Wedding Dresses: ಮದುವೆ ಸೀಸನ್ ಬಂತು: ಕಡಿಮೆ ಬೆಲೆಯಲ್ಲಿ ಮದುವೆ ಉಡುಪು ಹುಡುಕ್ತಾಯಿದಿರಾ? ಇಲ್ಲಿದೆ ನೋಡಿ....
ಮದುವೆ ಸೀಸರ್ ಬಂತು. ಮದುವೆ ಸೀಸನ್ ಅಂದರೆ ಸುಮ್ನೇನಾ...? ವಧು-ವರ ಮಾತ್ರವಲ್ಲದೆ ಬಂಧು ಬಳಗಕ್ಕೆಲ್ಲಾ ಹೊಸ ಹೊಸ ಬಟ್ಟೆ ಖರೀದಿ ಮಾಡಬೇಕು. ಮದುವೆ ಸಮಾರಂಭದಲ್ಲಿ ಬಹುತೇಕ ಹಣ ಖರ್ಚು ಆಗೋದು ಬಟ್ಟೆಗಳಿಗಾಗಿನೇ. ಯಾಕೆಂದರೆ ವಧು-ವರರ ಬಟ್ಟೆ ಸಾಮಾನ್ಯವಾಗಿ ದುಬಾರಿಯಾಗಿರುತ್ತೆ. ಮಾತ್ರವಲ್ಲದೆ ಹತ್ತಿರದ ಬಂಧು ಬಳಗಕ್ಕೂ ದುಬಾರಿ ಬೆಲೆಯ ಬಟ್ಟೆ ಖರೀದಿ ಮಾಡಲಾಗುತ್ತದೆ.
ಹೀಗಾಗಿ ಮದುವೆ ಅಲ್ಲದೇ ಇನ್ಯಾವ ಶುಭ ಕಾರ್ಯಕ್ರಮಗಳಲ್ಲಿ ಬಟ್ಟೆಗಾಗಿ ಅಧಿಕ ಹಣ ಖರ್ಚು ಆಗುವುದು ತುಂಬಾ ವಿರಳ. ಆದರೂ ಕಡಿಮೆ ಬೆಲೆಯಲ್ಲಿ ಸುಂದರವಾದ ಉಡುಪು ಖರೀದಿ ಮಾಡಬೇಕು ಅಂತ ಒಂದು ತಿಂಗಳ ಮುಂಚಿತವಾಗಿಯೇ ವಧು-ವರರು ಹಾಗೂ ಸಂಬಂಧಿಕರು ಹಲವಾರು ಅಂಗಡಿಗಳಿಗೆ ಭೇಟಿ ನೀಡ್ತಾರೆ.

ಹೀಗೆ ಅಂಗಡಿಗಳಿಗೆ ಹೋದಾಗ ತಮಗಿಷ್ಟವಾದರೆ ಮುಗಿತು ಬೆಲೆಯಲ್ಲಿ ರಾಜಿ ಮಾಡಿಕೊಳ್ಳದೇ ಬಟ್ಟೆಗಳನ್ನು ಖರೀದಿ ಮಾಡ್ತಾರೆ. ಆದರೆ ದುಬಾರಿ ಹಣ ಖರ್ಚು ಮಾಡಲು ಸಾಧ್ಯವಾಗದೇ ಇರುವವರಿಗೆ ಸುಂದರವಾದ ಬಟ್ಟೆ ಖರೀದಿ ಮಾಡೋದು ತುಂಬಾ ಕಷ್ಟ. ಆದರೆ ಈ ಮದುವೆ ಸೀಸನ್‌ನಲ್ಲಿ ಕಡಿಮೆ ಹಣದಲ್ಲಿ ದುಬಾರಿ ಉಡುಪು ಖರೀದಿ ಮಾಡಲು ನೀವು ಬಯಸಿದ್ದರೆ ಅದಕ್ಕಾಗಿ ಕೆಲ ಸಲಹೆಗಳು ಇಲ್ಲಿದೆ.
ಟೈಮ್‌ಲೆಸ್ ಪೀಸಸ್‌ಗೆ ಆದ್ಯತೆ ನೀಡಿ
ಸಾಮಾನ್ಯವಾಗಿ ಮದುವೆ ಸಮಾರಂಭಕ್ಕಾಗಿ ಖರೀದಿ ಮಾಡುವ ವಧು-ವರರ ಉಡುಪುಗಳು ಮರುಬಳಕೆ ಆಗುವುದು ತುಂಬಾ ಕಡಿಮೆ. ಅದರೆ ನೀವು ಸ್ವಲ್ಪ ಜಾಣತನ ಮಾಡಿದರೆ ಮರು ಬಳಕೆ ಮಾಡಬಹುದಾದಂತ ಸ್ಟೈಲಿಶ್ ಉಡುಪುಗಳನ್ನು ಖರೀದಿ ಮಾಡಬಹುದು. ಇದಕ್ಕಾಗಿ ಟೈಮ್‌ಲೆಸ್ ಪೀಸಸ್‌ಗೆ ಆದ್ಯತೆ ನೀಡಿ. ಅಂದರೆ ವರನಿಗೆ ಕ್ಲಾಸಿಕ್ ಸೂಟ್ ಅಥವಾ ವಧುವಿಗೆ ಸರಳವಾದ ಸೊಗಸಾದ ಉಡುಗೆಯನ್ನು ಆಯ್ಕೆ ಮಾಡಿ ಮದುವೆಯ ನಂತರ ಮರುಬಳಕೆ ಮಾಡಬಹುದಾದ ಟೈಮ್‌ಲೆಸ್ ಪೀಸಸ್ ಖರೀದಿ ಮಾಡಬಹುದು. ಅಂದರೆ ಬಹುಮುಖ ತುಣುಕುಗಳನ್ನು ಆರಿಸಿಕೊಳ್ಳಿ. ಇವುಗಳನ್ನು ವಿವಿಧ ಸಂದರ್ಭಗಳಲ್ಲಿ ವಿಭಿನ್ನವಾಗಿ ವಿನ್ಯಾಸಗೊಳಿಸಬಹುದು.

ಮಿಕ್ಸ್ ಮತ್ತು ಮ್ಯಾಚ್
ಮದುವೆ ಸಮಾರಂಭಗಳಿಗಾಗಿ ಬಟ್ಟೆ ಖರೀದಿ ಮಾಡುವಾಗ ಒಂದು ಅಂಗಡಿಗೆ ಹೋಗಿ ಅಲ್ಲಿ ಇರುವ ದುಬಾರಿ ಹಾಗೂ ಫ್ಯಾನ್ಸಿ ಬಟ್ಟೆಗಳನ್ನು ಖರೀದಿ ಮಾಡುವುದು ಸಾಮಾನ್ಯ. ಆದರೆ ಈ ರೀತಿಯ ಶಾಪಿಂಗ್ ನಿಮ್ಮ ಬಜೆಟ್‌ಗೆ ಹೊಡೆತ ಕೊಡಬಹುದು. ಆದರೆ ನೀವೇನಾದರು ದುಬಾರಿ ಬೆಲೆಯ ಬಟ್ಟೆ ಖರಿದಿಸಲು ಯೋಚನೆ ಮಾಡದೇ ಇದ್ದಲ್ಲಿ ಮಿಕ್ಸ್ ಅಂಡ್ ಮ್ಯಾಚ್ ಮಾಡಿಕೊಳ್ಳಿ. ಅಂದರೆ ಮಾರುಕಟ್ಟೆಯಲ್ಲಿ ನಿಮಗೆ ಇಷ್ಟವಾದ ಯಾವುದೇ ಉಡುಪು ಪ್ರತ್ಯೇಕವಾಗಿ ಲಭ್ಯವಿರುತ್ತವೆ. ಉದಾಹರಣೆಗೆ: ಲೆಹೆಂಗಾ, ದುಪ್ಪಟ್ಟ, ಫ್ಯಾನ್ಸಿ ಬ್ಲೌಸ್ ಇವುಗಳು ಅತ್ಯಾಕರ್ಷಕವಾಗಿ ಮಾರುಕಟ್ಟೆಯಲ್ಲಿ ನಿಮಗೆ ಲಭ್ಯವಿರುತ್ತವೆ. ಇವುಗಳನ್ನು ನಿಮ್ಮ ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬಹುದು. ಬಳಿಕ ಅವುಗಳನ್ನು ಹೊಂದಿಸಿಕೊಳ್ಳಬಹುದು. ಇದಕ್ಕಾಗಿ ನೀವು ಕೊಂಚ ಹಿಂದೆಯೇ ಯೋಜನೆ ಮಾಡಬೇಕಾಗುತ್ತದೆ. ಈ ರೀತಿಯ ಉಡುಪುಗಳ ಮೂಲಕ ಅನನ್ಯ ಮತ್ತು ಅತ್ಯಾಧುನಿಕ ನೋಟವನ್ನು ರಚಿಸಬಹುದು.
ಬಾಡಿಗೆ ಅಥವಾ ಸಾಲ
ಬಟ್ಟೆಗಳನ್ನು ಬಾಡಿಗೆಗೆ ಅಥವಾ ಎರವಲು ತೆಗೆದುಕೊಳ್ಳುವುದು ನಿಮ್ಮ ಹಣ ಉಳಿತಾಯಕ್ಕೆ ಮತ್ತಷ್ಟು ಸಹಾಯಕ. ಅನೇಕ ಡಿಸೈನರ್ ಮಳಿಗೆಗಳು ಮದುವೆಯ ಉಡುಪುಗಳನ್ನು ಸಾಲವಾಗಿ ನೀಡುತ್ತವೆ. ಇಂತಿಷ್ಟು ಹಣವನ್ನು ನೀಡಿದರೆ ಅವುಗಳನ್ನು ತೊಟ್ಟು ಮತ್ತೆ ವಾಪಾಸ್ ನೀಡಬೇಕು. ಈ ರೀತಿ ಕೂಡ ನೀವು ನಿಮ್ಮ ಮದುವೆ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಲಂಕಾರಿಕ ಆಭರಣಗಳು
ನಾವು ತೊಡುವ ಉಡುಪಿಕಿಂತ ನಾವು ಬಳಸುವ ಆಭರಣಗಳು ಆ ಉಡುಪಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ನೀವು ತೊಡುವ ಮದುವೆ ಉಡುಪು ಸಿಂಪಲ್ಲಾಗಿದ್ದರೂ ಪರವಾಗಿಲ್ಲ. ಅದನ್ನು ಆಭರಣಗಳಿಂದ ಮತ್ತಷ್ಟು ಚಂದಗೊಳಿಸಬಹುದು. ಹೀಗಾಗಿ ಆಭರಣಗಳಿಂದ ನಿಮ್ಮ ಉಡುಪನ್ನು ಚಂದಗೊಳಿಸಬಹುದು.
ಫಿಟ್ ಮತ್ತು ಟೈಲರಿಂಗ್ ಮೇಲೆ ಕೇಂದ್ರೀಕರಿಸಿ
ವಧು ಮತ್ತು ವರರಿಗಾಗಿ ಖರೀದಿ ಮಾಡುವ ಉಡುಪು ರೆಡಿಮೇಡ್ ಆಗಿರುವ ಬದಲು ಬಟ್ಟೆ ಖರೀದಿ ಮಾಡಿ ಹೊಲಿಸಿಕೊಳ್ಳುವುದು ಕೂಡ ಅದರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಪರಿಪೂರ್ಣ ಫಿಟ್ ಕೂಡ ಒದಗಿಸುತ್ತದೆ. ಹೀಗಾಗಿ ಟೈಲರಿಂಗ್‌ನಲ್ಲಿ ಹೂಡಿಕೆ ಮಾಡಿ. ಅತ್ಯಂತ ದುಬಾರಿ ಅಲ್ಲದಿದ್ದರೂ ಸಹ ಉತ್ತಮವಾಗಿ ಹೊಂದಿಕೊಳ್ಳುವ ಬಟ್ಟೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಆಫ್-ಸೀಸನ್ ಅನ್ನು ಶಾಪಿಂಗ್ ಮಾಡಿ
ಮದುವೆ ಸಮಾರಂಭಗಳು ದಿಢೀರ್ ನಿಗಧಿಯಾಗುತ್ತವೆ. ಆದರೆ ಅದಕ್ಕಾಗಿ ಸಮಯ ಹೆಚ್ಚಾಗಿದ್ದರೆ ನೀವು ಮದುವೆ ಸೀಸನ್ ಇಲ್ಲದೇ ಇರುವ ಸಮಯದಲ್ಲಿ ಶಾಪಿಂಗ್ ಮಾಡುವುದು ಒಳ್ಳೆಯದು. ಇದರಿಂದ ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಉಡುಪುಗಳನ್ನು ಖರೀದಿ ಮಾಡಬಹುದು. ಅದಕ್ಕೆ ತಕ್ಕಂತೆ ಶಾಪಿಂಗ್ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು.
ವೃತ್ತಿಪರ ಸ್ಟೈಲಿಸ್ಟ್ ಅನ್ನು ಸಂಪರ್ಕಿಸಿ
ವೃತ್ತಿಪರ ಸ್ಟೈಲಿಸ್ಟ್ ಅನ್ನು ನೇಮಿಸಿಕೊಳ್ಳುವುದು ಈಗಿನ ಟ್ರೆಂಡ್. ಅವರಿಂದ ಸಲಹೆ ಪಡೆಯುವ ಮೂಲಕ ನೀವು ಉಡುಪುಗಳನ್ನು ವಿನ್ಯಾಸಗೊಳಿಸಬಹುದು. ಈಗಿನ ವಿನ್ಯಾಸಕಾರರು ಬ್ರ್ಯಾಂಡ್‌ಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ. ಇವರಿಗೆ ಉಡುಪಿನ ವಿಶೇಷ ವಿನ್ಯಾಸಗಳ ಬಗ್ಗೆ ಸಾಕಷ್ಟು ಮಾಹಿತಿ ಇರುತ್ತದೆ. ಇವರೊಂದಿಗೆ ನೀವು ಕಡಿಮೆ ಬೆಲೆಯಲ್ಲಿ ಮದುವೆಯಂತಹ ಉಡುಪುಗಳನ್ನು ವಿನ್ಯಾಸಗೊಳಿಸಿಕೊಡಲು ಮಾತುಕತೆ ಮಾಡಬಹುದು. ಕಡಿಮೆ ಬೆಲೆಯಲ್ಲಿ ನಿಮಗೆ ಹೊಂದಿಕೊಳ್ಳುವ ಚಂದವಾಗಿ ಅಂದವಾಗಿ ಉಡುಪುಗಳನ್ನು ಅವರು ವಿನ್ಯಾಸಗೊಳಿಸಿ ಕೊಡಲು ನಿಮಗೆ ಸಹಾಯ ಮಾಡುತ್ತಾರೆ.
ವೃತ್ತಿಪರ ಸ್ಟೈಲಿಸ್ಟ್ ನಿಮ್ಮ ನೋಟವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಶೈಲಿ ಅಥವಾ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈ ಮೂಲಕ ನಿಮ್ಮ ಮದುವೆಯ ಉಡುಪನ್ನು ಸ್ಮರಣೀಯ ಮತ್ತು ಬಜೆಟ್ ಸ್ನೇಹಿಯನ್ನಾಗಿ ಮಾಡಿಕೊಳ್ಳಬಹುದು. ಅನಗತ್ಯವಾಗಿ ಅಧಿಕ ಪ್ರಮಾಣದ ಹಣವನ್ನು ವ್ಯರ್ಥ ಮಾಡಬೇಡಿ. ಭವಿಷ್ಯದ ಮಾರುಕಟ್ಟೆ ಮತ್ತು ಟ್ರೆಂಡ್‌ಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ರೀತಿಯ ಸಜ್ಜು ಮತ್ತು ಆಭರಣಗಳನ್ನು, ಉಡುಪುಗಳನ್ನು ಆಯ್ಕೆ ಮಾಡಿ.












Click it and Unblock the Notifications