ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾಗ್ಲೂ ಡಾರ್ಲಿಂಗ್, ಸೋ ನೈಸ್, ಲವ್ ಯು!

By Prasad
|
Google Oneindia Kannada News

ಗುಂಡ ತನ್ನ ಹೆಂಡತಿ ಗುಂಡಿಗೆ ಒಂದು ಎಸ್ಎಮ್ಎಸ್ ಕಳಿಸುತ್ತಾನೆ.

"ಡಿಯರ್ ಗುಂಡಿ, ನಾನು ಇಂದು ರಾತ್ರಿಯೇ ಊರಿಗೆ ಹೋಗುತ್ತಿದ್ದೇನೆ. ಕೆಲಸ ಸಿಕ್ಕಾಪಟ್ಟೆ ಇದೆ. ಬರುವುದು ತಡವಾಗಬಹುದು. ಬರುವುದಕ್ಕೆ ಮುಂಚೆ ನನ್ನ ಕೊಳಕಾಗಿರುವ ಒಂದಿಷ್ಟು ಬಟ್ಟೆಗಳಿವೆ. ಅವನ್ನು ಒಗೆದುಹಾಕು. ಅಷ್ಟೆಲ್ಲ ಆದಮೇಲೆ ನನಗಿಷ್ಟವಾದ ಬಿಸಿಬಿಸಿ ಅನ್ನ, ಒಣಮೀನಿನ ಸಾರು ಮಾಡಿಡು. ಊಟ ಮಾಡಿ ಊರಿಗೆ ಹೋಗಬೇಕು."

ಇಷ್ಟು ಕಳಿಸಿ ಐದು ನಿಮಿಷವಾದ ಮೇಲೆ ಮತ್ತೊಂದು ಎಸ್ಎಮ್ಎಸ್ ಗುಂಡ ಕಳುಹಿಸುತ್ತಾನೆ. ಅದು ಹೀಗಿದೆ..

"ಡಿಯರ್ ಗುಂಡಿ, ನನಗೆ ಪ್ರಮೋಷನ್, ಡಬಲ್ ಇಂಕ್ರಿಮೆಂಟ್ ಸಿಕ್ಕಿದೆ. ಹೊಸ ಫ್ಲಾಟ್ ಮತ್ತು ಮನೆಗಾಗಿ ಒಂದು ಕಾರನ್ನೂ ನೀಡುತ್ತಿದ್ದಾರೆ. ಆ ಹೊಸ ಕಾರನ್ನು ನೀನೇ ಇಟ್ಟುಕೊಳ್ಳಬಹುದು."

ತಕ್ಷಣ ಗುಂಡಿಯಿಂದ ಉತ್ತರ ಬಂದಿತು, "ನಿಜವಾಗ್ಲೂ ಡಾರ್ಲಿಂಗ್, ಸೋ ನೈಸ್, ಐ ಲವ್ ಯು!"

ಗುಂಡಿಯಿಂದ ಉತ್ತರ ಬರುತ್ತಿದ್ದಂತೆ ಗುಂಡ ಮತ್ತೊಂದು ಎಸ್ಎಮ್ಎಸ್ ಒಗಾಯಿಸಿದ, "ಮೈ ಸ್ವೀಟ್ ಹಾರ್ಟ್, ನನ್ನ ಎರಡನೇ ಎಸ್ಎಮ್ಎಸ್ ನಲ್ಲಿ ಇರುವುದೆಲ್ಲ ಸುಳ್ಳು. ನಿನಗೆ ಮೊದಲನೇ ಎಸ್ಎಮ್ಎಸ್ ಬಂದಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಆ ಮೆಸೇಜ್ ಕಳಿಸಿದೆ, ಬಾಯ್!" [ಗಂಡ ಹೆಂಡತಿ ಜೋಕ್ಸ್]

English summary
Hilarious husband wife jokes. Husband sends a sms to wife to wash his cloths and prepare his favourite food. Wife does not reply. Then he sends another one with a news that he got promoted and was given a car. Then wife responds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X