'ನನ್ನ ಸಹೋದರಿಯರು' ಅಂತ ಎಲ್ಲಿ ಹೇಳಿದೆ?
ಸುಬ್ಬುವಿನದು ಒಂದೇ ಹಠ. ಮದುವೆ ಮಾಡಿಕೊಳ್ಳಲೇಬಾರದು ಅಂತ. ವಯಸ್ಸು ಅದಾಗಲೆ ನಲವತ್ತರ ಆಸುಪಾಸಿನಲ್ಲಿತ್ತು. ಹಳ್ಳಿಯಲ್ಲಿದ್ದ ಮನೆಮಂದಿಯೆಲ್ಲ ಎಷ್ಟೇ ಒತ್ತಾಯಿಸಿದ್ದರೂ ಸುಬ್ಬು ಮದುವೆ ಅಂದ ಕೂಡಲೆ ತಲೆ ಅಲ್ಲಾಡಿಸುತ್ತಿದ್ದ. ನೀವೇ ಏನಾದ್ರು ಮಾಡಿ ಮದುವೆ ಮಾಡಿಸಿರಪ್ಪಾ ಅಂತ ಆತನ ಗೆಳೆಯ ಡಿಬ್ಬಿಗೆ ಸುಬ್ಬುವಿನ ತಂದೆ ತಾಯಿಯರು ದುಂಬಾಲು ಬಿದ್ದಿದ್ದರು.
ಹಾಗೂಹೀಗೂ ಮಾಡಿ ಮಾಡಿ ಕಡೆಗೆ ಡಿಬ್ಬಿ ಸುಬ್ಬುವಿಗೊಂದು ಹುಡುಗಿಯನ್ನು ಹುಡುಕಿದ. ಆಕೆ ಕೂಡ ಮೂವತ್ತು ದಾಟಿದ್ದರೂ ಅಡ್ಡಾದಿಡ್ಡಿ ದೇಹ ಬೆಳೆಸಿದ್ದ ಸುಬ್ಬುವಿಗೆ ಸರಿಜೋಡಿ ಎಂದುಕೊಂಡ.
"ನೋಡು ಸುಬ್ಬು, ಮದುವೆಯಾಗುವುದನ್ನು ಇನ್ನು ತಡಮಾಡಬೇಡ. ಈಗಾಗಲೆ ನಲವತ್ತರ ಹೊಸ್ತಿಲಲ್ಲಿದ್ದಿಯಾ. ನಾನೊಂದು ಹುಡುಗಿಯನ್ನು ಹುಡುಕಿದ್ದೇನೆ. ನೀನು ಅಂಕಲ್ ತರಹ ಕಾಣ್ತಿರುವುದರಿಂದ ಆಕೆಯನ್ನು ಆಂಟಿ ಅನ್ನಲು ಪರವಾಗಿಲ್ಲ. ನೀನು ಹ್ಞೂಂ ಅನ್ನು ಸಾಕು. ಇದೇ ಸಂಡೆ ಡುಂಡುಂಡುಂ ಅನ್ನಿಸಿಬಿಡೋಣ" ಡಿಬ್ಬಿ ಪ್ರಪೋಸಲ್ ಮುಂದಿಟ್ಟ.
"ನೋಡೋ, ನನ್ನ ಮದುವೆಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲೇಬೇಡ. ನನ್ನ ಬಳಿ ಇಬ್ಬರು ಸಹೋದರಿಯರಿದ್ದಾರೆ. ಅವರು ನನ್ನೆಲ್ಲಾ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದಾರೆ" ಅಂದ ಸುಬ್ಬು ಕೂಲಾಗಿ.
"ಲೋಲೋ ಸುಬ್ಬು, ಅವರು ನಿನ್ನ ತಂಗಿಯರಾದರೇನು, ಹೆಂಡತಿಯ ಸ್ಥಾನವನ್ನು ತುಂಬಲು ಸಾಧ್ಯವೇನೋ? ನೀನು ಮದುವೆಯಾಗಲೇಬೇಕು" ಡಿಬ್ಬಿ ದುಂಬಾಲು ಬಿದ್ದ.
"ಮಗಾ, ಅವರು ಸಹೋದರಿಯರು ಅಂತ ಹೇಳಿದೆ ಅಷ್ಟೇ. ಅವರಿಬ್ಬರು 'ನನ್ನ ಸಹೋದರಿಯರು' ಅಂತ ಎಲ್ಲಿ ಹೇಳಿದೆ?"












Click it and Unblock the Notifications