ಓದಿನ ಜೊತೆಯಲ್ಲೇ ಕೈತುಂಬಾ ಸಂಪಾದನೆ: ವಿದ್ಯಾರ್ಥಿಗಳಿಗೆ ಹಣ ಗಳಿಸಲು ಇಲ್ಲಿವೆ 5 ಸೂಪರ್ ಐಡಿಯಾಗಳು

ಶಾಲಾ-ಕಾಲೇಜುಗಳಿಗೆ ಹೋಗುವಾಗ ಒಂದಿಷ್ಟು ಹಣ ಸಂಪಾದಿಸಬೇಕು ಎನ್ನುವುದು ಹೆಚ್ಚಿನ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ "ಈಗ ಕೇವಲ ಓದಿನ ಕಡೆ ಗಮನ ಕೊಡಿ, ಸಂಪಾದನೆ ಮಾಡುವ ಸಮಯ ಮುಂದೆ ಇದ್ದೇ ಇರುತ್ತದೆ," ಎಂಬ ಮಾತನ್ನ ಹಿರಿಯರು ಹೇಳುತ್ತಿರುತ್ತಾರೆ. ಆದರೆ ಇಂಟರ್‌ನೆಟ್‌ ಯುಗದಲ್ಲಿರುವ ನಮಗೆ ಈ ಮಾತು ತುಂಬ ಹಳೆಯದಾಗಿದೆ. ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ, ಆನ್‌ಲೈನ್ ಜಗತ್ತು ತೆರೆದಿಟ್ಟಿರುವ ಸಾವಿರಾರು ಅವಕಾಶಗಳಿಂದಾಗಿ, ಭಾರತದಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದಿನ ಜೊತೆಯಲ್ಲೇ ಹಣ ಗಳಿಸಿ ಸ್ವಾವಲಂಬಿಗಳಾಗುತ್ತಿದ್ದಾರೆ.

ಹಣ ಗಳಿಸುವುದು ಎಂದರೆ ಯಾವುದೇ ಶಾರ್ಟ್‌ಕಟ್ ಹುಡುಕುವುದು ಅಥವಾ ರಾತ್ರೋರಾತ್ರಿ ಶ್ರೀಮಂತರಾಗುವ ಸ್ಕೀಮ್‌ಗಳ ಮೊರೆ ಹೋಗುವುದಲ್ಲ. ಬದಲಾಗಿ, ಕಾಲೇಜು ತರಗತಿಗಳ ನಂತರ ಸಿಗುವ ಬಿಡುವಿನ ವೇಳೆಯನ್ನ ಸರಿಯಾಗಿ ಬಳಕೆ ಮಾಡಿಕೊಂಡು ಭವಿಷ್ಯದ ವೃತ್ತಿಜೀವನಕ್ಕೆ ಉಪಯುಕ್ತವಾಗುವ ಕೌಶಲ್ಯಗಳನ್ನ ರೂಢಿಸಿಕೊಳ್ಳುವುದಾಗಿದೆ. ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ವಿದ್ಯಾರ್ಥಿಗಳು ಗೌರವಯುತವಾಗಿ ಹಣ ಗಳಿಸಬಹುದಾದ 5 ಅತ್ಯುತ್ತಮ ಹಾಗೂ ಸ್ಮಾರ್ಟ್ ಮಾರ್ಗಗಳ ವಿವರ ಇಲ್ಲಿದೆ ನೋಡಿ.

5 Best Ways

1. ಫ್ರೀಲ್ಯಾನ್ಸಿಂಗ್ ಮೂಲಕ ಹಣ ಗಳಿಕೆ

ನಿಮಗೆ ಬರವಣಿಗೆ, ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್, ಕೋಡಿಂಗ್, ಸೋಶಿಯಲ್ ಮೀಡಿಯಾ ನಿರ್ವಹಣೆ ಅಥವಾ ಆಕರ್ಷಕ ಪ್ರೆಸೆಂಟೇಷನ್ ತಯಾರಿಸುವ ಕೌಶಲ್ಯವಿದ್ದರೆ, ಮನೆಯಲ್ಲೇ ಕುಳಿತು ಹಣ ಗಳಿಸಬಹುದು. ಇಂದಿನ ದಿನಗಳಲ್ಲಿ ಅನೇಕ ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಉದ್ಯಮಗಳು ಪೂರ್ಣ ಪ್ರಮಾಣದ ಅಂದರೆ ಫುಲ್‌ ಟೈಮ್‌ ಉದ್ಯೋಗಿಗಳನ್ನ ನೇಮಿಸಿಕೊಳ್ಳುವ ಬದಲು ಫ್ರೀಲ್ಯಾನ್ಸರ್‌ಗಳಿಗೆ ಕೆಲಸ ನೀಡಲು ಹೆಚ್ಚು ಇಷ್ಟಪಡುತ್ತವೆ.

ಇಲ್ಲಿ ಕೆಲಸದ ಸಮಯವನ್ನ ನೀವೇ ನಿರ್ಧರಿಸಬಹುದು. ಹಾಗೆಯೇ ಕಾಲೇಜು ಅಸೈನ್‌ಮೆಂಟ್ ಮತ್ತು ಪರೀಕ್ಷೆಗಳ ನಡುವೆಯೂ ಸುಲಭವಾಗಿ ಈ ಕೆಲಸಗಳನ್ನಾ ಮಾಡಬಹುದು. ಇದು ಮುಂದೆ ಫುಲದದ ಟೈಮ್‌ ಉದ್ಯೋಗ ಹುಡುಕುವಾಗ ಉತ್ತಮ ಪೋರ್ಟ್‌ಫೋಲಿಯೋ ನಿರ್ಮಿಸಲು ಸಹಾಯ ಮಾಡುವುದಲ್ಲದೆ, ಪದವಿ ಮುಗಿಯುತ್ತಿದ್ದಂತೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಪಡೆಯಲೂ ನೆರವಾಗುತ್ತದೆ.

2. ಆನ್‌ಲೈನ್ ಟ್ಯೂಟರಿಂಗ್

ಪಾಠ ಮಾಡಲು ಪ್ರೊಫೆಸರ್ ಅಥವಾ ಶಿಕ್ಷಕರೇ ಆಗಬೇಕೆಂದಿಲ್ಲ. ಗಣಿತ, ವಿಜ್ಞಾನ, ಇಂಗ್ಲಿಷ್, ಕೋಡಿಂಗ್, ಸಂಗೀತ ಅಥವಾ ಯಾವುದೇ ವಿಷಯದಲ್ಲಿ ನಿಮಗೆ ಒಳ್ಳೆಯ ಜ್ಞಾನವಿದ್ದರೆ, ಶಾಲಾ ಮಕ್ಕಳಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಟ್ಯೂಷನ್ ಹೇಳಿಕೊಡಬಹುದು. ಪೋಷಕರು ಕೂಡ ವಿದ್ಯಾರ್ಥಿಗಳಿಂದ ತಮ್ಮ ಮಕ್ಕಳಿಗೆ ಪಾಠ ಹೇಳಿಕೊಡಿಸಲು ಸ್ವಲ್ಪ ಹೆಚ್ಚು ಇಷ್ಟಪಡುತ್ತಾರೆ.

ಏಕೆಂದರೆ ಮಕ್ಕಳು ಅವರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಪ್ರತಿದಿನ ಸಂಜೆ ಕೇವಲ 1-2 ಗಂಟೆಗಳ ಕಾಲ ಪಾಠ ಮಾಡುವುದರಿಂದ ಉತ್ತಮ ಮಾಸಿಕ ಆದಾಯ ಗಳಿಸುವುದರ ಜೊತೆಗೆ ನಿಮ್ಮ ಸಂವಹನ ಕೌಶಲ್ಯವೂ ವೃದ್ಧಿಯಾಗುತ್ತದೆ.

3. ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಷನ್

ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಲಿಂಕ್ಡ್‌ಇನ್‌ನಂತಹ ಸಾಮಾಜಿಕ ಮಾಧ್ಯಮಗಳು ವಿದ್ಯಾರ್ಥಿಗಳಿಗೆ ಅಭೂತಪೂರ್ವ ಅವಕಾಶಗಳನ್ನ ಸೃಷ್ಟಿಸಿವೆ. ಕಂಟೆಂಟ್ ಮಾಡಲು ದುಬಾರಿ ಕ್ಯಾಮೆರಾ ಅಥವಾ ಲಕ್ಷಾಂತರ ಫಾಲೋವರ್ಸ್ ಇರಬೇಕೆಂಬ ನಿಯಮವಿಲ್ಲ.

ಕಾಲೇಜು ಜೀವನ, ಸ್ಟಡಿ ಟಿಪ್ಸ್, ಫ್ಯಾಶನ್, ಫೈನಾನ್ಸ್, ಪುಸ್ತಕ ಪರಿಚಯ, ಫಿಟ್‌ನೆಸ್, ಗೇಮಿಂಗ್ ಹಾಗೂ ಅಡುಗೆಯಂತಹ ಆಸಕ್ತಿದಾಯಕ ವಿಷಯಗಳ ಬಗ್ಗೆ ನಿಯಮಿತವಾಗಿ ವಿಡಿಯೋ ಅಥವಾ ಮಾಹಿತಿ ಹಂಚಿಕೊಳ್ಳಬಹುದು. ಆರಂಭದಲ್ಲಿ ಆದಾಯ ಬರದಿದ್ದರೂ, ನಿರಂತರ ಪ್ರಯತ್ನದಿಂದ ಬ್ರ್ಯಾಂಡ್ ಕೊಲಾಬರೇಷನ್, ಅಫಿಲಿಯೇಟ್ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳ ಮೂಲಕ ಉತ್ತಮ ಆದಾಯ ಗಳಿಸಬಹುದು.

4. ಡಿಜಿಟಲ್ ಉತ್ಪನ್ನಗಳ ಮಾರಾಟದಿಂದ ಒಳ್ಳೆಯ ಆದಾಯ

ಒಮ್ಮೆ ಮಾತ್ರ ಶ್ರಮಪಟ್ಟು ಸಿದ್ಧಪಡಿಸಿದ ಉತ್ಪನ್ನವನ್ನ ನೂರಾರು ಬಾರಿ ಮಾರಾಟ ಮಾಡಿ ನಿರಂತರವಾಗಿ ಹಣ ಗಳಿಸುವ ಅತ್ಯುತ್ತಮ ಮಾರ್ಗವೇ ಡಿಜಿಟಲ್ ಪ್ರಾಡಕ್ಟ್ಸ್. ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಸ್ಟಡಿ ನೋಟ್ಸ್, ಪ್ಲಾನರ್‌ಗಳು, ರೆಸ್ಯೂಮ್ ಟೆಂಪ್ಲೇಟ್‌ಗಳು, ಪ್ರೆಸೆಂಟೇಷನ್ ಡಿಸೈನ್‌ಗಳು, ಬಜೆಟ್ ಸ್ಪ್ರೆಡ್‌ಶೀಟ್‌ಗಳು ಹಾಗೂ ಡಿಜಿಟಲ್ ಆರ್ಟ್‌ಗಳನ್ನ ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಸಾಂಪ್ರದಾಯಿಕ ಕೆಲಸಗಳಂತೆ ಇಲ್ಲಿ ಪ್ರತಿ ಗಂಟೆಯೂ ದುಡಿಯಬೇಕಾದ ಅಗತ್ಯವಿರುವುದಿಲ್ಲ; ಒಮ್ಮೆ ಒಂದು ಉತ್ಪನ್ನ ಸಿದ್ಧವಾದರೆ, ಯಾರಾದರೂ ಅದನ್ನು ಖರೀದಿಸಿದಾಗಲೆಲ್ಲಾ ನಿಮಗೆ ಆದಾಯ ಬರುತ್ತಲೇ ಇರುತ್ತದೆ.

5. ಕ್ಯಾಂಪಸ್ ಇಂಟರ್ನ್‌ಶಿಪ್ ಮತ್ತು ಗಿಗ್ಸ್

ಇನ್ನೂ ಅನೇಕ ವಿದ್ಯಾರ್ಥಿಗಳು ತಮ್ಮ ಕಾಲೇಜು ಕ್ಯಾಂಪಸ್ ಒಳಗೇ ಸಿಗುವ ಅವಕಾಶಗಳನ್ನ ಗಮನಿಸುವುದೇ ಇಲ್ಲ. ಪೇಡ್ ಇಂಟರ್ನ್‌ಶಿಪ್‌ಗಳು, ಈವೆಂಟ್ ಮ್ಯಾನೇಜ್‌ಮೆಂಟ್, ಸ್ಟೂಡೆಂಟ್ ಅಂಬಾಸಿಡರ್ ಪ್ರೋಗ್ರಾಂಗಳು, ರಿಸರ್ಚ್ ಅಸಿಸ್ಟೆಂಟ್ ಕೆಲಸಗಳು ಹಾಗೂ ಕ್ಯಾಂಪಸ್ ಮಾರ್ಕೆಟಿಂಗ್ ಕ್ಯಾಂಪೇನ್‌ಗಳು ವಿದ್ಯಾರ್ಥಿಗಳಿಗೆ ಆದಾಯದ ಜೊತೆಗೆ ಅತ್ಯುತ್ತಮ ಅನುಭವವನ್ನು ನೀಡುತ್ತವೆ.

ಇಂದಿನ ಕಾರ್ಪೊರೇಟ್ ಜಗತ್ತು ಅಂಕಗಳ ಜೊತೆಗೆ ಪ್ರಾಯೋಗಿಕ ಜ್ಞಾನಕ್ಕೂ ಹೆಚ್ಚಿನ ಮೌಲ್ಯ ನೀಡುತ್ತದೆ. ಆರಂಭದಲ್ಲಿ ಸಿಗುವ ಹಣ ಚಿಕ್ಕದಾಗಿದ್ದರೂ, ಈ ಅನುಭವ ಮುಂದಿನ ದಿನಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಪ್ರೀ-ಪ್ಲೇಸ್‌ಮೆಂಟ್ ಆಫರ್ ಪಡೆಯಲು ದಾರಿ ಮಾಡಿಕೊಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+