ಪೆದ್ದ ಗುಂಡ ಕಿಟಕಿಯಲ್ಲಿ ನೋಡುತ್ತಿದ್ದುದು ಯಾರನ್ನ?
ತಿಮ್ಮ ಮೇಷ್ಟ್ರು ಒಂದು ದಿನ ತದೇಕಚಿತ್ತದಿಂದ ಪಾಠ ಮಾಡುತ್ತಿದ್ದರೆ, ಪೆದ್ದ ಗುಂಡ ಪದೇಪದೇ ಕಿಟಕಿಯತ್ತ ನೋಡುತ್ತಿದ್ದ. ಇದರಿಂದಾಗಿ ತಿಮ್ಮ ಮೇಷ್ಟ್ರ ಏಕಾಗ್ರತೆಗೆ ಭಂಗ ಬರುತ್ತಿತ್ತು. ಗುಂಡನತ್ತ ದೃಷ್ಟಿ ಹಾಯಿಸಿದಾಗ ಪಾಠ ಕೇಳುವವನಂತೆ ತಿರುಗುತ್ತಿದ್ದ ಗುಂಡ, ಮೇಷ್ಟ್ರು ಪಾಠದಲ್ಲಿ ಗಮನ ಹರಿಸುತ್ತಿದ್ದಂತೆ ಕಿಟಕಿಯತ್ತ ದೃಷ್ಟಿ ಹೊರಳಿಸುತ್ತಿದ್ದ. ನೋಡುವಷ್ಟು ನೋಡಿ 'ಏ ಗುಂಡ' ಎಂದು ಅಕ್ಕಪಕ್ಕದ ನಾಲ್ಕು ಕ್ಲಾಸುಗಳಿಗೆ ಕೇಳಿಸುವಷ್ಟು ಗಟ್ಟಿಯಾಗಿ ಕಿರುಚಿದರು.
ತಿಮ್ಮ : ಏಯ್ ಗುಂಡ, ಎಲ್ಲೋ ಲಕ್ಷ್ಯ ನಿಂದು? ಯಾಕೋ ಶಾಲೆಗೆ ಬರ್ತೀಯಾ?
ಗುಂಡ : ಸಾರ್, ವಿದ್ಯಾಗಾಗಿ ಬರ್ತೀನಿ ಸಾರ್!
ತಿಮ್ಮ : ಹಾಗಿದ್ರೆ, ಪಾಠ ಕೇಳೋದು ಬಿಟ್ಟು ಕಿಟಕಿಯತ್ತ ಯಾಕೋ ನೋಡ್ತಿದ್ದೀಯಾ?
ಗುಂಡ : ಅದೇ ಸಾರ್, ನಿಮ್ಮ ಮಗಳು ವಿದ್ಯಾ ಬರ್ತಾಳಂತ ನೋಡ್ತಿದ್ದೀನಿ ಸಾರ್!
***
ಕೋಳಿ ಕೂಗೋದೇ ಬೆಳಿಗ್ಗೆ 9ಕ್ಕೆ!
ಒಂದು ದಿನ ತಿಮ್ಮ ತರಗತಿಗೆ ತಡವಾಗಿ ಬಂದ. ತಿಮ್ಮನನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದರು ಮೇಷ್ಟ್ರು ಗುಂಡಣ್ಣನವರು.
ಗುಂಡ : ಲೇ ತಿಮ್ಮ ಯಾಕೋ ಕ್ಲಾಸಿಗೆ ಲೇಟಾಗಿ ಬಂದೆ?
ತಿಮ್ಮ : ಏನ್ಮಾಡೋದು ಸಾರ್, ನಮ್ಮ ಕೋಳಿ ಕೂಗೋದೇ 9 ಗಂಟೆಗೆ ಸಾರ್!












Click it and Unblock the Notifications