Kabini Dam Water Level Today | ಕಬಿನಿ ಅಣೆಕಟ್ಟು ಇಂದಿನ ನೀರಿನ ಮಟ್ಟ
ಕಬಿನಿ ಅಣೆಕಟ್ಟು ಇತಿಹಾಸ:
ಮೈಸೂರು ಮಹಾರಾಜರ ಆಡಳಿತದಲ್ಲಿ ಕಬಿನಿ ವನ್ಯಮೃಗಗಳ ಬೇಟೆಗೆ ಹೆಸರುವಾಸಿಯಾಗಿತ್ತು. ಕಬಿನಿ ಜಲಾಶಯದ ಬಳಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮಂಚೇಗೌಡನಹಳ್ಳಿ, ಕುಪ್ಪೆ ಬೆಟ್ಟ ಇವೇ ಮುಂತಾದ ವನ್ಯಮೃಗಗಳ ತಾಣಗಳಿವೆ. ಕಾವೇರಿ ನದಿಯ ಕೆಳಮುಖ ಭಾಗವಾಗಿ ಕಬಿನಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ.ಕಬಿನಿ ಅಣೆಕಟ್ಟನ್ನು 1974 ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಬಳಿ ಕಟ್ಟಲು ಕಾರ್ಯ ಆರಂಭವಾಯಿತು.
ಅಣೆಕಟ್ಟು ಹುಟ್ಟು:
ಕಬಿನಿ ನದಿಯು ಕಾವೇರಿ ನದಿಯ ಉಪನದಿಯಾಗಿದ್ದು, ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ ಬಳಿ ಕಬಿನಿ ಅಣೆಕಟ್ಟನ್ನು ಕಟ್ಟಲಾಗಿದೆ. ಕಬಿನಿ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರಿಗೆ ಬಳಕೆ ಮಾಡಲಾಗುತ್ತದೆ.
ಕಬಿನಿ ಅಣೆಕಟ್ಟು ವಿಸ್ತೀರ್ಣ:
ಅಣೆಕಟ್ಟಿನ ಉದ್ದ 3,940 ಮೀಟರ್ ಇದೆ, ಎತ್ತರ 20,1168 ಮೀಟರ್, ಅಗಲ 696 ಮೀಟರ್ ಇದೆ. 105.63 ಕೋಟಿ ಸೆಂ,ಮೀನಷ್ಟು ಸಂಗ್ರಹ ಸಾಮರ್ಥ್ಯವಿದೆ ಅಂದರೆ 28 ಟಿಎಂಸಿಗಳಷ್ಟಿದೆ.

ಕಬಿನಿ ಅಣೆಕಟ್ಟು ಸಾಮರ್ಥ್ಯ:
ಕಬಿನಿ ಅಣೆಕಟ್ಟನ್ನು ಸಾಗರೆದೊಡ್ಡಕೆರೆ ಹುಲ್ಲುಮಲೆ ಗ್ರಾಮ ಮತ್ತು ನುಗು ಸಂಬೇಗೌಡನಹಳ್ಳಿ ಗ್ರಾಮ ಎಂಬ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಕಳೆದ ವರ್ಷ ಮೇ 22 ರಂದು 3.23 ಟಿಎಂಸಿಯಷ್ಟು ನೀರಿತ್ತು ಈಗ 4.69 ಟಿಎಂಸಿಯಷ್ಟು ನೀರಿದೆ. 136 ಕ್ಯೂಸೆಕ್ ಒಳಹರಿವಿದೆ. 600 ಕ್ಯೂಸೆಕ್‌ನಷ್ಟು ಹೊರ ಹರಿವಿದೆ.
ಕಬಿನಿ ಜಲಾಶಯ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು ಪ್ರೇಕ್ಷಣೀಯ ಸ್ಥಳಗಳು:
ಕಬಿನಿ ಜಲಾಶಯ, ಜಂಗಲ್ ಸಫಾರಿ, ವೈಲ್ಡ್‌ಲೈಫ್ ರೆಸಾರ್ಟ್, ಬೋಟಿಂಗ್, ಕಬಿನಿ ಜಲಾಶಯದ ವ್ಯೂ ಪಾಯಿಂಟ್.
ಕಬಿನಿ ಜಲಾಶಯ ಭೇಟಿ ನೀಡುವ ಸಮಯ:
ಭೇಟಿ ನೀಡುಬಹುದಾದ ಸಮಯ: ವಾರದ ಎಲ್ಲಾ ದಿನಗಳಲ್ಲೂ ಕಬಿನಿ ಜಲಾಶಯ ವೀಕ್ಷಣೆ ಮಾಡಬಹುದಾಗಿದೆ. ಬೆಳಗ್ಗೆ 10 ರಿಂದ ಸಂಜೆ 6.30ರವರೆಗೆ ತೆರೆದಿರುತ್ತದೆ. ಬೆಂಗಳೂರಿನಿಂದ ಮೈಸೂರು ರಸ್ತೆ ಮೂಲಕ ತೆರಳಬೇಕು ಸುಮಾರು 5 ಗಂಟೆ ಸಮಯ ಬೇಕು.












Click it and Unblock the Notifications