ಕೆಲಸದಾಕೆ ಮಾತುಕೇಳಿ ಯಜಮಾನಿ ಕಕ್ಕಾಬಿಕ್ಕಿ
ಮನೆಕೆಲಸದಾಳಾಗಿ ಸೇರಿಕೊಂಡಿದ್ದ ಲವೀನಾ ಬಲೇ ಅಚ್ಚುಕಟ್ಟಾದ ಕೆಲಸಗಾರ್ತಿ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುತ್ತಿದ್ದಳು, ಹೇಳಿದ್ದನ್ನು ನೀಟಾಗಿ ಮಾಡಿ, ಒಂದರ್ಧ ಗಂಟೆ ಹೆಚ್ಚಾಗಿಯೇ ಕೆಲಸ ಮಾಡಿ ಮನೆಗೆ ಹೋಗುತ್ತಿದ್ದಳು. ಆದರೆ, ಕೆಲಸಕ್ಕೆ ಸೇರಿ ಇನ್ನೂ ಆರು ತಿಂಗಳಾಗಿರಲಿಲ್ಲ ಅಷ್ಟರಲ್ಲಿ ಸಂಬಳ ಜಾಸ್ತಿ ಮಾಡಬೇಕೆಂದು, ತನ್ನ ಕೆಲಸ ಮೆಚ್ಚಿದ್ದ ಯಜಮಾನರ ಮುಂದೆ ಬೇಡಿಕೆ ಮುಂದಿಟ್ಟಳು.
ಯಜಮಾನ ಹೋಗಿ ಹೆಂಡತಿಗೆ ಹೇಳಿದ್ದಾರೆ. ಇದು ಮನೆಯೊಡತಿ ಎಳ್ಳಷ್ಟೂ ಹಿಡಿಸಲಿಲ್ಲ. ಸರಿಯಾಗಿ ಒಂದು ವರ್ಷವಾದಮೇಲೆ ಶೇ.10ರಷ್ಟು ಸಂಬಳ ಹೆಚ್ಚಿಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಲ್ಲದೆ, ತಿಂಗಳಿಗೆ ಸಾವಿರದೈನೂರು ರು. ಕೊಡಲಾಗುತ್ತಿತ್ತು. ಸಂಬಳ ಯಾಕೆ ಜಾಸ್ತಿ ಕೇಳುತ್ತಿದ್ದಾಳೆ? ಸಂಬಳ ಹೆಚ್ಚಿಸುವಂತೆ ಕೇಳಿದ್ದು ಯಜಮಾನರಿಗೇಕೆ ಎಂದು ಚಿಂತಿಸಹತ್ತಿದಳು. ಏನೇ ಆಗಲಿ ವಿಚಾರಿಸಿಬಿಡೋಣವೆಂದಳು.
ಯಜಮಾನಿ : ಏನೇ ಲವೀನಾ, ಯಾಕೋ ಜಾಸ್ತಿ ಆಯ್ತು ನಿಂದು. ಬಂದು ಇನ್ನೂ ಆರು ತಿಂಗಳಾಗಿಲ್ಲ, ಸಂಬಳ ಯಾಕೆ ಜಾಸ್ತಿ ಕೇಳ್ತಿದ್ದಿಯಾ? ನನ್ನ ಕೇಳಬಹುದಿತ್ತಲ್ಲ, ಯಜಮಾನರನ್ನು ಯಾಕೆ ಕೇಳಿದೆ?
ಲವೀನಾ : ಬರೀ ಆರು ತಿಂಗಳಾಗಿದ್ದರೇನಂತೆ, ನನ್ನ ಕೆಲಸವನ್ನು ಯಜಮಾನರು ತುಂಬಾ ಮೆಚ್ಚಿಕೊಂಡಿದ್ದಾರೆ. ಹೆಂಡತಿಗಿಂತ ನೀನೇ ಚೆನ್ನಾಗಿ ಮಾಡ್ತೀಯಾ ಎಂದು ಶಭಾಸ್‌ಗಿರಿ ಕೊಟ್ಟಿದ್ದಾರೆ.
ಯಜಮಾನಿ : ಏನ್ ಚೆನ್ನಾಗಿ ಮಾಡ್ತೀಯಂತ ಹೇಳಿದ್ದಾರೆ? (ಯಜಮಾನಿ ಕಿವಿಗಳಿಂದ ಹೊಗೆ ಹೊರಬರುತ್ತಿತ್ತು.)
ಲವೀನಾ : ಒಟ್ಟು ಮೂರು ಕಾರಣಗಳಿವೆ ಮೇಡಂ. ಒಂದು ಬಟ್ಟೆಯನ್ನು ನಿಮಗಿಂತ ಚೆನ್ನಾಗಿ ಒಗಿತೀನಂತೆ.
ಯಜಮಾನಿ : ಹೌದು ಅದು ನಿನ್ನ ಕೆಲಸವೇ ತಾನೆ. ಅದರಲ್ಲೇನು ವಿಶೇಷವಿದೆ ಸಂಬಳ ಹೆಚ್ಚು ಕೇಳೋಕೆ?
ಲವೀನಾ : ಅಷ್ಟೇ ಅಲ್ಲ ಮೇಡಂ. ಎರಡನೇ ಕಾರಣ, ಅಡುಗೆ ಕೂಡ ನಾನು ನಿಮಗಿಂತ ಚೆನ್ನಾಗಿ ಮಾಡುತ್ತೇನಂತೆ.
ಯಜಮಾನಿ : ಓಹೋ, ಹಾಗೂ ಹೇಳಿದ್ರಾ? ಮೂರನೇ ಕಾರಣ ಏನು? (ವಿಪರೀತ ಕುತೂಹಲ)
ಲವೀನಾ : ಮೂರನೇ ಕಾರಣ, (ನಾಚಿಕೆಯಿಂದ) ಹಾಸಿಗೆಯಲ್ಲಿ ಕೂಡ ನಿಮಗಿಂತ ನಾನೇ ಬೆಟರಂತೆ!
ಯಜಮಾನಿ : (ಕುದಿಯುತ್ತಿರುವ ಕೋಪದಿಂದ) ಅದನ್ನೂ ಹೇಳಿದ್ದು ಅವರೇನಾ?
ಲವೀನಾ : ಅಯ್ಯಯ್ಯೋ ಯಜಮಾನರಲ್ಲ, ತೋಟದ ಮಾಲಿ.
ಯಜಮಾನಿ : (ಕಕ್ಕಾಬಿಕ್ಕಿಯಾದರೂ ಸಂಭಾಳಿಸಿಕೊಂಡು) ಸರಿ ಸರಿ, ಸಂಬಳ ಎಷ್ಟು ಜಾಸ್ತಿ ಮಾಡ್ಬೇಕು ಹೇಳು. [ವಯಸ್ಕರ ಜೋಕ್ಸ್]












Click it and Unblock the Notifications