ಗಡಿಯಾರಕ್ಕೂ ಹೆಂಡತಿಗೂ ಏನು ವ್ಯತ್ಯಾಸ?
ಗಡಿಯಾರಕ್ಕೂ ಹೆಂಡತಿಗೂ ಏನು ವ್ಯತ್ಯಾಸ?
ಗಡಿಯಾರ ಕೆಟ್ಟರೆ ಬಂದ್ ಆಗಿಬಿಡುತ್ತದೆ. ಆದರೆ, ಹೆಂಡತಿ ಕೆಟ್ಟರೆ ಶುರು ಹಚ್ಚಿಕೊಂಡುಬಿಡುತ್ತಾಳೆ!
***
ಗರ್ಭಿಣಿ ಮಹಿಳೆಯೊಬ್ಬಳು ತನ್ನ ಭವಿಷ್ಯ ಕೇಳಲು ಜ್ಯೋತಿಷಿ ಬಳಿ ಹೋಗುತ್ತಾಳೆ.
ಮಹಿಳೆ : ನನಗೆ ಹುಟ್ಟುವ ಮಗುವ ಬಗ್ಗೆ ಹೇಳಿ.
ಜ್ಯೋತಿಷಿ : ನಿಮಗೆ ಮಗು ಹುಟ್ಟುತ್ತಿದ್ದಂತೆ, ಮಗುವಿನ ತಂದೆ ಸತ್ತು ಹೋಗುತ್ತಾರೆ.
ಮಹಿಳೆ : ಥ್ಯಾಂಕ್ ಗಾಡ್, ನನ್ನ ಗಂಡನಿಗೆ ಏನೂ ಆಗಲ್ಲಾ ತಾನೇ.
***
ಸಂಸಾರಿಕ ತೊಂದರೆಯಿಂದ ಬೇಜಾರಾಗಿದ್ದ ಗುಂಡ ಒಮ್ಮೆ ತಪಸ್ಸಿಗೆ ಕೂತ. ಆತನ ಘನಘೋರ ತಪಸ್ಸಿಗೆ ಮೆಚ್ಚಿ, ದೇವರು ಪ್ರತ್ಯಕ್ಷನಾದ.
ದೇವರು : ಭಕ್ತ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಬೇಕಾದ ವರವನ್ನು ಕೇಳು.
ಗುಂಡ : ಮೈ ಗಾಡ್, ನಿಮ್ಮನ್ನು ಯಾರ್ರೀ ಕರೆದಿದ್ದು? ಸುಮ್ನೆ ಹೋಗಿ.. ತಪಸ್ಸು ಕೆಡಿಸಲು ರಂಭೆ, ಮೇನಕೆ ಯಾರನ್ನಾದರೂ ಕಳುಹಿಸಿ.
***
ಗುಂಡ ತಡವಾಗಿ ಬಂದ. ಬಾಗಿಲಲ್ಲೇ ಅವನಿಗಾಗಿ ಹೆಂಡತಿ ಕಾಯುತ್ತಿದ್ದಳು.
ಹೆಂಡತಿ : ಯಾಕ್ರೀ ಲೇಟ್? ಇಷ್ಟು ಹೊತ್ತು ಎಲ್ಲಿ ಹೋಗಿದ್ರಿ?
ಗುಂಡ : 'ತಾಯಿಯ ಪ್ರೀತಿ' ಕನ್ನಡ ಸಿನಿಮಾ ನೋಡೋಕೆ ಹೋಗಿದ್ದೆ.
ಹೆಂಡತಿ : ಹೌದಾ. ಒಳಗೆ ಬನ್ನಿ. 'ಹೆಂಡತಿ ಕೋಪ' ಸಿನಿಮಾ ತೋರಿಸ್ತೀನಿ.












Click it and Unblock the Notifications