ಇಪ್ಪತ್ತೈದ ಲಕ್ಷದ ನಾಲ್ಕ ಗಂಡ ಸಿಕ್ಕ್ರೂ ಅಡ್ಡಿ ಇಲ್ಲ!
ಅಕ್ಕಲಕೋಟ ಆಶಾ ಮತ್ತ್ ಉಮಚಗಿ ಉಷಾ ಕಿತ್ತೂರ ಚೆನ್ನಮ್ಮಾ ರೈಲ್ ನ್ಯಾಗ ಒಂದ ದಿನಾ ಎಲ್ಲೋ ಹೊಂಟಿದ್ರು... ಇಬ್ಬರೂ ಒಬ್ಬರಿಗೊಬ್ಬರು ಪರಿಚಯ. ಭಾಳ ದಿನಾ ಆದ ಮ್ಯಾಲ ಒಟ್ಟಿಗೆ ಸೇರಿ ಯಾವುದೋ ಊರಿಗೆ ಹೊಂಟಿದ್ರು. ಕಾಲಕ್ಷೇಪ ಮಾಡಲಾಕ ಚುನಮರಿ ಗಿರಮಿಟ್ ತಿನ್ನಕೋತ ಹರಟಿ ಶುರು ಹಚ್ಚಿದರು.
ಉಷಾ : ನಿಂಗ್ ಯಾವ ತರ ಗಂಡ ಬೇಕಲೇ ಆಶಾ?
ಆಶಾ : ನಂಗ್ ಕೋಟ್ಯಾಧೀಶ ಗಂಡ ಬೇಕು ನೋಡಬೇ ಉಷಾ
ಉಷಾ : ಕನಸ ಛೋಲೋ ಐತಿ ಬಿಡ. ಕೋಟ್ಯಾಧೀಶ ಗಂಡ ಸಿಗದಿದ್ರ ಏನ ಮಾಡತಿ?
ಆಶಾ : ಐವತ್ತ್ ಲಕ್ಷದ್ದ್ ಇಬ್ಬರು ಗಂಡ ಸಿಕ್ಕ್ರ ಅಡ್ಡಿ ಇಲ್ಲಾ...!
ಉಷಾ : ಭಾರೀ ಅದಿ ನೀನೂ. ಅದೂ ಸಿಗದಿದ್ರ..?
ಆಶಾ : ಇಪ್ಪತ್ತೈದ್ ಲಕ್ಷದ್ ನಾಲ್ಕ ಗಂಡ ಸಿಕ್ಕ್ರ ಅಡ್ಡಿ ಇಲ್ಲಾ, ಕಟ್ಟಿಕೊಳ್ಳಾಕ ನಾ ರೆಡಿ!
ಉಷಾ ತಲಿ ತಿರಗಿ ಬೀಳೋದೊಂದ ಬಾಕಿ ಇತ್ತು. ಅಷ್ಟರಾಗ, ತೊಡಿ ನಡಕ ಕೈ ಸಿಗಿಸಿಕೊಂಡ ಅಪ್ಪರ್ ಕ್ಲಾಸನ್ಯಾಗ ಮಲಗಿದ್ದ ಬಸ್ಯಾ... "ಏ ಯವ್ವಾ, ಐವತ್ತ್ ರೂಪಾಯಿಗೆ ಬಂದಾಗ ನನ್ನ ಸ್ವಲ್ಪ ಎಬಸವ್ವ ಅಕ್ಕಾ...!" ಅಂತ ಹೇಳಿ ಮತ್ತ ನಿದ್ದಿ ಹೊಡೀಲಿಕ್ಕೆ ಶುರು ಮಾಡಿದ. (ವಾಟ್ಸಾಪ್ ನಲ್ಲಿ ಬಂದಿದ್ದು)












Click it and Unblock the Notifications