ಸೂಪರ್ ಡೂಪರ್ ಮಸ್ತ್ ಸರ್ದಾರ್ಜಿ ಜೋಕುಗಳು
ಖತರ್ನಾಕ್ ಸರ್ದಾರ್ಜಿಗಳಿಬ್ಬರು ಕಾರಿನ ಬುಡಕ್ಕೆ ಬಾಂಬ್ ಸಿಕ್ಕಿಸುತ್ತಿರುತ್ತಾರೆ. ಬಾಂಬ್ ಸಿಲುಕಿಸಿ ಕಾರನ್ನು ಉಡಾಯಿಸುವ ಹಿಂದಿನ ಉದ್ದೇಶವೇನು ಎಂಬುದು ಇಬ್ಬರಿಗೂ ಗೊತ್ತಿರುವುದಿಲ್ಲ, ಅವರಿಗೆ ಯಾರೂ ಹೇಳಿರುವುದಿಲ್ಲ. ಆದರೆ, ಅವರಲ್ಲಿ ಒಬ್ಬನಿಗೆ ಒಂದು ಸಂದೇಹ ಬರುತ್ತಿದೆ.
ಸರ್ದಾರ್ಜಿ 2 : ಓಯ್, ನಿಲ್ಲೋ ನಿಲ್ಲು. ಬಾಂಬ್ ಫಿಕ್ಸ್ ಮಾಡುವ ಹಂತದಲ್ಲಿ ಅದೇ ಸ್ಫೋಟವಾಗಿಬಿಟ್ಟರೆ ಏನೋ ಮಾಡ್ತೀಯಾ?
ಸರ್ದಾರ್ಜಿ 1 : ಸ್ಫೋಟ ಆದ್ರೆ ಆಗ್ಲಿ ಬಿಡೋ ಚಿಂತೆ ಮಾಡ್ಬೇಡ. ನನ್ನ ಬಳಿ ಇನ್ನೊಂದು ಬಾಂಬ್ ಇದೆ!
***
ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಟೀಚರ್ ಮೊದಲ ಬಾರಿ ಪಾಠ ಮಾಡಲು ಬಂದಿರುತ್ತಾರೆ. ವಿದ್ಯಾರ್ಥಿಗಳು ಹೊಸಬರಾದ್ದರಿಂದ ಅವರ ಪರಿಚಯ ಮಾಡಿಕೊಳ್ಳಲು ಬಯಸುತ್ತಾರೆ. ಟೀಚರ್ ಹೊಸಬರಾದ್ದರಿಂದ ವಿದ್ಯಾರ್ಥಿಗಳು ಕೂಡ ಟೀಚರ್ ಜೊತೆ ಸ್ವಲ್ಪ ಕೀಟಲೆ ಮಾಡಬೇಕೆಂದು ಬಯಸುತ್ತಾರೆ.
ಟೀಚರ್ : (ಒಟ್ಟು ಮರಿ ಸರ್ದಾರ್ಜಿಯನ್ನು ಉದ್ದೇಶಿಸಿ) ನಿನ್ನ ಹೆಸರೇನು? ನೀನು ಹುಟ್ಟಿದ್ದು ಯಾವ ಊರಿನಲ್ಲಿ?
ಮರಿ ಸರ್ದಾರ್ಜಿ : ನನ್ನ ಹೆಸರು ಸುಖಮಿಂದರ್. ನಾನು ಹುಟ್ಟಿದ್ದು ತಿರುವನಂತಪುರದಲ್ಲಿ.
ಟೀಚರ್ (ಕೀಟಲೆಯನ್ನು ಗ್ರಹಿಸಿ) : ಹೌದಾ? ತಿರುವನಂತಪುರದಲ್ಲಿ ಹುಟ್ಟಿದ್ದಾ? ಎಲ್ಲಿ ತಿರುವನಂತಪುರದ ಸ್ಪೆಲ್ಲಿಂಗ್ ಇಲ್ಲಿ ಬೋರ್ಡಿನ ಮೇಲೆ ಬರಿ ಬಾ ನೋಡೋಣ?
ಮರಿ ಸರ್ದಾರ್ಜಿ : ಈಗ ನೆನಪಾಯಿತು. ನನಗನಿಸತ್ತೆ ನಾನು ಹುಟ್ಟಿದ್ದು ಗೋವಾದಲ್ಲಿ. ಅದರ ಸ್ಪೆಲ್ಲಿಂಗ್ ಬೋರ್ಡಿನ ಮೇಲೆ ಬರೆಯಲಾ?
***
ಸರ್ದಾರ್ಜಿಗೆ ಏನೋ ಕಾಯಿಲೆ. ಪರೀಕ್ಷೆ ಮಾಡಿಸೋಣವೆಂದು ವೈದ್ಯರ (ಆತನೂ ಸರ್ದಾರ್ಜಿ) ಬಳಿ ಬಂದಿರುತ್ತಾರೆ. ವೈದ್ಯರು ಸರ್ದಾರ್ಜಿಯನ್ನು ಅಡ್ಮಿಟ್ ಮಾಡಿಕೊಂಡು, ಸ್ಥೂಲವಾಗಿ ಪರೀಕ್ಷೆ ನಡೆಸಿದ ನಂತರ, ಪೆಚ್ಚುಮೋರೆ ಮಾಡಿಕೊಂಡು ಬಂದು...
ವೈದ್ಯ : ಐ ಆಮ್ ರಿಯಲಿ ಸಾರಿ. ನೀನಿನ್ನು ಬದುಕಿರುವುದು ಕೇವಲ 2 ಗಂಟೆಗಳು ಮಾತ್ರ. ನನ್ನ ಕೈಲಿ ಏನೂ ಇಲ್ಲ, ಎಲ್ಲಾ ದೈವೇಚ್ಛೆ. ನೀವು ಸಾಯುವ ಮೊದಲು ಯಾರನ್ನಾದರೂ ನೋಡಬೇಕೆಂದು ಬಯಸಿದ್ದೀರಾ?
ಸರ್ದಾರ್ಜಿ : ಹೌದು, ಇನ್ನೊಬ್ಬ ವೈದ್ಯನನ್ನು!












Click it and Unblock the Notifications