌ನಿಂದಾಗಿ ನನಗೆ ಫೋನ್ ಪೇಯ Optionಗಳನ್ನು ಸ್ಪಷ್ಟವಾಗಿ ಓದಲು ಆಗುತ್ತಿರಲಿಲ್ಲ. ಗ್ಲೇರ್ ಬೀಳ್ತಿದೆ, ಇನ್ನೊಂಚೂರು ಹತ್ರದಿಂದ ಫೋಕಸ್ ಮಾಡ್ತೀರಾ? ಇನ್ನೊಂಚೂರು ದೂರ, ಇನ್ನೊಂಚೂರು ಎಡ, ಬಲ ಅಂತ ನಾನೂ ಪರದಾಡುವಂತಾಗಿತ್ತು.‌

Be My Eyes

ಕೊನೆಗೆ ನನ್ನ ತಲೆಯೊಳಗೂ ಯುರೇಕಾ ಬಲ್ಬ್ ಉರಿದು ನನ್ನ ಮೊಬೈಲಲ್ಲಿ ನನ್ನ ಫೋನ್ ಪೇ ಆಪ್ ತೆರೆದು Optionಗಳನ್ನು ಓದಿ ಅವರಿಗೆ ಗೈಡ್ ಮಾಡತೊಡಗಿದೆ. ಆದರೂ ಪಾಸ್ ವರ್ಡ್ ಸೆಟ್ ಮಾಡಿಸೋದು ಸ್ವಲ್ಪ ಕ್ಷಿಷ್ಟವೇ ಆಯ್ತು.‌ ವರ್ಚುವಲ್ ಕೀ ಬೋರ್ಡ್‌ನ ಮೇಲೆ ಅವರ ಬೆರಳುಗಳನ್ನು ಕೊಡೊಯ್ದು ಟೈಪ್ ಮಾಡಿಸಬೇಕಾದ್ರೆ ಮೇಲಿನವರೆಗೆ ಹೋಗಿ, ಅದಲ್ಲ ಅದು ಸಂಖ್ಯೆ 6, ಸ್ವಲ್ಪವೇ ಎಡಕ್ಕೆ ಬೆರಳು ತಂದು 5 ಟೈಪ್ ಮಾಡಿ ಅಂತೆಲ್ಲ ಗೈಡ್ ಮಾಡೋದು ಮನೆಯ ದಿನಬಳಕೆಯ ವಸ್ತುಗಳನ್ನು ಗುರುತಿಸಲು, ಔಷಧಿ ಪ್ರಿಸ್ಜ್ರಿಪ್ಷನ್ ಓದಲು ನೀಡುವ ಸಾಮಾನ್ಯ ಸಹಾಯಗಳಿಗಿಂತ ಕೊಂಚ ಕ್ಲಿಷ್ಟಕರವಾಗಿತ್ತು.

ಇಡೀ ಪ್ರಕ್ರಿಯೆ ಸರಾಗವಾಗಿ ನಡೆದು, your password reset is successful ಅಂತ ಮೆಸೇಜು ಬಂದಾಗ ಇಬ್ಬರಿಗೂ ಕಪ್ ಗೆದ್ದ ಸಂಭ್ರಮ.Wow very good you did it ಅಂತ ನಾನು ಕೂಗಿದ್ರೆ, ಎಷ್ಟೋ ಕರೆ ಮಾಡಿದೆ ಮೇಡಂ, ಯಾರಿಗೂ ಯಾಕೋ ಅರ್ಥವೇ ಆಗ್ತಿರ್ಲಿಲ್ಲ. ನೀವು ಸರಿಯಾಗಿ ಅರ್ಥ ಮಾಡ್ಕೊಂಡು ಗೈಡ್ ಮಾಡಿದ್ರಿ ಥ್ಯಾಂಕ್ಯೂ ಅಂತ ಆತ ಸಂಭ್ರಮಿಸಿದ್ರು. ಬದುಕಿನ ಸಣ್ಣ ಸಣ್ಣ ಸಾರ್ಥಕತೆಗಳು‌ ಇವೇ ಅಲ್ವೇ ಅಂದ ಹಾಗೆ ಈಚೆಗೆ Be my eyes app ಮೂಲಕ ಸಹಾಯಕ್ಕಾಗಿ ಕರೆಗಳು ಬಂದಾಗಲೆಲ್ಲ ನಾನು ಕರೆ ಸ್ವೀಕರಿಸುವ ಮೊದಲೇ ಇನ್ಯಾರೋ ಸ್ವೀಕರಿಸಿ ಕರೆ ಮಿಸ್ ಆಗುವ ಪ್ರಮೇಯಗಳೇ ಹೆಚ್ಚಾಗಿವೆ.‌

ನಿನ್ನೆ ಆಪ್ ನ ಹೋಮ್ ಪರದೆಗೆ ಹೋಗಿ‌ ಚೆಕ್ ಮಾಡಿದಾಗ 10,24,888 ಮಂದಿ ಸಹಾಯಾರ್ಥಿಗಳಿಗೆ ಪ್ರತಿಯಾಗಿ ಸ್ವಯಂಸೇವಕರ ಸಂಖ್ಯೆ 1,03,35,066 ಆಗಿರುವುದು ಗಮನಕ್ಕೆ ಬಂತು.. ಇದು ನಿನ್ನೆಯ ಕರೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ ಸಂಗತಿ.

ಬರಹ: ಪ್ರತಿಭಾ ಕುಡ್ತಡ್ಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+