Kokum Fruit Benefits: ಕೋಕಂ ಹಣ್ಣಿ ಪ್ರಯೋಜನ ತಿಳಿದರೆ ದಿನಾ ತಿನ್ನಲು ಬಯಸುವಿರಿ..
ಕೋಕಂ ಅನ್ನು ಔಷಧೀಯ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ. ಇದು ಗೋವಾ ಮತ್ತು ಗುಜರಾತ್‌ನಲ್ಲಿ ಕಂಡುಬರುವ ಅತ್ಯಂತ ಪ್ರಯೋಜನಕಾರಿ ಹಣ್ಣು. ಇದನ್ನು ಅಡುಗೆಯಲ್ಲಿ, ಮಸಾಲೆಯಾಗಿ, ಔಷಧಿಯಾಗಿ ಮತ್ತು ಎಣ್ಣೆಯ ರೂಪದಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ.
ಈ ಕೋಕಂ ಜ್ಯೂಸ್ ಕೂಡ ತುಂಬಾ ರುಚಿಕರವಾಗಿರುತ್ತದೆ. ನೋಟದಲ್ಲಿ ಇದು ಸೇಬಿನಂತೆಯೇ ಕಂಡರೂ ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ.

ಕೋಕಂ ತಿನ್ನುವುದರಿಂದ ಏನು ಪ್ರಯೋಜನ?
1. ರೋಗನಿರೋಧಕ ಶಕ್ತಿಯಲ್ಲಿ ಬಲ
ಕೋಕಂ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಇದರರ್ಥ ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದೆ ಎಂದಾಗುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಕೋಕಂ ಅನ್ನು ಸೇರಿಸಿ. ಕೋಕಮ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮನ್ನು ರೋಗದಿಂದ ಸುರಕ್ಷಿತವಾಗಿರಿಸುತ್ತದೆ.
2. ಅತಿಸಾರದಲ್ಲಿ ಪ್ರಯೋಜನಕಾರಿ
ಭೇದಿ ಸಮಸ್ಯೆ ಇದ್ದರೂ ಕೋಕಂ ತಿಂದರೆ ತುಂಬಾ ಪ್ರಯೋಜನಕಾರಿ. ಅತಿಸಾರ-ವಿರೋಧಿ ಗುಣಲಕ್ಷಣಗಳು ಕೋಕಂನಲ್ಲಿ ಕಂಡುಬರುತ್ತವೆ. ಇದರಿಂದಾಗಿ ಇದು ಅತಿಸಾರಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಅತಿಸಾರದಿಂದ ಬಳಲುತ್ತಿರುವ ರೋಗಿಗೆ ಕೋಕಂ ಹಣ್ಣಿನ ರಸವನ್ನು ನೀಡಿ. ಇದರಿಂದ ಅತಿಸಾರದ ಸಮಸ್ಯೆ ದೂರವಾಗುತ್ತದೆ.
3. ತೂಕ ಇಳಿಕೆಗೆ ಸಹಕಾರಿ
ನಮ್ಮಲ್ಲಿ ತೂಕ ಹೆಚ್ಚಾಗುವ ಸಮಸ್ಯೆ ಹಲವಾರು ಜನರಲ್ಲಿ ಕಂಡು ಬರುತ್ತದೆ. ಇದಕ್ಕೆ ಕೋಕಮ್ ಒಂದೊಳ್ಳೆ ಪರಿಹಾರವಾಗಿದೆ. ಕೋಕಂ ತಿನ್ನುವುದರಿಂದ ಚಯಾಪಚಯವು ಹೆಚ್ಚಾಗುತ್ತದೆ. ಕೋಕಂ ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿದೆ. ಇದರಿಂದಾಗಿ ತೂಕವನ್ನು ಕಳೆದುಕೊಳ್ಳಲು ಕೋಕಂ ತಿನ್ನುವುದು ತುಂಬಾ ಉಪಯೋಗಕಾರಿ.

4. ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಕೋಕಂ ಜ್ಯೂಸ್ ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸಲು ಪ್ರಯೋಜನಕಾರಿಯಾಗಿದೆ. ಹೀಗಾಗಿ ನಿಯಮಿತವಾಗಿ ಕೋಮ್ ಜ್ಯೂಸ್ ಕುಡಿದರೆ ರಕ್ತ ಶುದ್ಧವಾಗಿರುತ್ತದೆ. ಜೊತೆಗೆ ಇದು ಉತ್ತಮ ಆರೋಗ್ಯಕರ ಪ್ರಯೋಜನವನ್ನು ನೀಡುತ್ತದೆ.
5. ಆರೋಗ್ಯಕರ ಹೃದಯಕ್ಕಾಗಿ ಕೋಕಂ
ಕೋಕಂ ಹಣ್ಣನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆಯಾಗುತ್ತವೆ. ವಾಸ್ತವವಾಗಿ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಕೋಕಂನಲ್ಲಿ ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
6. ಕಣ್ಣಿನ ಆರೋಗ್ಯ ಕಾಪಾಡುವ ಕೋಕಂ
ಕೋಕಂ ಹಣ್ಣು ತಿನ್ನುವುದರಿಂದ ಅಥವಾ ಅದರ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಬಿಸಿಲಲ್ಲಿ ಒಣಗಿಸಿದ ಕೋಕಂ ಹಣ್ಣನ್ನು ಏಷ್ಯಾದಾದ್ಯಂತ ಅಡುಗೆಗಳಲ್ಲಿ ರುಚಿ ಬರಲೆಂದು ಉಪಯೋಗಿಸುತ್ತಾರೆ. ಕೋಕಂ ಹಣ್ಣನ್ನು ನೆನೆಹಾಕಿದ ನೀರು ಕಡು ನೇರಳೆ ಬಣ್ಣಕ್ಕೆ ತಿರುಗಿ ಆಹಾರಕ್ಕೆ ಬಳಿಸಿದರೆ ಬಹಳ ಉಪಯೋಗಕ್ಕೆ ಬರುತ್ತದೆ. ಕೋಕಂ ಹಣ್ಣು ಶರಬತ್ತು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುವ ಒಂದು ಜ್ಯೂಸ್ ಆಗಿದ್ದು ಒಮ್ಮೆ ಕುಡಿಯಲೇಬೇಕು.

7. ಗ್ಯಾಸ್ಟ್ರಿಕ್ ಹುಣ್ಣುಗಳ ವಿರುದ್ಧ ಕೋಕಂಹಣ್ಣು
ಬದಲಾದ ಜೀವನಶೈಲಿಯಿಂದ ಪ್ರತಿಯೊಬ್ಬರೂ ಅನುಭವಿಸುತ್ತಿರುವ ಒಂದು ಸಾಮಾನ್ಯ ಕಾಯಿಲೆ ಎಂದರೆ ಅದು ಗ್ಯಾಸ್ ಟ್ರೀಟಿಸ್ ಅಥವಾ ಗ್ಯಾಸ್ಟ್ರಬಲ್. ಈ ಕಾಯಿಲೆ ನೋಡಲು ಮತ್ತು ಕೇಳಲು ಸಾಮಾನ್ಯವಾಗಿ ಮತ್ತು ಸರಳವಾಗಿ ಕಂಡರೂ ಇದರ ಪರಿಣಾಮ ಮಾತ್ರ ಬಹಳ ತೊಂದರೆದಾಯಕವಾಗಿದೆ. ಇದಕ್ಕೆ ಕೋಕಮ್ ಹಣ್ಣು ಪ್ರಯೋಜನಕಾರಿಯಾಗಿದೆ.
8.ತ್ವಚೆಯ ಸಮಸ್ಯೆಗಳಿಂದ ಮುಕ್ತಿ
ಕೋಕಂ ಹಣ್ಣು ಸೇವನೆ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ. ಆದರೆ ಇದಕ್ಕೆಲ್ಲಾ ಪರಿಹಾರವೆಂಬಂತೆ ಕೋಕಂ ಹಣ್ಣು ಎಲಾಸ್ಪೇಸ್ ಎಂಜೈಮ್‌ನ ಕಾರ್ಯವನ್ನು ತಡೆಗೊಳಿಸುತ್ತದೆ. ಇದರಿಂದ ಮನುಷ್ಯನ ದೇಹದ ಚರ್ಮ ತನ್ನ ನೈಜತೆಯನ್ನು ಕಾಪಾಡಿಕೊಳ್ಳುತ್ತದೆ. ಕೋಕಂ ಹಣ್ಣು ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿದ್ದು ದೇಹದ ಚರ್ಮಕ್ಕೆ ನಾನಾ ರೀತಿಯಲ್ಲಿ ಸಹಕಾರಿಯಾಗುತ್ತದೆ. ಅಲರ್ಜಿ ಕಲೆಗಳನ್ನೂ ಕೋಕಮ್ ದೂರ ಮಾಡುತ್ತದೆ.
9.ಹಲವಾರು ಕಾಯಿಲೆಗಳನ್ನು ಬಾರದಂತೆ ತಡೆಯುತ್ತದೆ
ದೇಹಕ್ಕೆ ಉಂಟಾಗುವ ನಿರಂತರ ಉರಿಯೂತದಿಂದ ದೇಹದ ಮೇಲೆ ಅನೇಕ ರೀತಿಯ ಕೆಟ್ಟ ಪರಿಣಾಮಗಳು ಬೀರುತ್ತವೆ. ಸಂಧಿವಾತ, ಕ್ಯಾನ್ಸರ್, ಡಯಾಬಿಟಿಸ್, ಹೃದ್ರೋಗ ಮತ್ತು ಅಲ್ಜಿಮರ್ ಕಾಯಿಲೆಗಳಿಗೆ ಕಾರಣವಾಗುತ್ತದೆ. ಕೋಕಂ ಹಣ್ಣು ತನ್ನ ಆಂಟಿ-ಇಂಪ್ಲಾಮ್ಯಾಟೋರಿ ಗುಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ.












Click it and Unblock the Notifications