ಹೆಂಡ್ತಿ ಚಿತ್ರ ನೋಡ್ತಿದ್ದಂತೆ ತೊಂದ್ರೆಗಳೆಲ್ಲ ಮಾಯ!

ಅತಿಯಾಗಿ ಪ್ರೀತಿಸುತ್ತಿರಲಿ, ನಿತ್ಯವೂ ಜಗಳಾಡುತ್ತಿರಲಿ, ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಬದುಕುತ್ತಿರಲಿ, ಒಬ್ಬರನ್ನೊಬ್ಬರು ಕಂಡರಾಗದಂತೆ ಜೀವಿಸುತ್ತಿರಲಿ, ಗಂಡ ಹೆಂಡತಿಯರಿಬ್ಬರು ತಮ್ಮ ತಮ್ಮ ಹೆಂಡತಿಯ ಅಥವಾ ಗಂಡನ ಭಾವಚಿತ್ರವನ್ನು ಪರ್ಸಲ್ಲಿ ಇಟ್ಟುಕೊಳ್ಳುವುದು ಜಾಗತಿಕ ವಿದ್ಯಮಾನ.

ಇದಕ್ಕೆ ಹೊರತಲ್ಲದ ಗುಂಡ ಕೊಡ ತನ್ನ ಹೆಂಡತಿ ಗುಂಡಿಯ ಪಾಸ್ಪೋರ್ಟ್ ಸೈಜ್ ಫೋಟೋವನ್ನು ತನ್ನ ಪರ್ಸಿನಲ್ಲಿ ಇಟ್ಟುಕೊಂಡಿದ್ದ. ಗಂಡನಿಗೆ ಗೊತ್ತಿಲ್ಲದಂತೆ ರೊಕ್ಕವನ್ನು ಲಪಟಾಯಿಸುತ್ತಿದ್ದ ಗುಂಡಿಗೆ ಒಂದು ದಿನ ಅಚ್ಚರಿ ಕಾದಿತ್ತು. ಏಕೆಂದರೆ, ಅಲ್ಲಿ ಆಕೆಯ ಫೋಟೋ ಆಕೆಗೆ ಸಿಕ್ಕಿತ್ತು ಮತ್ತು ಆಕೆಗೆ ಸಂತೋಷವೂ ಆಯಿತು. ಅಚ್ಚರಿ ಮತ್ತು ಸಂತೋಷ ಏಕೆಂದರೆ, ಆತ ಆಕೆಯ ಫೋಟೋ ಯಾವತ್ತೂ ಇಟ್ಟುಕೊಳ್ಳುತ್ತಿರಲಿಲ್ಲ.

ಗುಂಡಿ : ರೀರೀ ಪರವಾಗಿಲ್ಲರೀ. ನನ್ನ ಫೋಟೋ ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡಿದ್ದೀರಾ.

ಗುಂಡ : ಹೌದು ಕಣೆ ಗುಂಡಿ. ನನಗೆ ಎಷ್ಟೇ ಸಂಕಷ್ಟಗಳು ಬೆನ್ನತ್ತಿ ಬರಲಿ, ಎಷ್ಟೇ ಸಂಕಟಗಳು ನನ್ನ ಅಟ್ಟಿಸಿಕೊಂಡು ಬರಲಿ, ನಿನ್ನ ಫೋಟೋ ನೋಡುತ್ತಿದ್ದಂತೆ ಆ ಸಂಕಟ, ಸಂಕಷ್ಟಗಳೆಲ್ಲ ಮಾಯವಾಗಿಬಿಡುತ್ತವೆ. ಇದು ಹೊಳೆದದ್ದು ಇತ್ತೀಚೆಗೆ. ಅಂದಿನಿಂದ ಫೋಟೋ ಪರ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದೇನೆ.

ಗುಂಡಿ : ಈಗಲಾದರೂ ಗೊತ್ತಾಯ್ತಲ್ಲ ನಾನು ಎಷ್ಟು ಪ್ರಭಾವಶಾಲಿ ಮತ್ತು ಎಂಥ ಮಾಂತ್ರಿಕತೆ ನನ್ನ ಭಾವಚಿತ್ರದಲ್ಲಿದೆಯೆಂದು?

ಗುಂಡ : ಹೌದು ಕಣೆ, ತೊಂದರೆಗೆ ಸಿಗ್ಹಾಕ್ಕಿಕೊಂಡಾಗಲೆಲ್ಲ ನಿನ್ನ ಫೋಟೋ ನೋಡುತ್ತ ನನಗೆ ನಾನೇ ಹೇಳಿಕೊಳ್ಳುತ್ತೇನೆ, 'ನೋಡೋ ಗುಂಡ, ನಿನಗೆ ಎಷ್ಟೇ ಕಷ್ಟ ಬಂದರೂ ಇವಳಿಗಿಂತ ದೊಡ್ಡದು ಇರಲು ಸಾಧ್ಯವೇ ಇಲ್ಲ'. ಇಷ್ಟು ಹೇಳುತ್ತಿದ್ದಂತೆ ತೊಂದರೆಗಳೆಲ್ಲ ಮಂಗಮಾಯ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+