ಬೆಳಿಗ್ಗೆ ಬೇಗ ಎದ್ದೇಳುವುದರಿಂದ ಆಗುವ 5 ಲಾಭಗಳು, ಮಿಸ್ ಮಾಡ್ಬೇಡಿ!
ನಿತ್ಯ ನೀವು ಬೆಳಿಗ್ಗೆ ಬೇಗ ಎದ್ದೇಳುವುದರಿಂದ ಹಲವು ಲಾಭಗಳಿವೆ. ನೀವು ಬೇಗ ಎದ್ದೇಳುವುದರಿಂದ ನಿಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಲು ಹಲವು ಅವಕಾಶಗಳಿವೆ. ಸಾಮಾನ್ಯವಾಗಿ ಪರೀಕ್ಷೆ ಸಮಯಗಳಲ್ಲಿ ಬೆಳಿಗ್ಗೆ ಬೇಗ ಎದ್ದು ಓದಿಕೊಳ್ಳಿ ಅಂತ ಸಲಹೆ ನೀಡುವುದು ಇದೆ. ಬೆಳಿಗ್ಗೆ ಬೇಗ ಎದ್ದೇಳುವುದರಿಂದ ಏನೆಲ್ಲಾ ಲಾಭಗಳು ಆಗಲಿವೆ. ನೀವು ಏಕೆ ಬೆಳಿಗ್ಗೆ ಬೇಗ ಎದ್ದೇಳಬೇಕು ಎನ್ನುವುದು ಸೇರಿದಂತೆ ಬೆಳಿಗ್ಗೆ ಎದ್ದೇಳುವುದರಿಂದ ಲೈಫ್ ಯಾವ ರೀತಿ ಬದಲಾಗುತ್ತದೆ ಎನ್ನುವ ವಿವರ ಇಲ್ಲಿದೆ.
ಇಂದು ಬಹುತೇಕ ಜನರ ಜೀವನ ಒತ್ತಡ ಹಾಗೂ ಸಮಯವಿಲ್ಲದಂತೆ ಪರದಾಡುವುದಕ್ಕೆ ಕಾರಣವಾಗುತ್ತಿರುವುದರಲ್ಲಿ ನಿದ್ದೆ ಜಾಸ್ತಿ ಮಾಡುವುದು. ಇಲ್ಲವೇ ಬೆಳಿಗ್ಗೆ ಬೇಗ ಎದ್ದೇಳದೆ ಇರುವುದು ಕೂಡ. ಹೌದು ನೀವು ದಿನವೂ ಬೆಳಿಗ್ಗೆ ಬೇಗ ಎದ್ದೇಳುವುದರಿಂದ ಹಲವು ಲಾಭಗಳಿವೆ. ಅದರಲ್ಲೂ ಬೆಳಿಗ್ಗೆ 5 ಗಂಟೆಗೆ ಎಚ್ಚರವಾಗುವುದನ್ನು ನೀವು ರೂಢಿಸಿಕೊಂಡರೆ, ಹಲವು ಬದಲಾವಣೆಗಳು ಆಗಲಿವೆ. ಅದೇನು ಎನ್ನುವ ಕಂಪ್ಲೀಟ್ ಹಾಗೂ ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ.

ಒತ್ತಡ ಇಳಿಕೆಯಾಗಲಿದೆ: ನೀವು ಪ್ರತಿದಿನ ಬೆಳಿಗ್ಗೆ ಬೇಗ ಎಚ್ಚರವಾಗುವುದರಿಂದ ನಿಮ್ಮ ಜೀವನದಲ್ಲಿ ಒತ್ತಡ ಇಳಿಕೆಯಾಗಲಿದೆ. ಹೌದು ಬೇಗ ಎದ್ದಷ್ಟು ಹೆಚ್ಚು ಸಮಯ ಸಿಗುತ್ತದೆ. ಬ್ರಶ್ ಮಾಡುವುದು, ಸ್ನಾನ ಮಾಡುವುದು ಹಾಗೂ ರೆಡಿ ಆಗುವುದು ಸೇರಿದಂತೆ ಹಲವು ಕೆಲಸಗಳನ್ನು ಒತ್ತಡವಿಲ್ಲದೆ ಮಾಡಿಕೊಳ್ಳಬಹುದು. ದಿನ ಬೆಳಿಗ್ಗೆ ಒಳ್ಳೆಯ ರೀತಿ ಪ್ರಾರಂಭವಾದರೆ, ದಿನವೆಲ್ಲಾ ಉತ್ತಮವಾಗಿರುತ್ತದೆ. ಉತ್ತಮ ದಿನಚರಿಯನ್ನು ಪ್ರಾರಂಭ ಮಾಡುವುದಕ್ಕೆ ಒತ್ತಡವಿಲ್ಲದೆ ದಿನ ಕಳೆಯುವುದಕ್ಕೆ ಬೆಳಿಗ್ಗೆ ಬೇಗ ಎದ್ದೇಳುವುದು ತುಂಬಾನೇ ಸಹಕಾರಿಯಾಗಿದೆ.
ದಿನದ ಪ್ಲಾನ್: ನೀವು ಬೆಳಿಗ್ಗೆ ಬೇಗ ಎದ್ದರೆ ಆ ದಿನ ಏನೆಲ್ಲ ಕೆಲಸ ಮಾಡಿಕೊಳ್ಳಬೇಕು. ಯಾವೆಲ್ಲ ಕೆಲಸವನ್ನು ಮೊದಲು ಪ್ರಾರಂಭಿಸಬೇಕು ಅಂತ ಪ್ಲಾನ್ ಮಾಡಿಕೊಳ್ಳುವುದಕ್ಕೆ ಟೈಮ್ ಸಿಗುತ್ತೆ. ಅಷ್ಟು ಮಾತ್ರವಲ್ಲ ಒಂದು ಸಣ್ಣ ಲಿಸ್ಟ್ ಮಾಡಿಕೊಂಡು ಆ ಪ್ರಕಾರ ನೀವು ಕೆಲಸ ಮಾಡಬಹುದು. ಇದರಿಂದ ನೀವು ನಿಮ್ಮ ಕೆಲಸಗಳನ್ನು ಟೈಮ್‌ನಲ್ಲಿ ಮುಗಿಸಿಕೊಳ್ಳಬಹುದು. ಟುಡು ಮಾಡಿಕೊಳ್ಳುವುದಕ್ಕೆ ಹಾಗೂ ಅದನ್ನು ಫಾಲೋ ಮಾಡುವುದಕ್ಕೆ ನಿಮಗೆ ತುಂಬಾನೇ ಟೈಮ್ ಸಿಗುತ್ತೆ.
ಆತ್ಮವಿಶ್ವಾಸ ಹೆಚ್ಚಳ: ದಿನ ಬೆಳಿಗ್ಗೆ ಎದ್ದೇಳುವುದರಿಂದ ನಿಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಹೌದು ಬೇಗ ಎಚ್ಚರಗೊಂಡರೆ ಕೆಲಸಗಳು ಬೇಗ ಆಗುತ್ತವೆ. ಮನಸ್ಸು ಹಾಗೂ ಮೈಂಡ್ ರಿಲ್ಯಾಕ್ಸ್ ಆಗಿ ಇರುತ್ತದೆ. ಇದರಿಂದ ಹೆಚ್ಚು ವಿಶ್ವಾಸವಾಗಿ ನೀವು ಕೆಲಸಗಳನ್ನು ಮಾಡಿಕೊಳ್ಳಬಹುದು. ಅಲ್ಲದೆ ಹೆಚ್ಚು ಟೈಮ್ ಸಿಗುವುದರಿಂದ ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪುತ್ತದೆ. ಸಮಾಧಾನವಾಗಿ ನೀವು ಯಾವುದೇ ವಿಷಯದ ಬಗ್ಗೆಯಾಗಲಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಟೈಮ್ ಸಿಗುತ್ತದೆ.
ದಿನಚರಿ ಸರಿಯಾಗಿ ಇರುತ್ತೆ: ನಿಮಗೆ ಈ ವಿಷಯ ಅಚ್ಚರಿ ಏನಿಸಿದರೂ ನಿಜ. ನೀವು ಬೆಳಿಗ್ಗೆ ಬೇಗ ಎದ್ದೇಳುವುದರಿಂದ ಆಫೀಸ್, ಶಾಲಾ - ಕಾಲೇಜು ಹಾಗೂ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಹೋಗುತ್ತೀರಿ. ಇದರಿಂದ ನಿಮ್ಮ ದಿನಚರಿಯೇ ಬದಲಾಗುತ್ತೆ. ಸಮಯ ಆಗುತ್ತಿದೆ ಅಂತ ಸ್ಪೀಡ್ ಆಗಿ ಹೋಗುವುದಿಲ್ಲ. ಸಿಗ್ನಲ್‌ಗಳನ್ನು ಜಂಪ್ ಮಾಡುವ ಅನಿವಾರ್ಯತೆ ಎದುರಾಗಲ್ಲ. ಟ್ರಾಫಿಕ್‌ನಲ್ಲಿ ಸಾಮಾನ್ಯಕ್ಕಿಂತ 5 ಅಥವಾ 10 ನಿಮಿಷ ಲೇಟ್ ಆದರೆ ಒತ್ತಡ ಆಗಲ್ಲ. ಮನೆಯನ್ನು 5ರಿಂದ 10 ನಿಮಿಷ ಬೇಗ ಬಿಡಬಹುದು. ಇಲ್ಲವೇ ದಾರಿಯಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆ ಆದರೂ ಆ ದಿನದ ದಿನಚರಿಯ ಮೇಲೆ ಪರಿಣಾಮ ಬೀರಲ್ಲ.












Click it and Unblock the Notifications