ಡುಮ್ಮಿ ಹೆಂಡತಿ Vs ಬಳುಕುವ ಬಳ್ಳಿ ಗೆಳತಿ!
ಮದುವೆಯಾಗಿ ಏಳನೇ ವರ್ಷದ ಸಂಭ್ರಮ ಮುಗಿಸಿದ ಮರುದಿನದಿಂದಲೇ ಗಂಡಿಗೇ ಆಗಲಿ ಹೆಣ್ಣಿಗೇ ಆಗಲಿ ಒಂಥರ ಚುಟುಚುಟು ಅನ್ನಲು ಶುರು ಮಾಡುತ್ತದಂತೆ. ಅದಕ್ಕೆ ಸೆವೆನ್ ಈಯರ್ಸ್ ಇಚ್ ಅಂತ ಕರೀತಾರೆ. ಹೆಂಡತಿ ಜೊತೆ ಹೋಗುತ್ತಿದ್ದಾಗ ಕಣ್ಣು ಸಹಜವಾಗಿ ಪಕ್ಕದಲ್ಲಿ ಹೋಗುತ್ತಿದ್ದ ಸುಂದರವಾದ ತರುಣಿಯೆಡೆಗೆ ಸಹಜವಾಗಿ ಸಾಗುತ್ತದಂತೆ.
ಗಂಡೇ ಆಗಲಿ ಹೆಣ್ಣೇ ಆಗಲಿ ಮದುವೆಯಾಚಿಗಿನ ಸಂಬಂಧಕ್ಕೆ ಹಾತೊರೆಯಲು ಶುರುಮಾಡುತ್ತಾರೆ ಎಂಬ ಸಿದ್ಧಾಂತವೊಂದಿದೆ. ಅಂದರೆ, ವಯಸ್ಸು ಮೂವತ್ತು ದಾಟುತ್ತಿದ್ದಂತೆ ಸಂಗಾತಿಯ ಮೇಲಿನ ಆಕರ್ಷಣೆ ಕಡಿಮೆಯಾಗಿ ಇನ್ನೊಂದು ಸಂಬಂಧವನ್ನು ಸರ್ಚ್ ಮಾಡಲು ಮನಸ್ಸು ಶುರುಹಚ್ಚಿಕೊಳ್ಳುತ್ತದೆ. ಇದನ್ನು ಅನೇಕರು ಒಪ್ಪುವುದಿಲ್ಲ. ತಮ್ಮದು ಜನ್ಮಜನ್ಮಾಂತರದ ಸಂಬಂಧ ಅಂತ ಘಂಟಾಘೋಷವಾಗಿ ಸಾರುತ್ತಾರೆ. ಅವರು ಸುಳ್ಳು ಹೇಳುತ್ತಿರುತ್ತಾರೆ.
ಹೇಳಿಕೊಳ್ಳಲಿ ಬಿಡಿ. ಮದುವೆ ಮಾಡಿಕೊಂಡು ಹೆಂಡತಿಯ ಜೊತೆಗೇ ಇಡೀ ಜೀವನ ಸವೆಸಬೇಕಾ ಅಥವಾ ಗರ್ಲ್ ಫ್ರೆಂಡನ್ನು ಹುಡುಕಿಕೊಳ್ಳಬೇಕಾ ಎಂಬುದು ಅವರವರಿಗೆ ಬಿಟ್ಟ ವಿಚಾರ. ಹೀಗೇ ಮಾಡಿ ಅಂತ ನಾವೇನೂ ಹೇಳುವುದಿಲ್ಲ. ಆದರೆ, ಹೆಂಡತಿ ಮತ್ತು ಗೆಳತಿನ ನಡುವಿನ ತುಲನೆ ನಿಜಕ್ಕೂ ಸ್ವಾರಸ್ಯಕರವಾಗಿದೆ. ಅದರಲ್ಲೂ ಹೆಂಡತಿಯನ್ನು ಟಿವಿಗೂ ಗರ್ಲ್ ಫ್ರೆಂಡನ್ನು ಮೊಬೈಲಿಗೂ ಹೋಲಿಸಿದರೆ ಹೇಗಿರತ್ತದೆಂದು ನೋಡುಣ ಬನ್ನಿ.
ಹೆಂಡತಿ = ಟಿವಿ ; ಗೆಳತಿ = ಮೊಬೈಲ್
ಮನೇಲಿದ್ದಾಗ ಟಿವಿ ನೋಡುವುದೇ ನಿಮ್ಮ ಕಾಯಕ
ಹೊರಗೆ ಹೊಂಟಾಗ ಮೊಬೈಲ್ ನಿಮ್ಮ ಜೊತೆಯಲ್ಲಿರತ್ತೆ
ಹಣ ಇಲ್ಲದಿದ್ದರೆ, ಕರ್ಮವೆಂದು ಹಳೆ ಟಿವಿಯನ್ನೇ ಮನೇಲಿ ಇಟ್ಟುಕೊಳ್ಳುತ್ತೀರಿ
ದುಡ್ಡು ಝಣ್ ಝಣ್ ಅನ್ನುತ್ತಿದ್ದಂತೆ ಹಳೆ ಮೊಬೈಲ್ ಕೊಟ್ಟು ಹೊಸದು ಕೊಳ್ಳುತ್ತೀರಿ
ಟಿವಿ ನೋಡುವುದನ್ನು ನೀವು ಆಗಾಗ ಎಂಜಾಯ್ ಮಾಡುತ್ತೀರಿ
ಯಾವಾಗಲೂ ಮೊಬೈಲ್ ಜೊತೆ ಆಟವಾಡಲು ಇಷ್ಟಪಡುತ್ತೀರಿ
ಟಿವಿ ಒಂದು ಸತಿ ಕೊಂಡರೆ, ಇಡೀ ಜೀವನಪರ್ಯಂತ ಅದು ಉಚಿತ
ಮೊಬೈಲನ್ನು ಆಗಾಗ ರಿಚಾರ್ಜ್ ಮಾಡಿಸುತ್ತಲೇ ಇರಬೇಕು, ಇಲ್ಲದಿದ್ದರೆ ಸರ್ವೀಸ್ ಸಿಗುವುದಿಲ್ಲ
ದಪ್ಪಗಿರುವ ಟಿವಿಯನ್ನು ಒಂದು ಮೂಲೆಯಲ್ಲಿ ಕುಕ್ಕರಿಸಿಡುತ್ತೀರಿ
ಮೊಬೈಲ್ ಹಾಗಲ್ಲ ತೆಳ್ಳಗೆ ಕರ್ವಿಕರ್ವಿಯಾಗಿ ಬಳಕುವ ಬಳ್ಳಿಯಂತಿರುತ್ತದೆ
ಟಿವಿ ಮೇಲೆ ನೀವು ಮಾಡುವ ಖರ್ಚು ಕಡಿಮೆ
ಮೊಬೈಲ್ ಮೇಲೆ ಆಗಾಗ ರೊಕ್ಕ ಸುರಿಯುತ್ತಲೇ ಇರಬೇಕಾಗುತ್ತದೆ!
ಟಿವಿ ಜೊತೆ, ಇಷ್ಟಪಡುತ್ತೀರೋ ಇಲ್ಲವೋ, ಒನ್ ವೇ ಟಾಕಿಂಗ್
ಮೊಬೈಲ್ ಜೊತೆ ಟೂ ವೇ ಟಾಕಿಂಗ್
ಆದರೆ, ಒಂದು ಮಾತು ನೆನಪಿನಲ್ಲಿಡಿ. ಟಿವಿಗೆ ವೈರಸ್ ಅಂಟಿಕೊಳ್ಳುವುದಿಲ್ಲ. ಮೊಬೈಲ್‌ಗೆ ವೈರಸ್ ಯಾವಾಗ ಅಮರಿಕೊಳ್ಳುತ್ತದೋ ಬಲ್ಲವರಾರು? ಈಗ ಹೇಳಿ ಅಥವಾ ನೀವೇ ನಿರ್ಧರಿಸಿ. ಹೆಂಡತಿ ಜೀವನ ಸಂಗಾತಿಯಾಗಿದ್ದರೆ ಸಂತಸವೋ, ಗೆಳತಿ ಜೊತೆಗಿದ್ದರೆ ಹಿತವೋ? [ಗಂಡ ಹೆಂಡತಿ ಜೋಕ್ಸ್]












Click it and Unblock the Notifications