ಲಕ್ಕಿ ಕಣೇ ನೀನು. ಎಷ್ಟು ಸುಂದರವಾಗಿದ್ದಾನೆ!
ಧೋಧೋ ಸುರಿಯುತ್ತಿರುವ ಮಳೆ, ಬೆನ್ನಿನ ಹುರಿಯಾಳದಲ್ಲಿ ಕೊರೆಯುವ ಚಳಿ, ವ್ಯಾಯಾಮ ಮಾಡಿ ಕಟ್ಟುಮಸ್ತಾದ ದೇಹ, ಎಂಥ ಹುಡುಗಿಯನ್ನೂ ಸೆಳೆಯಬಲ್ಲಂಥ ಯೌವನ ಹೊಂದಿದ್ದ ಯುವಕನಿಗೆ ಆ ಮಳೆಯ ರಾತ್ರಿ ತಡೆಯಲಾರದಷ್ಟು ಕಾಮನೆ ಕೆರಳಿಬಿಟ್ಟಿತ್ತು.
ತಡ ಮಾಡಿದರೆ ಆ ಕ್ಷಣದ ರೋಮಾಂಚನ ಕಳೆದುಕೊಳ್ಳಬೇಕಾದೀತೆಂದು ಚುರುಕಾಗಿ ವಿಚಾರ ಮಾಡಿದ ಯುವಕ, ಕೆಲ ದಿನಗಳ ಹಿಂದೆ ಭೇಟಿಯಾಗಿ, ಪರಿಚಯವಾಗಿದ್ದ ಸುಂದರವಾದ ಗೆಳತಿಯನ್ನು ಸಂಪರ್ಕಿಸಿದ. ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ.
ಗೆಳತಿಯ ಮನೆಗೆ ದೌಡಾಯಿಸಿದ ಯುವಕ ಆ ರಾತ್ರಿ, ಮಂದ ಬೆಳಕಿನ ಕೋಣೆಯಲ್ಲಿ, ಜೀರುಂಡೆ ಕೂಡ ಗೊರಕೆ ಹೊಡೆಯುತ್ತಿದ್ದ ಸಮಯದಲ್ಲಿ, ಸದ್ದು ಮಾಡದ ಪಲ್ಲಂಗದ ಮೇಲೆ ಗೆಳತಿಯೊಂದಿಗೆ ಶುನಕ ಭಂಗಿಯಲ್ಲಿ ಸಮಾಗಮಿಸಿದ್ದ. ಅನಿರ್ವಚನೀಯ ಅನುಭೂತಿ ಅವನದಾಗಿತ್ತು.
ಬೆಡ್ ಶೀಟಿನ ಒಳಗೆ ಗೆಳತಿ ಇನ್ನೂ ಮುಲುಕುತ್ತಿದ್ದ ವೇಳೆ, ಬೆಡ್ ಶೀಟಿನಿಂದ ಹೊರಗೆ ಬಂದಿದ್ದ ಯುವಕನ ಗಮನ ಗೋಡೆಗೆ ಹೊಡೆದಿದ್ದ ಮೊಳೆಯ ತುದಿಯಲ್ಲಿ ನೇತಾಡುತ್ತಿದ್ದ ಒಂದು ಭಾವಚಿತ್ರದ ಮೇಲೆ ಹೋಯಿತು. ಅಲ್ಲಿ ಸ್ಫುರದ್ರುಪಿ ಯುವಕನ ಚಿತ್ರವೊಂದು ಆತನನ್ನೇ ನೋಡಿ ನಗುವಂತಿತ್ತು.
"ಡಾರ್ಲಿಂಗ್, ನಿನ್ನ ಗಂಡನಾ ಅವನು? ನನಗೆ ಹೇಳೇ ಇಲ್ಲ" ಎಂದ ಯುವಕ.
"ಏ ಥತ್" ಎಂದಳಾಕೆ ಹುಸಿಮುನಿಸಿನಿಂದ.
"ಓಹ್, ಹಾಗಾದ್ರೆ ನಿನ್ನ ಇನಿಯನೇ ಇರಬೇಕು. ಲಕ್ಕಿ ಕಣೇ ನೀನು. ಎಷ್ಟು ಸುಂದರವಾಗಿದ್ದಾನೆ" ಮತ್ತೆ ಹೇಳಿದ ಯುವಕ.
"ಖಂಡಿತ ಅಲ್ವೇ ಅಲ್ಲ. ಬಾಯ್ ಫ್ರೆಂಡ್ ಫೋಟೋ ನಾನ್ಯಾಕೆ ಇಲ್ಲಿ ಹಾಕಲಿ. ಅಂಥ ಪೆದ್ದಿಯೇನಲ್ಲ" ಎಂದಳು ಸುಂದರಿ.
"ಅದೂ ಅಲ್ವಾ, ಹಾಗಿದ್ರೆ ಫೋಟೋದಲ್ಲಿರುವವರು ಯಾರು?" ಎಂದು ಮತ್ತೆ ಗೋಗರೆದ.
"ಯೂ ಸಿಲ್ಲಿ, ಅಷ್ಟೂ ಗೊತ್ತಾಗಲ್ವಾ, ನಂದೇ ಅದು, ಆಪರೇಷನ್ ಮುಂಚಿನ ಚಿತ್ರ ಅದು!" ಎಂದು 'ಸುಂದರಿ' ಅನ್ನುತ್ತಿದ್ದಂತೆ ಯುವಕನಿಗೆ ವಾಂತಿ ಬೇಧಿ ಒಟ್ಟಿಗೇ ಆದಂತೆ ಭಾಸವಾಗಿತ್ತು.












Click it and Unblock the Notifications