ಮಹಿಳೆಯರಿಗೆ ಚಿತ್ರಗುಪ್ತನ ನರಕದ ನ್ಯಾಯ!

ಹದಿವಯಸ್ಸಿನ ಮೂವರು ಮಹಿಳೆಯರು ಒಂದೇ ಬಾರಿಗೆ ಸಾವಿಗೀಡಾಗುತ್ತಾರೆ. ಅವರ ಸಾವಿನ ಮಹಜರ್ ಮಾಡಿದ ಯಮಧೂತರು ಮೂವರನ್ನು ಎತ್ತಾಕಿಕೊಂಡು ನರಕದ ಬಾಗಿಲಿಗೆ ಬಂದು ಚಿಲಕ ಬಡಿಯುತ್ತಾರೆ. ಮೂರ್ನಾಲ್ಕು ಬಾರಿ ಚಿಲಕ ಬಾರಿಸಿದ ಮೇಲೆ ಬಾಗಿಲು ತೆಗೆಯದಿದ್ದಾಗ ಸಹನೆ ಕಳೆದುಕೊಂಡು ಬಾಗಿಲಿಗೆ ಒದೆಯಬೇಕು ಎನ್ನುವಷ್ಟರಲ್ಲಿ ಕಣ್ಣುಜ್ಜಿಕೊಳ್ಳುತ್ತ ಚಿತ್ರಗುಪ್ತ ಬಾಗಿಲು ತೆಗೆಯುತ್ತಾನೆ.

ಮೂವರು ಸುಂದರಾತಿಸುಂದರ ಮಹಿಳೆಯರನ್ನು ನೋಡಿ ಅರೆನಿದ್ದೆಯಲ್ಲಿ ಎದ್ದುಬಂದಿದ್ದ ಚಿತ್ರಗುಪ್ತನ ನಿದ್ದೆಯೆಲ್ಲ ಓಡಿಹೋಗಿಬಿಡುತ್ತದೆ. ಕೆಲಸ ಮಾಡಿಮಾಡಿ ಸುಸ್ತಾಗಿದ್ದ ಯಮರಾಜ ರಜಾ ಕಳೆಯಲೆಂದು ಸ್ವರ್ಗಕ್ಕೆ ಹೋಗಿದ್ದರಿಂದ ಚಿತ್ರಗುಪ್ತನೇ ನರಕಕ್ಕೆ ತಾತ್ಕಾಲಿಕ ಬಾಸ್ ಆಗಿರುತ್ತಾನೆ. ಮಹಿಳೆಯರನ್ನು ಒಳಬಿಟ್ಟುಕೊಳ್ಳುವ ಮುನ್ನ, ಯಮಧೂತರನ್ನು ಹೊರದಬ್ಬಿದ ನಂತರ ಚಿತ್ರಗುಪ್ತ ತನ್ನ ಡ್ಯೂಟಿ ಶುರು ಹಚ್ಚಿಕೊಳ್ಳುತ್ತಾನೆ.

"ನೀವು ಕೆಲ ಪ್ರಶ್ನೆಗಳನ್ನು ಉತ್ತರಿಸಬೇಕು. ಆಗ ಮಾತ್ರ ನಿಮಗೆ ಒಳಗೆ ಎಂಟ್ರಿ" ಎಂದು ಅವರಿಗೆ ತಾಕೀತು ಮಾಡುತ್ತಾನೆ. ಮೂವರೂ "ಓಕೆ" ಅನ್ನುತ್ತಾರೆ.

"ಮದುವೆಗಿಂತ ಮೊದಲು ಮತ್ತು ನಂತರ ನಿಮ್ಮ ಲೈಂಗಿಕ ಸಂಬಂಧ ಹೇಗಿತ್ತು" ಎಂದು ತುಂಟ ಪ್ರಶ್ನೆ ಕೇಳುತ್ತಾನೆ.

ಮೊದಲನೇಯವಳು, "ನಾನು ಮದುವೆಗೆ ಮುನ್ನ ಕನ್ಯೆಯಾಗಿ ಇದ್ದೆ. ಮದುವೆಯ ನಂತರವೂ ಕನ್ಯೆಯಾಗಿಯೇ ಇದ್ದೆ" ಎಂದುತ್ತರಿಸುತ್ತಾಳೆ.

"ಓಹ್, ತುಂಬಾ ಒಳ್ಳೆಯದು. ತೆಗೆದುಕೊ ಈ ಚಿನ್ನದ ಕೀಲಿಕೈ. ಅದು ನಿನ್ನಂಥ ಮಹಿಳೆಯರು ಇರುವ ಕೋಣೆ" ಎಂದು ಕೀಲಿಕೈ ಬಿಸಾಕುತ್ತಾನೆ.

ಎರಡನೇಯವಳು, "ನಾನು ಕೂಡ ಮದುವೆಗೆ ಮುನ್ನ ಕನ್ಯೆಯಾಗಿದ್ದೆ. ಆದರೆ, ಮದುವೆಯಾಗಿ ಮೊದಲ ರಾತ್ರಿಯೇ ನನ್ನ ಕನ್ಯತ್ವ ಕಳೆದುಕೊಂಡುಬಿಟ್ಟೆ" ಎನ್ನುತ್ತಾಳೆ.

"ಓಕೆ, ತುಂಬಾ ಒಳ್ಳೆಯದು. ತೆಗೆದುಕೊ ಈ ಬೆಳ್ಳಿಯ ಕೀಲಿಕೈ. ಅಲ್ಲಿ ನಿನ್ನಂಥ ಮಹಿಳೆಯರೇ ಇದ್ದಾರೆ" ಎಂದು ಕೀಲಿಕೈ ಬಿಸಾಕುತ್ತಾನೆ.

ಮೂರನೇಯವಳು, "ನನ್ನ ಕಥೆ ಇವರಿಬ್ಬರಿಗಿಂತ ಭಿನ್ನ. ನಾನು ಮದುವೆಗೆ ಮುನ್ನವೇ ಕನ್ಯತ್ವ ಕಳೆದುಕೊಂಡು ಬಿಟ್ಟಿದ್ದೆ. ನನಗೆ ಅನೇಕ ಗೆಳೆಯರಿದ್ದರು. ಯಾವಾಗ ಯಾರಿಂದ ಕಳೆದುಕೊಂಡೆ ಎಂದು ಹೇಳುವುದು ಸ್ವಲ್ಪ ಕಷ್ಟವೆ. ಆದರೆ, ಮದುವೆಯ ನಂತರವೂ ಆ ಗೆಳೆಯರೊಡನೆ ಅದೇ ರೀತಿಯ ಗೆಳೆತನ ಮುಂದುವರಿಸಿದೆ. ಅದೇ ನನ್ನ ಸ್ಪೆಷಾಲಿಟಿ" ಎಂದು ಉತ್ತರಿಸಿದಳು.

ಕಾರಂಜಿ ಚಿಮ್ಮಿದಂತೆ ಚಿಮ್ಮಿದ ಚಿತ್ರಗುಪ್ತ, "ವೆರಿ ಗುಡ್, ತಗೋ ನನ್ನ ರೂಮಿನ ಕೀಲಿಕೈ!"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+