ಗಂಡನಿಗೆ ಎಲ್ಲವನ್ನೂ ವಿವರಿಸುವುದೋ... ಅಥವಾ...

ಹೆಂಡತಿಯ ಅನ್ಯಮನಸ್ಕತೆಯಿಂದ ಕಂಗೆಟ್ಟುಹೋಗಿದ್ದ ಗಂಡನೊಬ್ಬ ಬೇರೆ ದಾರಿ ಕಾಣದೆ ವೈದ್ಯರ ಸಲಹೆ ಪಡೆಯೋಣವೆಂದು ವೈದ್ಯರ ಬಳಿ ಬರುತ್ತಾನೆ. ಅವರು ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಲೈಂಗಿಕ ವೈದ್ಯರು. ಕಳೆದ ನಾಲ್ಕಾರು ತಿಂಗಳುಗಳಿಂದ ಹೆಂಡತಿ ತನ್ನ ಜೊತೆ ಲೈಂಗಿಕ ಸಂಪರ್ಕವನ್ನೇ ಹೊಂದಿಲ್ಲ. ನನ್ನಲ್ಲಂತೂ ಏನೂ ತೊಂದರೆಯಿಲ್ಲ, ಕಾರಣವೇನೆಂದು ತಿಳಿಯುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾನೆ.

ಸರಿ, ನಾಳೆ ನಿನ್ನ ಹೆಂಡತಿಯನ್ನು ಕ್ಲಿನಿಕ್ಕಿಗೆ ಕರೆದುಕೊಂಡು ಬಾ. ಆಕೆ ಜೊತೆ ಸವಿವರವಾಗಿ ಮಾತನಾಡಿ ತೊಂದರೆ ಏನೆಂದು ಕಂಡುಕೊಳ್ಳುತ್ತೇನೆ, ನಂತರ ಪರಿಹಾರ ಹೇಳುತ್ತೇನೆ ಎಂದು ವೈದ್ಯರು ಗಂಡನನ್ನು ವಾಪಸ್ ಕಳುಹಿಸುತ್ತಾರೆ.

ಮರುದಿನ, ಎಲ್ಲಿ ಹೋಗಬೇಕೆಂದು ಹೆಂಡತಿಗೆ ಹೇಳದೆ ನೇರವಾಗಿ ಲೈಂಗಿಕ ವೈದ್ಯರ ಬಳಿ ಕರೆದುಕೊಂಡು ಬರುತ್ತಾನೆ. ಆಕೆಗೆ ಅಚ್ಚರಿಯಾದರೂ ತೋರ್ಪಡಿಸದೆ ವೈದ್ಯರ ಮುಂದೆ ಕುಳಿತುಕೊಳ್ಳುತ್ತಾಳೆ. ಒಂದು ಸಾರಿ ಆಕೆಯನ್ನು ಮೇಲಿಂದ ಕೆಳಗಿನ ತನಕ ನೋಡಿದ ವೈದ್ಯ, ಆಕೆ ಜೊತೆ ಏಕಾಂತದಲ್ಲಿ ಮಾತನಾಡಬೇಕು ಎಂದು ಗಂಡನನ್ನು ಹೊರಗಡೆ ಕಳಿಸುತ್ತಾನೆ. ಆತ ಹೊರಹೋದ ಮೇಲೆ, "ಏಕೆ ಗಂಡನೊಂದಿಗೆ ಕಳೆದ ನಾಲ್ಕಾರು ತಿಂಗಳಿಂದ ಸಂಧಿಸಿಲ್ಲ" ಎಂದು ಕೇಳುತ್ತಾನೆ.

ಹೆಂಡತಿ, "ನನ್ನ ಗಂಡ ಯಾಪಾಟಿ ಜುಗ್ಗ ಅಂತ ನಿಮಗೆ ಗೊತ್ತಿಲ್ಲ, ನನಗೆ ದಮ್ಮಡಿಯನ್ನೂ ಕೊಡಲ್ಲ. ಪ್ರತಿದಿನ ಕ್ಯಾಬಲ್ಲಿ ಆಫೀಸಿಗೆ ಹೋಗಬೇಕಾಗುತ್ತದೆ. ಆತನಿಗೆ ನೀಡಲು ಹಣ ಇರುವುದಿಲ್ಲ. ಆತ ಪ್ರತಿದಿನ, 'ರೀ, ಇವತ್ತಾದರೂ ಹಣ ಕೊಡುತ್ತೀರೋ, ಅಥವಾ...' ಎಂದು ಕೇಳುತ್ತಾನೆ. ನಾನು ಬೇರೆ ದಾರಿಯಿಲ್ಲದೆ, ಅಥವಾ... ಎಂಬುದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ" ಎಂದು ಟೇಬಲ್ ಮೇಲೆ ಮೊಣಕೈ ಊರಿಕೊಂಡು ವಿವರಿಸುತ್ತಾಳೆ.

ವೈದ್ಯ ಕೂಡ ಮುಂದೆ ಬಾಗಿ, ಟೇಬಲ್ ಮೇಲೆ ಮೊಣಕೈ ಊರಿಕೊಂಡು, "ಇಂಟರೆಸ್ಟಿಂಗ್, ಸರಿ ಮುಂದೆ" ಅಂತ ಕೇಳುತ್ತಾನೆ.

ಹೆಂಡತಿ, "ಮುಂದೇನು? ಕಚೇರಿ ತಲುಪುತ್ತೇನೆ. ಪ್ರತಿದಿನ ಈ ಜಂಜಾಟದಲ್ಲಿ ತಡವಾಗಿರುತ್ತದೆ. ಬಾಸ್ ಕೇಳಬೇಕಲ್ಲ. 'ಯಾಕೆ ಪ್ರತಿದಿನ ತಡವಾಗಿ ಬರುತ್ತಿದ್ದೀರಿ? ನಿಮ್ಮ ಸಂಬಳ ಕಟ್ ಮಾಡಬೇಕೋ ಅಥವಾ...' ಎಂದು ಕೇಳುತ್ತಾರೆ. ನಾನು ಬೇರೇನೂ ವಿಚಾರ ಮಾಡದೆ, ಅಥವಾ... ಎಂಬುದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಪ್ರತಿದಿನ ಇಷ್ಟೆಲ್ಲ ಮಾಡಿ ಮನೆಗೆ ಸುಸ್ತಾಗಿ ಬಂದಿರುತ್ತೇನೆ. ಅಯ್ಯೋ, ಇನ್ನು ಅದಕ್ಕೆಲ್ಲ ಟೈಮಾದರೂ ಎಲ್ಲಿರುತ್ತದೆ" ಎಂದು ಏನನ್ನೂ ಮುಚ್ಚಿಟ್ಟುಕೊಳ್ಳದೆ ಹೆಂಡತಿ ವೈದ್ಯನಿಗೆ ತನ್ನ ತೊಂದರೆಯನ್ನೂ ವಿವರಿಸುತ್ತಾಳೆ.

ಅಲ್ಲಿಗೆ ವೈದ್ಯನಿಗೆ ಆಕೆಯ ನಾಡಿಮಿಡಿತ ಅರ್ಥವಾಗಿರುತ್ತದೆ. ಒಂದು ಸೆಕೆಂಡು ಯೋಚಿಸಿ, ಎರಡು ಸೆಕೆಂಡು ಈಸಿಚೇರಿಗೆ ಒರಗಿಕೊಂಡು, ನಾಲ್ಕನೇ ಸೆಕೆಂಡಿಗೆ ಏನೋ ನಿರ್ಧಾರಕ್ಕೆ ಬಂದವನಂತೆ ಮತ್ತೆ ಆಕೆಯೆಡೆಗೆ ಬಾಗಿ, "ಸೋ, ನನಗೆಲ್ಲ ಅರ್ಥವಾಯಿತು. ಈಗ ಏನ್ಮಾಡೋಣ? ಈ ಕಥೆಯನ್ನೆಲ್ಲ ನಿಮ್ಮ ಗಂಡನಿಗೆ ವಿವರಿಸಿ ಹೇಳುವುದೋ... ಅಥವಾ..." ಎಂದು ಕೇಳುತ್ತಾನೆ. ಹೆಂಡತಿ ಗಂಡನಿಗೆ ಎಲ್ಲ ಕಥೆ ಹೇಳಲು ಒಪ್ತಾಳಾ? ಅಥವಾ... [ವಯಸ್ಕರ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+