ಸ್ನೇಹಿತರು ನಿಮಗೊಬ್ರಿಗೇನಾ, ನನಗಿರಬಾರದಾ?
ಸುಮಾರು ಒಂದು ವರ್ಷದ ನಂತರ ತನ್ನ ಹೆಂಡತಿಯ ಬಳಿಗೆ ಮರಳಿದ್ದ ಗುಂಡನಿಗೆ ಸಂತೋಷವಾಗುವ ಬದಲು ಕೆಂಡಾಮಂಡಲ ಕೋಪ ಬಂದಿತ್ತು. ಹೆಂಡತಿಯನ್ನು ಕಂಡ ಕೂಡಲೆ ತಬ್ಬಿ ಖುಷಿ ವ್ಯಕ್ತಪಡಿಸುವ ಬದಲು ಆಕೆಯನ್ನು ಸುಟ್ಟು ಭಸ್ಮ ಮಾಡಬೇಕೆನ್ನುವಷ್ಟು ಕೋಪೋದ್ರಿಕ್ತನಾಗಿದ್ದ. ಯಾಕೆಂದರೆ, ಲಾಲಿ ಹಾಡುತ್ತಿದ್ದ ಹೆಂಡತಿಯ ಮಡಿಲಲ್ಲಿ ಪುಟಾಣಿ ಮಗುವೊಂದು ಆಟವಾಡುತ್ತ ಮಲಗಿತ್ತು.
ಗಂಡನ ಅನಿರೀಕ್ಷಿತ ಆಗಮನದಿಂದ ಹೆಂಡತಿ ವಿಚಲಿತಳಾದರೂ ತೋರಗೊಡಲಿಲ್ಲ, ಗಂಡನನ್ನು ಸ್ವಾಗತಿಸಿದರೂ, ಮಗುವನ್ನು ಲಾಲಿಸುವ ಕೆಲಸದಲ್ಲಿ ಮಗ್ನಳಾದಳು. ಮಗುವಿನ ಬಗ್ಗೆ ಆಕೆ ಏನೂ ಹೇಳದಿರುವುದು ಮತ್ತು ತನ್ನ ಬಗ್ಗೆ ಅಸಡ್ಡೆ ತೋರಿದ್ದು ಆತನ ಕೋಪವನ್ನು ಮನೆಯ ಮಾಳಿಗೆ ದಾಟುವಂತೆ ಮಾಡಿತ್ತು. ಅಷ್ಟೊಂದು ದಡ್ಡನಲ್ಲದ ಗುಂಡ ಏನಾಗಿರಬಹುದೆಂದು ಗ್ರಹಿಸಿದ. ತನ್ನ ಪ್ರಾಣ ಸ್ನೇಹಿತರಲ್ಲೇ ಒಬ್ಬನ ಕೆಲಸವಿರಬಹುದೆಂದು ಆತ ಗ್ರಹಿಸಿದ.
"ಲೇಲೇ ಗುಂಡಿ ಹೇಳೆ, ಯಾರೆ ಇದಕ್ಕೆಲ್ಲ ಕಾರಣ? ನನ್ನ ಆತ್ಮೀಯ ಸ್ನೇಹಿತ ತಿಮ್ಮನೇನೆ?" ಗುಂಡ ನಖಶಿಖಾಂತ ಉರಿಯುತ್ತ ಕೇಳಿದ.
"ಛೀ ನಾಚ್ಕೆಯಾಗಲ್ವಾ ನಿಮಗೆ. ಅಂಥವರನ್ನು ಅನುಮಾನಿಸ್ತೀರಲ್ಲ" ಗುಂಡಿಯ ದನಿ ಗದ್ಗದಿತವಾಗಿತ್ತು.
"ಅಲ್ವಾ, ಹಾಗಿದ್ರೆ ನನ್ನ ಜಿಗರಿ ದೋಸ್ಟ್ ಡಿಬ್ಬಿಯೇ ಇರಬೇಕು. ಸುಳ್ಳು ಬೊಗಳಬೇಡ..." ಗುಂಡ ಗುಂಡಿಯ ಮುಖಕ್ಕೆ ಮುಖವಿಟ್ಟು ಗುಂಡು ಹೊಡೆದಂತೆ ಕೇಳಿದ.
"ರೀ ರೀ, ಏನ್ರೀ ಏನಾಗಿದೆ ನಿಮಗೆ?" ಗುಂಡಿ ಭೋರ್ಗರೆಯುವ ಹಂತ ತಲುಪಿದ್ದಳು.
"ವಾಟ್ ಅವನೂ ಅಲ್ವಾ? ಹಾಗಿದ್ರೆ ನನ್ನ ಸ್ನೇಹಿತರಲ್ಲಿ ಯಾರು ಈ ಮಗುವಿನ ಹುಟ್ಟಿಗೆ ಕಾರಣರಾದರು?" ಗುಂಡ ಯಾವ ಮಟ್ಟದಲ್ಲಿ ಕಿರುಚಿದ್ದನೆಂದರೆ ಕಿಟಕಿಯಲ್ಲಿ ಕೆಲ ತಲೆಗಳು ಕಾಣಿಸಿಕೊಂಡಿದ್ದವು.
ಉಕ್ಕಿಬರುತ್ತಿದ್ದ ಅಳುವನ್ನು ತಕ್ಷಣ ನಿಲ್ಲಿಸಿದ ಗುಂಡಿ, ವೈಯಾರದಿಂದ "ಯವ್ವಿ ಯವ್ವಿ, ಸ್ನೇಹಿತರಿರುವುದು ನಿಮಗೊಬ್ಬರಿಗೆ ಮಾತ್ರವಾ? ನನಗೆ ಉತ್ತಮ ಸ್ನೇಹಿತರು ಇರಬಾರದಾ?"
"ಹೀಗೋ ಸಮಾಚಾರ? ಯಾರು ಹೇಳು ಆ ನಿನ್ನ ಸ್ನೇಹಿತ" ಗುಂಡನ ಕಿವಿಯಲ್ಲಿ ಬುಸ್ಸನೆ ಹೊಗೆಯಾಡುತ್ತಿತ್ತು.
ಸೂಪರ್ ಕೂಲಾಗಿದ್ದ ಗುಂಡಿ "ಹೇಳಲ್ಲ..." [ರತಿಸುಖದ ರಾಣಿ ಜೆನ್ನಿ ಮಗುವಿನ ನಿಜವಾದ ಅಪ್ಪ ಯಾರು?]












Click it and Unblock the Notifications