ಸೇಲ್ಸ್‌ಮನ್ ಸುಬ್ಬುವಿನ ಸಿಲ್ಲಿ ಸಂದರ್ಶನ!

ಸುಬ್ಬು ಸೇಲ್ಸ್ ಎಕ್ಸಿಕ್ಯೂಟಿವ್ ಸಂದರ್ಶನಕ್ಕೆಂದು ಹೋಗಿರುತ್ತಾನೆ. ಸಂದರ್ಶನ ಮಾಡುತ್ತಿದ್ದವನು ಡಿಬ್ಬಿ. ಸಂದರ್ಶನದ ಪರಿ ಹೀಗಿದೆ.

ಡಿಬ್ಬಿ : ಹೆಲೋ ಮಿಸ್ಟರ್ ಸುಬ್ಬು. ನಾನೇನು ಕೇಳ್ತೀನೋ ಅದರ ವಿರುದ್ಧ ಉತ್ತರ ನೀಡಬೇಕು, ಗೊತ್ತಾಯ್ತಾ?

ಸುಬ್ಬು : ಓಕೆ ಸರ್.

ಡಿಬ್ಬಿ : ಒಳ್ಳೆಯದು

ಸುಬ್ಬು : ಕೆಟ್ಟದ್ದು

ಡಿಬ್ಬಿ : ಹೋಗು

ಸುಬ್ಬು : ಬಾ

ಡಿಬ್ಬಿ : ಅಸಹ್ಯ

ಸುಬ್ಬು : (ಗೊತ್ತಗದೆ) ಚೆನ್ನಾಗಿದೆ

ಡಿಬ್ಬಿ : ನಿನ್ನ ಉತ್ತರ ತಪ್ಪು

ಸುಬ್ಬು : ನನ್ನ ಉತ್ತರ ಸರಿ

ಡಿಬ್ಬಿ : ಬಾಯಿ ಮುಚ್ಚು

ಸುಬ್ಬು : ಮಾತು ಮುಂದುವರಿಸು.

ಡಿಬ್ಬಿ : (ಬೇಜಾರಿನಿಂದ) ಸಾಕು ನಿಲ್ಸಪ್ಪ

ಸುಬ್ಬು : ಸರಿ ಮುಂದುವರಿಸಪ್ಪ

ಡಿಬ್ಬಿ : ಗೆಟೌಟ್

ಸುಬ್ಬು : ಒಳಗೆ ಬಾ

ಡಿಬ್ಬಿ : ಅಯ್ಯೋ ದೇವರೇ

ಸುಬ್ಬು : ಅಯ್ಯೋ ದೆವ್ವವೇ

ಡಿಬ್ಬಿ : ನೀನು ಸೆಲೆಕ್ಟ್ ಆಗಿಲ್ಲ

ಸುಬ್ಬು : ನಾನು ಸೆಲೆಕ್ಟ್ ಆಗಿದ್ದೀನಿ, ಹುರ್ರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+