ಮೊನ್ನೆ ಸತೀಸ ಓಡಿಹೋಗಿಬಿಟ್ಟ ಕಣ್ಲಾ!
ದಿನೇಸ : ಲೇ ಸುರೇಸ, ಸತೀಸ ಯಾಕೋ ಇತ್ತೀಚೆಗೆ ಕಂಡೇ ಇಲ್ಲ. ಏನಾಯ್ತು?
ಸುರೇಸ : ಏನ್ ಹೇಳ್ಲಿ ಕಣ್ಲಾ ದಿನೇಸ, ಮೊನ್ನೆ ಸತೀಸ ಓಡಿಹೋಗಿಬಿಟ್ಟ ಕಣ್ಲಾ. ಎಲ್ಲಿಗೋದ ಅಂತ ಯಾರಿಗೂ ಗೊತ್ತಿಲ್ಲ.
ದಿನೇಸ : ವಾಟ್ ಓಡಿಹೋದ್ನ? ಯಾಕೆ ಓಡಿಹೋದ? ಎನಿ ಕ್ಲೂ?
ಸುರೇಸ : ಕೆಲ ದಿನಗಳ ಹಿಂದೆ ಅವನ ಹೆಂಡ್ತಿ ಓಡಿಹೋಗಿಬಿಟ್ಲಂತೆ. ಹೆಂಡ್ತೀನ ಕಂಡ್ರೇನೇ ಆಗ್ತಿರಲಿಲ್ಲ ಅವನಿಗೆ.
ದಿನೇಸ : ಮತ್ತೆ ಒಳ್ಳೇದೇ ಆಯ್ತಲ್ಲ. ಅವನ ಹಳೆ ಲವ್ವರ್ನ ಮದುವೆ ಆಗಬೋದಿತ್ತು. ಈ ನನ್ ಮಗಾ ಯಾಕೆ ಓಡಿಹೋದ?
ಸುರೇಸ : ಓಡಿಹೋಗಿರೋ ಹೆಂಡ್ತಿ ಮತ್ತೆಲ್ಲಿ ಮನಸು ಬದಲಾಯಿಸಿ ವಾಪಸ್ ಬರ್ತಾಳೋ ಅಂತ ಇವನೇ ಓಡಿಹೋದ ಕಣ್ಲಾ.
***
ಓಡಿ ಹೋಗೋಕೆ ಒಂದು ವರ್ಷ ಕಾಯಬೇಕಾಯ್ತು!
ಸುಬ್ಬು : ನಿನ್ ಹೆಂಡ್ತಿ ಯಾರ್ದೋ ಜೊತೆ ಓಡಿಹೋದಳಂತೆ ಹೌದೇನೋ?
ಡಿಬ್ಬಿ : ಯಸ್ ಸುಬ್ಬು.
ಸುಬ್ಬು : ಹ್ಯಾಗೆ ಓಡಿ ಹೋದಳು. ನಿನಗೆ ಗೊತ್ತಾಗಲೇ ಇಲ್ವಾ?
ಡಿಬ್ಬಿ : ಇಲ್ಲ ಕಣೋ, ನಾನು ಸ್ನಾನ ಮಾಡುತ್ತಿದ್ದಾಗ ಹೇಳದೆ ಕೇಳದೆ ಓಡಿಹೋಗಿದ್ದಾಳೆ.
ಸುಬ್ಬು : ಪಾಪ ಒಂದು ವರ್ಷದಿಂದ ಈ ಅಪಾರ್ಚುನಿಟಿಗಾಗಿ ಕಾಯ್ತಿದ್ದಳಂತೆ ಕಾಣತ್ತೆ!












Click it and Unblock the Notifications