ಜೋಕ್ಸ್: ಹೆಂಡತಿ ಎದುರಿಗಿದ್ರೆ ಹೇಗಿರಬೇಕು?
ಮಂಜುನಾಥ ಬಸ್ ಸ್ಟಾಂಡಲ್ಲಿ ನಿಂತಿದ್ದ. ಪಕ್ಕದಲ್ಲಿದ್ದ ಕಾಲೇಜು ಹುಡುಗಿಗೆ ಮಂಜುನಾಥನ ಮೇಲೆ ಲವ್ವಾಯಿತು.
ಯಾವುದೇ ಹಿಂಜರಿಕೆ ಇಲ್ಲದೇ ಅಲ್ಲಿಯೇ ಪ್ರಪೋಸ್ ಮಾಡಿದಳು 'ಐ ಲವ್ ಯೂ.. ನನ್ನ ಮದುವೆ ಆಗ್ತೀರಾ? ಅಂದಳು ಯುವತಿ
ಅದಕ್ಕೆ ಮಂಜುನಾಥ ಹೇಳಿದ ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕ ಬದನೆಕಾಯಿ. ಓದುವ ವಯಸ್ಸಿನಲ್ಲಿ ಪ್ರೀತಿಗೀತಿ ಅಂತ ತಲೆ ಕೆಡಿಸಿಕೊಂಡು ಜೀವನವನ್ನು ಹಾಳು ಮಾಡಕೋಬೇಡ. ಚೆನ್ನಾಗಿ ಓದಿ ಒಳ್ಳೆ ಹೆಸರು ಮಾಡು. ನಂತರ ಅಪ್ಪ ಅಮ್ಮ ತೋರಿಸಿದ ಹುಡುಗನನ್ನು ಮದುವೆಯಾಗಿ ಸಂತೋಷದಿಂದಿರು ಎಂದ.[ಹೆಂಡತಿ ಮಾತ್ರ ಸಾವನ್ನಪ್ಪುವ ಹಳೇ ಕಾರನ್ನು ಖರೀದಿಸಿದ ತಿಮ್ಮ]

ಹುಡುಗಿಗೆ ಬೇಜಾರಾಯಿತು. ನಂತರ ಪತ್ರ ದಲ್ಲಿ ಏನ್ನನ್ನೋ ಬರೆದು ವಿಶ್ವನಾಥ ಆಕೆಗೆ ನೀಡಿ ಹೇಳಿದ ನಿರಾಸೆಯಾಗಬೇಡ.
ಬಿಡುವಿದ್ದಾಗ ಈ ಪತ್ರವನ್ನು ಓದು. ನಿರಾಸೆ ಮಾಯವಾಗಿ ಜೀವನದಲ್ಲಿ ಹೊಸ ಉತ್ಸಾಹ ಮೂಡುತ್ತದೆ. ಆ ಹುಡುಗಿ ಅಳುತ್ತಾ ಮನೆಗೆ ಹೋದಳು.. ಬೇಜಾರಿನಿಂದ ರಾತ್ರಿ ಊಟವನ್ನೂ ಮಾಡದೇ ಹಾಗೆಯೇ ಮಲಗಿದಳು.
ರಾತ್ರಿ ನಿದ್ದೆ ಯೂ ಬರಲಿಲ್ಲ.
ಆಗ....
ಆ ಪತ್ರ ನೆನಪಾಯಿತು.
ಪತ್ರ ವನ್ನು ತೆಗೆದು ನೋಡಿದಳು. ಅದರಲ್ಲಿ ಹೀಗೆ ಬರೆದಿತ್ತು.
ಹುಚ್ಚಿ, ನಿನಗೆ ಕಣ್ಣು ಕಾಣೋದಿಲ್ವಾ?
ನನ್ನ ಹೆಂಡತಿ ಹಿಂದೆಯೇ ನಿಂತಿರುವಾಗ ಪ್ರಪೋಸ್ ಮಾಡ್ತೀಯಲ್ಲಾ..
ನನಗೂ ನೀನು ಇಷ್ಟ ಆಗಿದ್ದೀಯ
ತಗೋ, ಇದು ನನ್ನ ನಂಬರ್.
ಮಿಸ್ ಕಾಲ್ ಕೋಟ್ರೆ ನಾನೇ ಕಾಲ್ ಮಾಡ್ತೀನಿ.
ಐ ಲವ್ ಯು ಟೂ !












Click it and Unblock the Notifications