ಬೇಸಿಗೆಯಲ್ಲಿ ದಿನನಿತ್ಯ ಅಡುಗೆಗೆ ಬೇಕಾದ ತರಕಾರಿಗಳನ್ನು ಮನೆಯಲ್ಲೇ ಬೆಳೆಸಬಹುದು!

ಬೇಸಿಗೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ತೋಟಗಾರಿಕೆ ಮಾಡುವುದು ಕಷ್ಟ ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಬೇಸಿಗೆ ಕಾಲವೇ ಮನೆಯಲ್ಲೇ ಕುಂಡಗಳಲ್ಲಿ ವಿವಿಧ ತರಕಾರಿಗಳನ್ನು ಬೆಳೆಸಲು ಅತ್ಯಂತ ಸೂಕ್ತ ಸಮಯ ಎಂದು ಹೇಳಬಹುದು. ವಿಶೇಷವಾಗಿ ಮನೆ ಮುಂದೆ ಜಾಗ ಇಲ್ಲದವರು ಬಾಲ್ಕನಿ, ಟೆರಸ್‌ ಅಥವಾ ಕಿಟಕಿಯ ಹತ್ತಿರವೂ ಸುಲಭವಾಗಿ ಈ ತರಕಾರಿಗಳನ್ನು ಬೆಳೆಯಬಹುದು. ಕಡಿಮೆ ಜಾಗದಲ್ಲೇ ಆರೋಗ್ಯಕರ ಮತ್ತು ತಾಜಾ ತರಕಾರಿಗಳನ್ನು ಪಡೆಯಲು ಇದು ಉತ್ತಮ ಮಾರ್ಗವಾಗಿದೆ. ಬೇಸಿಗೆಯಲ್ಲಿ ಸುಲಭವಾಗಿ ಬೆಳೆಯಬಹುದಾದ ಐದು ತರಕಾರಿಗಳ ಮಾಹಿತಿ ಇಲ್ಲಿದೆ.

5 Summer Vegetables

ಕೊತ್ತಂಬರಿ ಸೊಪ್ಪು: ಸರಳವಾಗಿ ಬೆಳೆಯಬಹುದಾದ ಸೊಪ್ಪು

ಕೊತ್ತಂಬರಿ ಸೊಪ್ಪು ಮನೆಯಲ್ಲೇ ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದಾದ ಸೊಪ್ಪಾಗಿದೆ. ಇದು ಕಡಿಮೆ ಜಾಗದಲ್ಲಿಯೇ ಚೆನ್ನಾಗಿ ಬೆಳೆಯುತ್ತದೆ. ಪ್ರತಿದಿನ ಅಡುಗೆಯಲ್ಲಿ ಬಳಸುವ ಕಾರಣ ಮನೆಯಲ್ಲೇ ಬೆಳೆಸಿದರೆ ಸದಾ ತಾಜಾ ಸೊಪ್ಪು ದೊರೆಯುತ್ತದೆ. ಸರಿಯಾದ ನೀರು ಮತ್ತು ಸ್ವಲ್ಪ ಸೂರ್ಯನ ಬೆಳಕು ಇದ್ದರೆ ಬೇಗ ಬೆಳೆಯುತ್ತದೆ.

5 Summer Vegetables

ಟೊಮೆಟೊ: ದಿನನಿತ್ಯ ಅಡುಗೆಯಲ್ಲಿ ಬಳಸುವ ಟೊಮೆಟೊ

ಭಾರತೀಯ ಅಡುಗೆಯಲ್ಲಿ ದಿನನಿತ್ಯ ಬಳಸುವ ತರಕಾರಿಗಳಲ್ಲಿ ಟೊಮೆಟೊ ಪ್ರಮುಖವಾದ ತರಕಾರಿ. ಬೇಸಿಗೆಯ ಹೆಚ್ಚಿನ ತಾಪಮಾನದಲ್ಲಿ ಟೊಮೆಟೊ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಮಧ್ಯಮ ಅಥವಾ ದೊಡ್ಡ ಗಾತ್ರದ ಕುಂಡಗಳಲ್ಲಿ ಟೊಮೆಟೊ ಬೆಳೆಸಬಹುದು. ಸಾಕಷ್ಟು ಸೂರ್ಯನ ಬೆಳಕು, ನಿಯಮಿತ ನೀರು ಮತ್ತು ಗಿಡಕ್ಕೆ ಒಂದು ಸಣ್ಣದಾದ ಆಧಾರ ನೀಡಿದರೆ ಸಾಕು ಉತ್ತಮ ಫಸಲು ಪಡೆಯಬಹುದು.

ಫ್ರೂಟ್ ಸಲಾಡ್ ಮಾಡುವ ಮುನ್ನ ತಿಳಿದುಕೊಳ್ಳಿ: ಈ ಹಣ್ಣುಗಳ ಕಾಂಬಿನೇಷನ್ ಅಪಾಯಕಾರಿ
ಫ್ರೂಟ್ ಸಲಾಡ್ ಮಾಡುವ ಮುನ್ನ ತಿಳಿದುಕೊಳ್ಳಿ: ಈ ಹಣ್ಣುಗಳ ಕಾಂಬಿನೇಷನ್ ಅಪಾಯಕಾರಿ

ಬೆಂಡೆಕಾಯಿ: ಸುಲಭವಾಗಿ ಬೆಳೆಯಬಹುದಾದ ತರಕಾರಿ

ತೋಟಗಾರಿಕೆಗೆ ಹೊಸಬರಾದವರು ಸಹ ಸುಲಭವಾಗಿ ಬೆಳೆಸಬಹುದಾದ ತರಕಾರಿಗಳಲ್ಲಿ ಬೆಂಡೆಕಾಯಿ ಒಂದು. ಬೇಸಿಗೆಯಲ್ಲಿ ತಾಪಮಾನದಲ್ಲಿ ಈ ಗಿಡಗಳು ವೇಗವಾಗಿ ಬೆಳೆಯುತ್ತವೆ. ಇವುಗಳ ಬೇರುಗಳಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ ಆದ್ದರಿಂದ ದೊಡ್ಡ ಹಾಗೂ ಆಳವಾದ ಕುಂಡಗಳಲ್ಲಿ ಬೆಳೆಸಿದರೆ ಒಳ್ಳೆಯದು. ದಿನಪೂರ್ತಿ ಸೂರ್ಯನ ಬೆಳಕು ಸಿಗುವ ಸ್ಥಳದಲ್ಲಿ ಇಟ್ಟರೆ ಉತ್ತಮ ಬೆಳವಣಿಗೆ ಕಾಣಬಹುದು. ನಿಯಮಿತವಾಗಿ ನೀರು ಹಾಕಿ ಕೆಲವೊಮ್ಮೆ ಗೊಬ್ಬರ ನೀಡಿದರೆ ಸಾಕು.

5 Summer Vegetables

ಸೌತೆಕಾಯಿ: ದೇಹ ತಂಪಾಗಿಡುವ ತರಕಾರಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಾಯ ಮಾಡುವ ಸೌತೆಕಾಯಿಯನ್ನು ಟೆರಸ್‌ ಅಥವಾ ಬಾಲ್ಕನಿಯಲ್ಲೂ ಬೆಳೆಸಬಹುದು. ದೊಡ್ಡ ಕುಂಡದಲ್ಲಿ ಮತ್ತು ಬೆಳೆಯಲು ಪಟ್ಟದಾದ ಆಸರೆ ನೀಡಿದರೆ ಸಾಕು ಉತ್ತಮವಾಗಿ ಬೆಳೆಯುತ್ತದೆ. ಸಾಕಷ್ಟು ನೀರು ಮತ್ತು ಸೂರ್ಯನ ಬೆಳಕು ಸಿಕ್ಕರೆ ಉತ್ತಮ ಗುಣಮಟ್ಟದ ಸೌತೆಕಾಯಿ ಪಡೆಯಬಹುದು.

ಬಾಳೆಹಣ್ಣು vs ಖರ್ಜೂರ: ಬೇಸಿಗೆಯಲ್ಲಿ ಯಾವುದು ನಿಮ್ಮ ದೇಹಕ್ಕೆ ಹೆಚ್ಚು ಉತ್ತಮ?
ಬಾಳೆಹಣ್ಣು vs ಖರ್ಜೂರ: ಬೇಸಿಗೆಯಲ್ಲಿ ಯಾವುದು ನಿಮ್ಮ ದೇಹಕ್ಕೆ ಹೆಚ್ಚು ಉತ್ತಮ?

ಹೀರೆಕಾಯಿ: ಕುಂಡದಲ್ಲೇ ಸಮೃದ್ಧ ಫಸಲು ನೀಡುವ ಬೇಸಿಗೆ ತರಕಾರಿ

ಹೀರೆಕಾಯಿ ಬೇಸಿಗೆಯಲ್ಲಿ ವೇಗವಾಗಿ ಬೆಳೆಯುವ ತರಕಾರಿಗಳಲ್ಲಿ ಒಂದು. ದೊಡ್ಡ ಕುಂಡದಲ್ಲಿ ನೆಟ್ಟು ಬೆಳೆಯಲು ಜಾಲಿ ಅಥವಾ ಕಡ್ಡಿ ವ್ಯವಸ್ಥೆ ಮಾಡಿದರೆ ಉತ್ತಮ ಫಸಲು ಕೊಡುತ್ತದೆ. ನಿಯಮಿತ ನೀರು ಮತ್ತು ಗೊಬ್ಬರ ನೀಡಿದರೆ ಮನೆಯಲ್ಲೇ ತಾಜಾ ಹೀರೆಕಾಯಿ ಬೆಳೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+