ನರಕದ ಪ್ರವೇಶಕ್ಕೆ ಸಂತಾ ಬರೆದ ಕಾಮನ್ ಎಂಟ್ರನ್ಸ್ ಟೆಸ್ಟ್
ಒಂದು ದಿನ ಯಮವೇಗದಲ್ಲಿ ಸ್ಕೂಟರ್ ಓಡಿಸಿ ಟ್ರಕ್ ಅಡಿಯಲ್ಲಿ ಸಿಕ್ಕು ಭಗವಂತನ ಪಾದ ಸೇರಿದ ಸಂತಾ ಸಿಂಗ್ ಯಮನ ಲೋಕ ನರಕದ ಬಾಗಿಲಿಗೆ ಬಂದು ನಿಂತ. ಯಮಲೋಕ ಕೂಡ ಕಾಲಾಂತರದಲ್ಲಿ ಸಾಕಷ್ಟು ಬದಲಾವಣೆ ಕಂಡಿತ್ತು. ನರಕಕ್ಕೆ ಪ್ರವೇಶ ಪಡೆಯಲು, ಪ್ರವೇಶ ಪಡೆದ ಮೇಲೆ ಅವರವರ ಪಾಪ ಕರ್ಮಗಳ ಆಧಾರದ ಮೇಲೆ ಶಿಕ್ಷೆ ನಗದಿಪಡಿಸಲು ಅವರು ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದು ಒಳಗೆ ಬರಬೇಕಾಗಿತ್ತು. ಅಧಿಕ ಮಾರ್ಕ್ಸು ಪಡೆದವರಿಗೆ ಕಡಿಮೆ ಶಿಕ್ಷೆ.
ಚಿತ್ರಗುಪ್ತರ ಮುಖಾಂತರ ನರಕದ ಬಾಗಿಲಿಗೆ ಬಂದವರ ಬುದ್ಧಮತ್ತೆಯನ್ನು ಕೂಡ ಪರೀಕ್ಷೆ ಮಾಡಿ ನಂತರ ಸ್ವರ್ಗಕ್ಕೆ ಪ್ರವೇಶ ನೀಡಲಾಗುತ್ತಿತ್ತು. ತಾನೊಬ್ಬ ಪ್ರಕಾಂಡ ಪಂಡಿತ ಎಂದು ತಿಳಿದಿದ್ದ ಸಂತಾ ಸಿಂಗ್ ಅತ್ಯಂತ ವಿಶ್ವಾಸದಿಂದ ಕಾಮನ್ ಎಂಟ್ರನ್ಸ್ ಟೆಸ್ಟಿಗೆ ತಯಾರಾದ. ಅವನಿಗೆ ಒಂದು ಪ್ರಶ್ನೆಪತ್ರಿಕೆ ಮತ್ತು ಉತ್ತರ ಪೇಪರನ್ನು ನೀಡಲಾಯಿತು.
ಅವನಿಗೆ ಕೇಳಿದ ಪ್ರಶ್ನೆಗಳು ಹೀಗಿದ್ದವು :
1) 'ಟಿ'ಯಿಂದ ಪ್ರಾರಂಭವಾಗುವ ವಾರದ ಎರಡು ದಿನಗಳ ಹೆಸರುಗಳನ್ನು ಬರೆಯಿರಿ.
2) ಒಂದು ವರ್ಷದಲ್ಲಿ ಎಷ್ಟು ಸೆಕೆಂಡುಗಳು ಇರುತ್ತವೆ?
ಒಂದು ಕ್ಷಣ ಪ್ರಶ್ನೆಗಳನ್ನು ಓದಿದ ಸಂತಾ ಸಿಂಗ್, ಚಿತ್ರಗುಪ್ತರ ದಡ್ಡತನವನ್ನು ನೋಡಿ ನಕ್ಕು ಠಾಕುಠೀಕಾಗಿ ಉತ್ತರ ಬರೆಯಲು ಅಣಿಯಾದ. ಇಂಗ್ಲಿಷಿನಲ್ಲಿ ಬರೆದ ಉತ್ತರಗಳು ಹೀಗಿದ್ದವು...
1) 'ಟಿ'ಯಿಂದ ಪ್ರಾರಂಭವಾಗುವ ಎರಡು ದಿನಗಳು ಟುಡೆ ಮತ್ತು ಟುಮಾರೋ.
2) ಒಂದು ವರ್ಷದಲ್ಲಿ 12 ಸೆಕೆಂಡುಗಳಿವೆ.
ಸಂತಾ ಸಿಂಗ್‌ನ ಉತ್ತರ ನೀಡಿ ಯಮ ಮತ್ತು ಚಿತ್ರಗುಪ್ತರು ಹೌಹಾರಿಬಿಟ್ಟರು. "ಯೋ, ಸಂತಾ ಬಾರ್ಲಾ ಇಲ್ಲಿ" ಎಂದು ಎಂದಿನ ಗತ್ತಿನಿಂದ ಸಂತಾನನ್ನು ಕರೆದ ಯಮ, "ಮೊದಲಿನ ಉತ್ತರವನ್ನು ಹಾಗೂಹೀಗೂ ಒಪ್ಪಬಹುದಾದರೂ ಎರಡನೇ ಉತ್ತರ ಏನ್ಲಾ ಇದು?" ಎಂದು ಯಮ ಅಬ್ಬರಿಸಿದ.
ಯಮನ ಪೆದ್ದುತನಕ್ಕೆ ದೇಶಾವರಿ ನಗೆ ನಕ್ಕ ಸಂತಾ, "ಜನವರಿ 2nd, ಫೆಬ್ರವರಿ 2nd, ಮಾರ್ಚ್ 2nd...."
"ಹೋಪ್, ಹೋಪ್, ಹೋಪ್ (ತಡೀರಿ)" ಎಂದು ಆತನನ್ನು ತಡೆಹಿಡಿದು ಬೆವರೊರೆಸಿಕೊಂಡು ಸಂತಾನನ್ನು ನೇರವಾಗಿ ಸ್ವರ್ಗಕ್ಕೆ ಕಳಿಸಿಬಿಟ್ಟ ಯಮ.












Click it and Unblock the Notifications