ನನ್ ಹೆಂಡ್ತಿಯಿಂದ ದೂರ ಇರಲಿಲ್ಲಾ ಅಂದ್ರೆ!
ವಾಸುಕಿ ವಿಪರೀತ ಗಲಿಬಿಲಿಗೊಂಡಿದ್ದ. ಆತನಿಗೆ ಪತ್ರವೊಂದು ಬಂದಿತ್ತು. ಕೂಡಲೆ ತನ್ನ ಸ್ನೇಹಿತ ತೇಜಸ್ವಿಯನ್ನು ಬರಹೇಳಿದ.
ತೇಜಸ್ವಿ : ಯಾಕೋ, ಇಷ್ಟೊಂದು ಗಾಬರಿಯಾಗಿದ್ದಿಯಾ?
ವಾಸುಕಿ : ನನ್ ಹೆಂಡ್ತಿಯಿಂದ ದೂರ ಇರಲಿಲ್ಲಾ ಅಂದ್ರೆ, ಕೈಕಾಲು ಕಟ್ಟಿ ತನ್ನ ಮನೆ ಹಿಂದಿನ ಬಾವಿಗೆ ಎಸೀತಾನಂತೆ.
ತೇಜಸ್ವಿ : ಹೌದಾ, ಯಾರೋ ಅವ್ನು ವೀರಾಧಿವೀರ? ಯಾಕೋ ಅವನ ಹೆಂಡತಿಯ ಹಿಂದೆ ಹೋಗ್ತೀಯಾ, ಬಿಟ್ಟುಬಿಡೋ.
ವಾಸುಕಿ : ಇಂಥವನೇ ಅಂತ ಗೊತ್ತಾಗಿದ್ರೆ, ಅವನ ಹೆಂಡತಿಯ ಹಿಂದೆ ಹೋಗುವುದು ಬಿಟ್ಟುಬಿಡಬಹುದಿತ್ತು. ಆದರೆ, ಪತ್ರದಲ್ಲಿ ಅಡ್ರೆಸ್ಸು ಗಿಡ್ರೆಸ್ಸು ಯಾವ್ದೂ ಇಲ್ಲ. ಇಲ್ಲಿ ಯಾವ ಮಹಿಳೆಯ ಗಂಡ ಹೀಗೆ ಬರೆದಿದ್ದಾನೆ ಅಂತಾನೇ ಗೊತ್ತಾಗ್ತಿಲ್ಲ!
***
ರಾಜು : ಏನ್ ಮಗಾ, ಇವತ್ತು ಮತ್ತೆ ನಿನ್ನ ಲವರ್ ಚಂದ್ರಿಕಾನ್ನ ಮತ್ತೆ ಪಿಕ್ಚರ್‌ಗೆ ಕರ್ಕೊಂಡು ಹೋಗ್ತೀಯಾ?
ಬಿಜು : ಇಲ್ಲ ಕಣಮ್ಮಾ, ಅದರ ಅಗತ್ಯಾನೇ ಇಲ್ಲ ಇವತ್ತು.
ರಾಜು : ಯಾಕೆ?
ಬಿಜು : ಯಾಕಂದ್ರೆ ಅವರ ಅಮ್ಮ ಅಪ್ಪನೇ ಮನೆಯಿಂದ ಹೊರಗಡೆ ಹೋಗ್ತಿದ್ದಾರೆ!












Click it and Unblock the Notifications