ಆಷಾಢದ ರಾತ್ರಿಯಲ್ಲಿ ಧೋಧೋ ಸುರಿವ ಮಳೆಯಲ್ಲಿ!

ಆಷಾಢದ ಒಂದು ದಿನ ಕವಿದ ಕಾರ್ಮೋಡ, ಸುರಿಯುತ್ತಿರುವ ಧೋಧೋ ಮಳೆ. ಆಗಸದಲ್ಲಿ ಚಿತ್ತಾರ ಬಿಡಿಸುತ್ತಿದ್ದ ಮಿಂಚಿನ ಬಳ್ಳಿಯತ್ತ ಕಣ್ಣು ಹಾಯಿಸಿದ ಟ್ರಾವೆಲ್ ಏಜೆನ್ಸಿ ಮಾಲಿಕನಿಗೆ ವಿಶಿಷ್ಟ ದೃಶ್ಯ ಕಂಡಿತ್ತು.

ವಯಸ್ಸಾದ, ಆದರೆ ನೋಡಲು ಲಕ್ಷಣವಾದ ಮತ್ತು ಅನುರೂಪದ ಜೋಡಿಯಂತಿದ್ದ ಇಬ್ಬರು ಕಣ್ಣಿಗೆ ಕಂಡರು. ಇಬ್ಬರೂ ಕಚೇರಿಯ ಕಿಟಕಿಯ ಗಾಜಿನಿಂದ ಗೋಡೆಯುದ್ದಕ್ಕೂ ಅಂಟಿಸಲಾದ ವಿಶ್ವದ ಅತ್ಯದ್ಭುತ ತಾಣಗಳ ಪಟಗಳನ್ನು ತದೇಕಚಿತ್ತದಿಂದ ನೋಡುತ್ತಿದ್ದರು.

ಎಷ್ಟೊತ್ತಾದರೂ ಗೋಡೆಯ ಮೇಲೆ ಕೀಲಿಸದ ಕಣ್ಣನ್ನು ಅವರಿಬ್ಬರೂ ತೆಗೆಯುತ್ತಲೇ ಇರಲಿಲ್ಲ. ಅವರ ಕಂಗಳಲ್ಲಿ ಚಿತ್ರಪಟ ನೋಡಿ ಆನಂದಿಸುವ ಭಾವ ಬಿಟ್ಟು ಬೇರೇನೂ ಇರಲಿಲ್ಲ. ನೋಡಲು ಲಕ್ಷಣವಾಗಿದ್ದರೂ ಸ್ಥಿತಿವಂತರಂತೆ ಅವರಿಬ್ಬರೂ ಕಾಣುತ್ತಿರಲಿಲ್ಲ.

ಆ ತಿಂಗಳು ಟ್ರಾವೆಲ್ ಏಜೆನ್ಸಿ ಮಾಲಿಕನಿಗೆ ಭರ್ಜರಿ ಆದಾಯ ಬಂದಿತ್ತು, ಮನಸ್ಸು ಸಂತೃಪ್ತಿ ಹೊಂದಿತ್ತು. ಅವರಿಬ್ಬರನ್ನು ಕಂಡು ಆತನ ಮನಸ್ಸು ಮಮ್ಮಲ ಮರುಗಿತು. ಮನದಲ್ಲಿ ಅದೇನು ಹೊಳೆಯಿತೋ, ಅವರಿಬ್ಬರನ್ನು ಒಳಗೆ ಕರೆದ, ಆದಾರದಿಂದ ಕುರ್ಚಿಯ ಮೇಲೆ ಕೂರಿಸಿದ.

Who was that old guy I had to share the room with?

ಅವರಿಬ್ಬರಿಗೂ ಕಾಫಿ, ಬಿಸ್ಕತ್ತು ತರಿಸಿಕೊಟ್ಟ. ಒಂದೇ ಒಂದು ಮಾತನ್ನೂ ಆಡದೆ, ಆತನ ಆದರವನ್ನು ಅವರಿಬ್ಬರೂ ಸ್ವೀಕರಿಸಿದರು. ನಂತರ ಆತನೇ ಮಾತು ಮುಂದುವರಿಸಿದ.

"ಅದೇನು ದೈವ ಪ್ರೇರಣೆಯೋ ಏನೋ ತಿಳಿಯುತ್ತಿಲ್ಲ. ನಿಮ್ಮಿಬ್ಬರಿಗೂ ನಾನೊಂದು ಅಚ್ಚರಿ ನೀಡುತ್ತಿದ್ದೇನೆ. ನನ್ನದೇ ಖರ್ಚಿನಲ್ಲಿ ನಿಮ್ಮಿಬ್ಬರನ್ನೂ ಕುಲು ಮನಾಲಿಗೆ ನಾಲ್ಕು ರಾತ್ರಿ ಐದು ದಿನಗಳ ಪ್ಯಾಕೇಜ್ ಟೂರಿಗೆ ಕಳಿಸುತ್ತಿದ್ದೇನೆ. ದಯವಿಟ್ಟು ಇಬ್ಬರೂ ಇಲ್ಲ ಅನ್ನುವ ಹಾಗೇ ಇಲ್ಲ..."

ಅಂದಾಜು ಎಪ್ಪತ್ತರ ಹರೆಯದ ಮುದುಕ ಏನೋ ಹೇಳಲು ಬಾಯಿ ತೆರೆದರೂ, ಅಂಗಡಿ ಮಾಲಿಕ ಅವರ ಬಾಯಿಯನ್ನು ಮುಚ್ಚಿಸಿದ. ತಾನು ಮಾಡುತ್ತಿರುವ ಉದಾತ್ತ ಕೆಲಸದಿಂದ ಆತನ ಹೃದಯ ತುಂಬಿ ಬಂದಿತ್ತು. ತನ್ನ ಸೆಕ್ರೆಟರಿಗೆ ಹೇಳಿ ಎರಡು ಟು ಅಂಡ್ ಫ್ರೋ ಏರ್ ಟಿಕೆಟ್ ಬುಕ್ ಮಾಡಿದ. ಫೈವ್ ಸ್ಟಾರ್ ಹೋಟೆಲಿನಲ್ಲಿ ನಾಲ್ಕು ರಾತ್ರಿ, ಐದು ದಿನಗಳ ಮಟ್ಟಿಗೆ ರೂಂ ಬುಕ್ ಮಾಡಿ ಅವರ ಕೈಗಿತ್ತ.

ಅವರಿಬ್ಬರು ಮರು ಮಾತಾಡದೆ, ಫ್ಲೈಟ್ ಟಿಕೆಟ್ ಮತ್ತು ಹೋಟೆಲ್ ರೂಂ ಬುಕ್ ಮಾಡಿದ ಲೆಟರ್ ಹಿಡಿದುಕೊಂಡು ಹೊರನಡೆದರು. ಅಂಗಡಿ ಮಾಲಿಕ, ಸೆಕ್ರೆಟರಿಯನ್ನು ಮನೆಗೆ ಕಳಿಸಿ, ಮೂಲೆಯಲ್ಲಿದ್ದ ದೇವರಿಗೆ ಕೈಮುಗಿದು, ತನ್ನ ಕೆಲಸವನ್ನು ಮುಗಿಸಿ, ಅಂಗಡಿಗೆ ಬೀಗ ಜಡಿದು ಮನೆಗೆ ಹೊರಟ. ಮಳೆ ಸುರಿಯುತ್ತಲೇ ಇತ್ತು.

ನೋಡನೋಡುತ್ತಿದ್ದಂತೆ ವಾರ ಕಳೆಯಿತು. ಅಂದು ಟಿಕೆಟ್ ಇಸಿದುಕೊಂಡು ಹೋಗಿದ್ದ ಮುದುಕಿ ಅಂಗಡಿಗೆ ಬಂದಳು. ಮಾಲಿಕನಿಗೆ ಮುದುಕಿಯನ್ನು ಖುಷಿಯಿಂದ ಬರಮಾಡಿಕೊಂಡ, ಪ್ರವಾಸ ಹೇಗಿತ್ತು, ಏನಾದರೂ ತೊಂದರೆಯಾಯಿತಾ, ಊಟೋಪಚಾರ ಹೇಗಿತ್ತು, ಆರೋಗ್ಯ ಹದಗೆಡಲಿಲ್ಲ ತಾನೆ ಅಂತೆಲ್ಲ ವಿಚಾರಿಸಿದ.

ಮೊದಲ ಬಾರಿ ಮುದುಕಿ ಬಾಯಿಬಿಟ್ಟಳು, "ಥ್ಯಾಂಕ್ಯೂ ವೆರಿ ಮಚ್. ವಿಮಾನ ಪ್ರಯಾಣ ಅದ್ಭುತವಾಗಿತ್ತು. ಫೈವ್ ಸ್ಟಾರ್ ಹೋಟೆಲ್ ಆತಿಥ್ಯ ಕೂಡ ಅಷ್ಟೇ ಚೆನ್ನಾಗಿತ್ತು. ಮತ್ತೆ ಇನ್ನೇನು ಹೇಳುವುದು... ಹಾ.. ಅಂದ ಹಾಗೆ, ನನ್ನ ಜೊತೆ ರೂಂ ಶೇರ್ ಮಾಡಿಕೊಂಡ ಆ ಮುದುಕ ಯಾರು?"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+