ಲೇಲೇ ಸುರೇಸ, ಬಲೇ ರಸಿಕ ಕಣೋ ನೀನು!
ದಿನೇಸ : ಲೇ ಲೇ ಸುರೇಸ, ಬಲೇ ರಸಿಕ ಕಣೋ ನೀನು...
ಸುರೇಸ : ರಸಿಕನಾ? ಅದ್ಯಾಕೆ ಹೀಗೆ ಹೇಳ್ತಿದ್ದೀಯಲೇ ದಿನೇಸ. ನಾನು ಅಂಥ ಮನುಷ್ಯನೇ ಅಲ್ಲ. ನಿಮ್ಮಂಥ ಅರಸಿಕ ಈ ಜಗತ್ತಿನಲ್ಲಿಯೇ ಇಲ್ಲ ಎಂದು ನನ್ನ ಹೆಂಡತಿ ಹೀಯಾಳಿಸುತ್ತಿರುತ್ತಾಳೆ.
ದಿನೇಸ : ಛೋಡ್ ಬ್ಯಾಡಲೇ, ನಿನ್ನೆ ಸಂಜೆ ನಾನು ನಿನ್ನ ಮನೆಗೆ ಬಂದಿದ್ದೆ. ನೀನು ಮತ್ತು ನಿನ್ನ ಹೆಂಡತಿ ಬೆಡ್ ರೂಮಲ್ಲಿ ಸರಸವಾಡ್ತಿದ್ದನ್ನು ನೋಡೋಕಾಗ್ಲಿಲ್ಲ, ಕೇಳಿಸ್ಕೊಂಡೆ.
ಸುರೇಸ : ಅದು ಹ್ಯಾಗೋ ಸಾಧ್ಯ. ನಿನ್ನೆ ನಾನು ಮನೆಯಲ್ಲೇ ಇರಲಿಲ್ಲ!
***
ಹೆಂಡತಿ : ರೀ, ನೀವು ಹೊಸದಾಗಿ ಅಪಾಯಿಂಟ್ಮೆಂಟ್ ಮಾಡಿಕೊಂಡಿದ್ದೀರಲ್ಲ ಈ ಬ್ಯೂಟಿಫುಲ್ ಸೆಕ್ರೆಟರಿನ್ನ ನಾನೇ ಕೆಲಸದಿಂದ ಕಿತ್ತುಹಾಕಿಬಿಟ್ಟೆ.
ಗಂಡ : ಲೇ ಪಾಪಿ, ಯಾಕೆ ಹಾಗೆ ಮಾಡಿದೆ ನೀನು? ಒಂದು ಚಾನ್ಸಾದರೂ ಅವಳಿಗೆ ಕೊಡಬಹುದಿತ್ತಲ್ಲ.
ಹೆಂಡತಿ : ಅದಕ್ಕೇ ನಾನು ಕಿತ್ತುಹಾಕಿದ್ದು. ಅವಳಿಗೆ ಚಾನ್ಸ್ ಕೊಡುವ ಮೊದಲೇ ನೀವು ಚಾನ್ಸ್ ತೆಗೆದುಕೊಳ್ಳುತ್ತೀರೆಂದು ಓಡಿಸಿಬಿಟ್ಟೆ. [ಗಂಡ ಹೆಂಡತಿ ಜೋಕ್ಸ್]
***
ಸುಮನಾ : ಸುಮನ್, ನಾನು ನೀನು ಮದುವೆಯಾದ ಮೇಲೆ ನಿನ್ನ ಎಲ್ಲ ಕಷ್ಟ, ದುಃಖಗಳನ್ನು ನಾನು ಹಂಚಿಕೊಳ್ಳಲು ಬಯಸುತ್ತೇನೆ.
ಸುಮನ್ : ಥ್ಯಾಂಕ್ಸ್ ಸುಮನಾ. ನೀನು ನನ್ನನ್ನು ಮದುವೆಯಾಗುತ್ತಿರುವುದು ನಿನ್ನ ಅದೃಷ್ಟವೆಂದೇ ಹೇಳಬೇಕು.
ಸುಮನಾ : ಯಾಕೆ?
ಸುಮನ್ : ಯಾಕಂದ್ರೆ, ನಾನು ಇಲ್ಲಿಯವರೆಗೆ ಸುಖದಲ್ಲಿಯೇ ಬದುಕಿದವನು. ಕಷ್ಟ, ದುಃಖಗಳೆಂದರೆ ನನಗೆ ಗೊತ್ತೇ ಇಲ್ಲ.
ಸುಮನಾ : ಕಷ್ಟ, ದುಃಖ ನಿನಗೆ ಗೊತ್ತೇ ಇಲ್ಲ ಯಾಕಂದ್ರೆ, ನೀನಿನ್ನೂ ನನ್ನ ಮದುವೆಯಾಗಿಲ್ಲ! [ಆಫೀಸ್ ಜೋಕ್ಸ್]












Click it and Unblock the Notifications