ಪತ್ರದಲ್ಲಿ ಕಿಸ್ ಕಳಿಸಿದ ಗಂಡನಿಗೆ ಹೆಂಡ್ತಿ ಉತ್ತರ!
ಗಂಡ ಹೈದರಾಬಾದಿನಲ್ಲಿ, ಹೆಂಡತಿ ಬೆಂಗಳೂರಿನಲ್ಲಿ. ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಅವರಿಬ್ಬರ ನಡುವೆ ಪ್ರೀತಿಯ ಪತ್ರ ವ್ಯವಹಾರ ನಡೆಯುತ್ತಿತ್ತು. ಗಂಡ ತಪ್ಪದೆ ತಿಂಗಳಿಗೊಮ್ಮೆ ಒಂದಿಷ್ಟು ಹಣವನ್ನೂ ಹೆಂಡತಿಗೆ ಕಳಿಸುತ್ತಿದ್ದ. ತಿಂಗಳಿಗೆ ಏಳೆಂಟು ಸಾವಿರ ಕಳಿಸುತ್ತಿದ್ದವನು ಬರಬರುತ್ತ ಮೂರ್ನಾಲ್ಕು ಸಾವಿರಕ್ಕೆ ಇಳಿಸಿದ್ದ. ಹೆಂಡತಿ ಕಷ್ಟಪಟ್ಟು ಸಂಸಾರ ಸಾಗಿಸುತ್ತಿದ್ದಳು.
ಒಂದು ದಿನ ಹೆಂಡತಿಗೆ ಗಂಡನಿಂದ ಪತ್ರವೊಂದು ಬಂದಿತು. ಅದು ಹಣ ಕಳಿಸುವ ಸಮಯದಲ್ಲಿ ಪತ್ರ ಬಂದಿತ್ತು. ಪತ್ರದಲ್ಲಿ ಹೀಗೆ ಬರೆದಿತ್ತು, "ಡಾರ್ಲಿಂಗ್, ಈ ತಿಂಗಳು ನಿನಗೆ ಹಣ ಕಳಿಸುವುದು ಸಾಧ್ಯವಿಲ್ಲ. ಬೇಜಾರು ಮಾಡಿಕೋಬೇಡ. ಆದರೆ, ನಿನಗಾಗಿ ಈ ಪತ್ರದಲ್ಲಿ 100 ಸ್ವೀಟಾದ ಮುತ್ತುಗಳನ್ನು ಕಳುಹಿಸುತ್ತಿದ್ದೇನೆ."
ಪತ್ರವನ್ನೋದಿದ ಹೆಂಡತಿ ಕೆಲ ಕ್ಷಣ ದಂಗಾದಳು, ಹೇಗೆ ಸಂಸಾರ ನಿಭಾಯಿಸಬೇಕೆಂದು ಚಿಂತಿತಳಾದಳು. ಆದರೆ, ಧೃತಿಗೆಡಲಿಲ್ಲ. ಗಂಡನಿಗೆ ಪಾಠ ಕಲಿಸಬೇಕೆಂದು ಪಣತೊಟ್ಟಳು. ಕೆಲ ಸಮಯದ ನಂತರ ತನ್ನ ಮುದ್ದಿನ ಗಂಡನಿಗೆ ಉತ್ತರ ಬರೆದಳು. ಅದು ಹೀಗಿತ್ತು.
ನನ್ನ ಪ್ರೀತಿಯ ಗಂಡನೆ,
ಹಣದ ಬದಲು 100 ಸ್ವೀಟಾದ ಮುತ್ತು ಕಳಿಸಿದ್ದಕ್ಕೆ ಧನ್ಯವಾದಗಳು. ಆದರೆ, ನಾನು ನಿಮಗೆ ಈ ತಿಂಗಳ ಖರ್ಚುವೆಚ್ಚಗಳ ಲೆಕ್ಕ ನೀಡಲೇಬೇಕು.
ಪ್ರತಿದಿನ ಹಾಲು ತೆಗೆದುಕೊಳ್ಳಲೇಬೇಕು. ಸೋ, ದಿನಕ್ಕೆ ಒಂದು ಮುತ್ತು ಪಡೆದು ಒಂದು ಲೀಟರ್ ಹಾಲು ಪಡೆಯುತ್ತಿದ್ದೇನೆ. ಇಲ್ಲಿಯವರೆಗೆ ಏಳು ಕಿಸ್ಸುಗಳು ಖರ್ಚಾಗಿವೆ.
ಮೊನ್ನೆ ದಿನ ಮನೆಯ ಮಾಲಿಕ ಬಂದಿದ್ದ. ಆತ ಬಾಡಿಗೆ ಮುಂದಿನ ತಿಂಗಳು ನೀಡುತ್ತೇನೆಂದರೆ ಒಪ್ಪಲೇ ಇಲ್ಲ. ಕಡೆಗೆ, ಹತ್ತು ಮುತ್ತು ಖರ್ಚು ಮಾಡಿ ಸೆಟ್ಲ್ ಮಾಡಬೇಕಾಯಿತು.
ವಿದ್ಯುತ್ ಬಿಲ್ ಕೂಡ ಬಂದಿದೆ. ಅದಕ್ಕಾಗಿ ಮೂರು ಮುತ್ತುಗಳು ನೂರು ಮುತ್ತುಗಳಲ್ಲಿ ಉದುರಿವೆ. ಉಳಿದವೆಷ್ಟು? ಪ್ಲೀಸ್ ನೀವೇ ಲೆಕ್ಕ ಹಾಕಿ.
ಓಕೆ, ಉಳಿದವೆಷ್ಟೆಂದು ಗೊತ್ತಾಯಿತಲ್ಲ? ಅವನ್ನು ತಿಂಗಳ ಸಾಮಾನು ತರಲು ಇಟ್ಟುಕೊಂಡಿದ್ದೇನೆ. ಆದರೆ, ಕಿರಾಣಿ ಅಂಗಡಿಯವ ಕಿಸ್ಸಿಗೆ ಒಪ್ಪಲೇ ಇಲ್ಲ. ಹಾಗಾಗಿ, ಆತನಿಗೆ ಬೇರೆ ಏನಾದರೂ ಕೊಡುತ್ತೇನೆಂದು ಒಪ್ಪಿಕೊಂಡಿದ್ದೇನೆ, ಇವತ್ತು ರಾತ್ರಿ.
ನನ್ನ ಬಗ್ಗೆ ನೀವು ಚಿಂತೆ ಮಾಡಲೇಬೇಡಿ. ಹೀಗೆಯೇ ಹಣದ ಬದಲು ಮುತ್ತುಗಳನ್ನು ಕಳಿಸುತ್ತಲೇ ಇರಿ. ನಾನು ಹೀಗೆಯೇ ಸಂಸಾರವನ್ನು ನಿಭಾಯಿಸುತ್ತಲೇ ಇರುತ್ತೇನೆ. ದಯವಿಟ್ಟು ಕ್ಷಮಿಸಿ, ತಿಂಗಳ ಕೊನೆಗೆ ಆ ಮುತ್ತಿನಲ್ಲಿ ಕೆಲವನ್ನಾದರೂ ಮರಳಿ ಕಳಿಸಲು ನನ್ನಲ್ಲಿ ಉಳಿದಿರುವುದೇ ಇಲ್ಲ.
ಇಂತಿ ನಿಮ್ಮ ಪ್ರೀತಿಯ,
ಹೆಂಡತಿ. [ಗಂಡ ಹೆಂಡತಿ ಜೋಕ್ಸ್]











Click it and Unblock the Notifications