ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಲಕ್ಷ ರು. ಸೇರೋವರೆಗೆ ಸುಬ್ಬಿ ನಿಮ್ಮಲ್ಲೇ ಇರಲಿ!

By Prasad
|
Google Oneindia Kannada News

ಸುಬ್ಬು ಆನಂದಕ್ಕೆ ಪಾರವೇ ಇರಲಿಲ್ಲ. ಜಿಗಿದಾಡಿದ, ಕುಣಿದಾಡಿದ, ನಲಿದಾಡಿದ, ಮನೆತುಂಬ ಓಡಾಡಿದ. ಕಡೆಗೆ ತನ್ನಡ ಡಿಯರ್ ಫ್ರೆಂಡ್ ಡಿಬ್ಬಿಗೆ ಫೋನ್ ಹಚ್ಚಿದ.

ಸುಬ್ಬು : ಡಿಬ್ಬಿ, ಬೇಗ ಬಾರಲೋ. ನನಗೆ ತುಂಬಾ ಖುಷಿಯಾಗಿದೆ. ಎರಡು ಪೆಗ್ ಹಾಕೋಣ.

ಡಿಬ್ಬಿ : ಯಾಕೆ? ಹೆಂಡ್ತಿ ಊರಿಗೆ ಹೋದ್ಲಾ?

ಸುಬ್ಬು : ಯು ಆರ್ ರೈಟ್. ಆದ್ರೆ, ಸುಬ್ಬಿ ಊರಿಗೂ ಹೋಗಿಲ್ಲ, ಈ ಊರಿಗೂ ಮರಳೋದಿಲ್ಲ.

ಡಿಬ್ಬಿ : ಈಡಿಯಟ್ ಥರ ಮಾತಾಡಬೇಡ. ಸರಿಯಾಗಿ ಏನಂತ ಬೊಗಳು.

ಸುಬ್ಬು : ವಿಷಯ ಏನಂದ್ರೆ. ಯಾರೋ ನಾನಿಲ್ಲದಾಗ ಸುಬ್ಬಿನ್ನ ಕಿಡ್ನಾಪ್ ಮಾಡಿದ್ದಾರೆ. ಮನೆಯಲ್ಲಿ ಒಂದು ಚೀಟಿ ಬರೆದಿಟ್ಟು, ಇನ್ನು 24 ಗಂಟೆ ಕಳೆಯುವುದರೊಳಗಾಗಿ 10 ಲಕ್ಷ ರು. ನೀಡದಿದ್ದರೆ ಅವಳನ್ನು ಫಿನಿಷ್ ಮಾಡ್ತಾರಂತೆ. ಕೆಲ ನಿಮಿಷಗಳ ಹಿಂದೆ ಫೋನ್ ಕೂಡ ಮಾಡಿ ಮತ್ತೆ ಎಚ್ಚರಿಗೆ ನೀಡಿದ್ದಾರೆ.

ಡಿಬ್ಬಿ : ಮೈಗಾಡ್! ಪೊಲೀಸರಿಗೆ ದೂರು ನೀಡಿದೆಯೇನೋ?

ಸುಬ್ಬು : ನಾನ್ಯಾಕೆ ನೀಡಲಿ? ನನಗೆ ಬರೋದು ಕೇವಲ ಹನ್ನೆರಡು ಸಾವಿರ ಸಂಬಳ. ಅದರಲ್ಲಿ ಪಿಎಫ್ ಮಣ್ಣುಮಸಿ ಎಲ್ಲ ಕಟ್ ಆಗಿ, ತಿಂಗಳ ಖರ್ಚೆಲ್ಲ ತೀರಿಹೋಗಿ ನೂರಿನ್ನೂರು ಜೇಬಲ್ಲಿ ಉಳಿದರೆ ಹೆಚ್ಚು. ಆ ಉಳಿದ ದುಡ್ಡು ಸೇರಿಸಿ 10 ಲಕ್ಷ ರು. ಆಗುವವರೆಗೆ ಸುಬ್ಬಿಯನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ ಎಂದು ಹೇಳಿ ಫೋನ್ ಕಟ್ ಮಾಡಿಬಿಟ್ಟೆ.

ಡಿಬ್ಬಿ : ಈಗೇನೋ ಖುಷಿಯಾಗಿದ್ದಿಯಾ. ಆದರೆ, ಸುಬ್ಬಿಯನ್ನು ಸಹಿಸಿಕೊಳ್ಳಲು ಕಿಡ್ನಾಪರ್ಸ್‌ಗೆ ಸಾಧ್ಯವೇನೋ? ಅವಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ವಾಪಸ್ ಕಳಿಸಿಬಿಟ್ಟರೆ ನಿನ್ನ ಗತಿಯೇನೋ?

English summary
Jokes for the day. Subbu is least bothered about kidnap of his wife Subbi. Kidnappers demand 10 lakh as ransom, but Subbu refuses to give.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X