Weight Loss: ಹೀಗೆ 21 ದಿನ ಮಾಡಿದರೆ ಬೊಜ್ಜು ಕಡಿಮೆ
ವಿಶ್ವದಲ್ಲಿ ಬಹು ಸಂಖ್ಯಾತ ಜನರು ಎದುರಿಸುತ್ತಿರುವ ಸಾಮಾನ್ಯ ಕಾಯಿಲೆಗಳಲ್ಲಿ ಒಂದು ಬೊಜ್ಜು. ಇದು ಸಾಂಕ್ರಾಮಿಕ ಕಾಯಿಲೆಯಂತೆ ಹರಡುತ್ತಿದೆ. ಬೊಜ್ಜು ಹೊಂದಿದ ವ್ಯಕ್ತಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಾರೆ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೊಜ್ಜು ನಿಯಂತ್ರಿಸುವುದು ಅವಶ್ಯಕ. ತೂಕ ಹೆಚ್ಚಿಸುವುದು ಸುಲಭ ಆದರೆ, ಅದನ್ನೆ ಕಡಿಮೆ ಮಾಡುವುದು ಸುಲಭದ ಮಾತಲ್ಲ.
ಬೊಜ್ಜು ಹೊಂದಿರುವ ವ್ಯಕ್ತಿ ತನ್ನ ತೂಕವನ್ನು ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಯಾರು ಏನೇ ಹೇಳಿದ್ರೂ ಅದನ್ನು ತದೆಕ ಚಿತ್ತದಿಂದ ಕೇಳಿ ಪಾಲಿಸಲು ಮುಂದಾಗುತ್ತಾರೆ. ಜಿಮ್‌ನಲ್ಲಿ ಗಂಟೆಗಟ್ಟಲೇ ಬೆವರು ಹರಿಸುವುದು, ಯೋಗಾ, ವಾಕ್, ತಿನ್ನುವುದರಲ್ಲಿ ನಿಯಂತ್ರಣ, ಹೀಗೆ ನಾನಾ ಉಪಾಯಗಳನ್ನು ಮಾಡಿ ಬೊಜ್ಜಿನಿಂದ ನಿರ್ಮೂಲನೆ ಆಗಲು ಬಯಸುತ್ತಾರೆ. ಆದರೆ ವರ್ಷದಿಂದ ಬೆಳದು ಕುತಿರುವ ಕೊಬ್ಬು ಹೀಗೆ ತಿಂಗಳುಗಟ್ಟಲೆ ಮಾಡಿದ ವ್ಯಾಯಾಮದಿಂದ ಹೋಗಲು ಸಾಧ್ಯವೇ ಇಲ್ಲ.

ಬೊಜ್ಜು ಕರಗಿಸುವ ಆಲೋಚನೆ ನಿಮ್ಮಲ್ಲಿದ್ದರೆ, ಒಂದು ಬಾರಿ ಈ ಟಿಪ್ಸ್‌ನ್ನು ಸಹ ಪ್ರಯೋಗಿಸಿ ನೋಡಿ. ಬೊಜ್ಜು ಕರಗಲು 21 ದಿನಗಳವರೆಗೆ ಈ ದಿನಚರಿಯನ್ನು ಅನುಸರಿಸಿ. ಹೀಗೆ ಮಾಡುವುದರಿಂದ ಕ್ರಮೇಣ ನಿಮ್ಮ ತೂಕ ಕಡಿಮೆ ಆಗಲು ಆರಂಭಿಸುತ್ತದೆ. ತೂಕ ಒಮ್ಮೆಲೆ ಕಡಿಮೆ ಆಗದಿದ್ದರೂ ಕ್ರಮೇಣ ಕಡಿಮೆ ಆಗುವುದರಲ್ಲಿ ಸಂದೇಹವಿಲ್ಲ. 21 ದಿನಗಳ ದಿನಚರಿಯಲ್ಲಿ ಏನೆಲ್ಲಾ ಪಾಲಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
21 ದಿನ ಏನೆಲ್ಲಾ ಮಾಡಬೇಕು?
ಬೆಳಗ್ಗೆ ಎದ್ದ ಮೇಲೆ ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ಹಾಗೂ ನಿಮಗೆ ಇಷ್ಟವಾಗುವ ತೂಕ ಕಡಿಮೆ ಮಾಡುವ ಪಾನಿಯ ಸೇವಿಸಿ. ಉದಾಹರಣೆಗೆ ಜೀರಿಗೆ ನೀರು, ಜೇನುತುಪ್ಪ ಅಥವಾ ನಿಂಬೆಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಸೇವಿಸಿ ಇದರಿಂದ ತೂಕ ಕಡಿಮೆ ಆಗಬಹುದು.

ಜೊಬ್ಬು ಇಳಿಸಲು ಉಪಯುಕ್ತ ವ್ಯಾಯಮ ಅಂದರೆ ಅದು ವಾಕಿಂಗ್. ನೀವು ಆರಂಭದಲ್ಲಿ ಇದನ್ನು ಮಾಡಲು ಹಿಂಜರಿಯಬಹುದು. ಒಂದು ವೇಳೆ ಸರಿಯಾಗಿ 21 ದಿನಗಳು ವಾಕಿಂಗ್ ಮಾಡಲು ಆರಂಭಿಸಿದರೆ, ಇದು ನಿಮಗೆ ಅಭ್ಯಾಸವಾಗುತ್ತದೆ. ಇದರಿಂದ ನೀವು ಸುಲಭವಾಗಿ ಬೊಜ್ಜು ಕರಗಿಸಬಹುದು. ಅಲ್ಲದೆ ಕ್ರಮೇಣವಾಗಿ ವಾಕಿಂಗ್ ವೇಗ ಹಾಗೂ ದೂರವನ್ನು ಹೆಚ್ಚಿಸಬಹುದು.
ನಿಮ್ಮ ಆಹಾರದಲ್ಲಿ ಇವುಗಳು ಇದ್ದರೆ ಬೆಸ್ಟ್
ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಕಡಿಮೆ ಆಹಾರವನ್ನು ತಿಂದರೆ ಬೆಸ್ಟ್. ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ. ಅನ್ನವನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಿ. ಇದನ್ನು ತಿನ್ನುವುದರಿಂದ ತೂಕ ವೇಗವಾಗಿ ಹೆಚ್ಚಾಗುತ್ತದೆ. ಹೀಗಾಗಿ ಅಕ್ಕಿಯಿಂದ ದೂರ ಇದ್ದರೆ ಒಳ್ಳೆಯದು. ನಿಮ್ಮ ಆಹಾರದಲ್ಲಿ ಬಹುಧಾನ್ಯಗಳನ್ನು ಸೇರಿಸಿ. ಜೋಳ, ರಾಗಿ, ರಾಗಿ ಜೊತೆಗೆ ಹಸಿರು ತರಕಾರಿಗಳನ್ನೂ ಸೇವಿಸಲು ಆರಂಭಿಸಬೇಕು.

ನಿದ್ದೆ ಸರಿಯಾಗಿ ಮಾಡಿ
ತೂಕ ಕಡಿಮೆ ಮಾಡುವಲ್ಲಿ ನಿದ್ದೆ ಸರಿಯಾಗಿ ಮಾಡುವುದು ಬಹಳ ಮುಖ್ಯ. ನೀವು ಪ್ರತಿ ದಿನ 8 ಗಂಟೆ ನಿದ್ರೆ ಮಾಡುವುದು ಒಳ್ಳೆಯದು. ತೂಕ ಕಡಿಮೆ ಆಗದೇ ಇದ್ದಾಗ ಹತಾಶರಾಗದೆ ನಿಮ್ಮ ಕಾರ್ಯವನ್ನು ಮುಂದುವರೆಸಿ, ಫಲಿತಾಂಶ ತಡವಾಗಿ ಆದರೂ ಸಿಗುತ್ತದೆ.
ರಾತ್ರಿ 7 ರಿಂದ 8 ರ ನಡುವೆ ಊಟ ಮಾಡಿ. ರಾತ್ರಿ ತಡವಾದರೆ ಊಟವನ್ನು ಬಿಟ್ಟುಬಿಡಿ. ಆದರೆ 8 ಗಂಟೆಯ ನಂತರ ತಿನ್ನಬೇಡಿ. ನೀವು ಮಲಗುವ ಎರಡು ಗಂಟೆಗೆ ಮುಂಚಿತವಾಗಿ ಆಹಾರ ಸೇವಿಸಿ, ಲೈಟ್ ವಾಕಿಂಗ್ ಮಾಡಿದರೆ ಬೆಸ್ಟ್. ಹೀಗೆ ಮಾಡುವುದರಿಂದ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಒಮ್ಮೆ ಟ್ರೈ ಮಾಡಬಹುದು.
ಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದನ್ನು ರೂಢಿ ಮಾಡಿಕೊಳ್ಳಬೇಕು. ಹಣ್ಣಿನಲ್ಲಿ ಫೈಬರ್ ಅಂಶ ಇರುತ್ತದೆ. ಇದನ್ನು ತಿನ್ನೋದರಿಂದ ವಿಟಾಮಿನ್‌ಗಳು ಸಹ ಸಿಗುತ್ತವೆ. ಬೆಳಗ್ಗೆ ಹಾಗೂ ಸಾಯಂಕಾಲ ಸ್ನ್ಯಾಕ್ಸ್‌ನಲ್ಲಿ ಹಣ್ಣುಗಳನ್ನು ಸೇರಿಸಿ. ನಿಮ್ಮ ಆರೋಗ್ಯಕ್ಕೆ ಯಾವೆಲ್ಲಾ ಹಣ್ಣುಗಳು ಸೂಕ್ತ ಎನ್ನುವುದನ್ನು ವೈದ್ಯರನ್ನು ಸಂಪರ್ಕಿಸಿ ತಿಂದರೆ ಒಳ್ಳೆಯದು.
-
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
Popular Indian Foods: ಈ 5 ಆಹಾರಗಳು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಗಳು! -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ












Click it and Unblock the Notifications