ಬಲೇ ಕಿಲಾಡಿ ನನ್ ಮಗಾರೀ ಈ ಡಾಕ್ಟರ್!

ಒಬ್ಬ ಹದಿನೇಳು ದಾಟಿರುವ ಹದಿನೆಂಟರ ಒಳಗಿರುವ ಹದಿಹರೆಯದ ತುಂಬು ಯೌವನದ ಸುಂದರಿಯೊಬ್ಬರು ಒಬ್ಬ ಕುರೂಪಿ ಹೆಂಗಸಿನೊಂದಿಗೆ ಡಾಕ್ಟರ್ ಬಳಿ ಬರುತ್ತಾಳೆ. ಆದಾಗಲೆ ನೋಡುತ್ತಿದ್ದ ಪೇಷಂಟನ್ನು ಸಾಗಹಾಕಿದ ನಂತರ ಇವರಿಬ್ಬರನ್ನು ಒಳಬರಹೇಳುತ್ತಾನೆ.

ಯುವತಿ, "ಡಾಕ್ಟರ್, ಸಿಕ್ಕಾಪಟ್ಟೆ ಹೊಟ್ಟೆನೋವು, ಆಗಾಗ ಬೆನ್ನು ನೋವು ಕೂಡ, ಕೆಲಬಾರಿ ಸೊಂಟ ನೋವು..." ಅಂತ ಹೇಳುವುದನ್ನು ಇನ್ನೂ ಮುಗಿಸಿರುವುದಿಲ್ಲ ಅಷ್ಟರಲ್ಲಿ ಮಧ್ಯ ಬಾಯಿಹಾಕಿದ ವೈದ್ಯ, "ನೋಡಮ್ಮ, ಅಲ್ಲಿ ಕರ್ಟನ್ ಇದೆಯಲ್ಲ, ಅದರ ಹಿಂದೆ ಹೋಗಿ ಹಾಸಿಗೆಯ ಮೇಲೆ ಮಲಗಿರು. ನಿನ್ನನ್ನು ಅಮೂಲಾಗ್ರವಾಗಿ ಚೆಕಪ್ ಮಾಡಬೇಕಾಗುತ್ತದೆ" ಅಂತ ಹೇಳುತ್ತಾನೆ.

"ತೊಂದರೆ ನನಗಿಲ್ಲ ವೈದ್ಯರೆ, ಈ ಮಹಿಳೆಗೆ" ಅಂತ ಉಲಿಯುತ್ತಾಳೆ.

"ಓ ಐಸೀ, ಎಲ್ಲೀ ನಾಲಿಗೆ ತೆಗೆಯಮ್ಮ..." ಅಂತ ಹೇಳಿ ಆ ಯಮ್ಮ ನಾಲಿಗೆ ತೆಗೆದಿರುವುದನ್ನು ಕೂಡ ನೋಡದೆ ಪ್ರಿಸ್ಕ್ರಿಪ್ಶನ್ ಬರೆದಿರುತ್ತಾನೆ.

***
ಅದೇ ವೈದ್ಯ ಮಟಮಟ ಮಧ್ಯಾಹ್ನದ ಹೊತ್ತಿನಲ್ಲಿ ಕ್ಲಿನಿಕ್ಕಿನಲ್ಲಿ ನರ್ಸ್ ಜೊತೆ ಊಟಕ್ಕೆ ಕುಳಿತುಕೊಳ್ಳಬೇಕು ಎಂದುಕೊಂಡಿರುವಾಗಲೆ ಟ್ರಿಣ್ ಟ್ರಿಣ್ ಟ್ರಿಣ್ ಅಂತ ಫೋನ್ ಹೊಡೆದುಕೊಳ್ಳಲು ಪ್ರಾರಂಭಿಸುತ್ತದೆ. ಫೋನ್ ಮಾಡಿದವರನ್ನು ಶಪಿಸಿ ಫೋನ್ ಎತ್ತಿಕೊಳ್ಳುತ್ತಾನೆ.

ಅತ್ತಕಡೆಯಿಂದ, "ವೈದ್ಯರೇ, ದಯವಿಟ್ಟು ಸಹಾಯ ಮಾಡಿ, ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ" ಎಂದು ಒಂದೇ ಸವನೆ ಬಡಬಡಿಸಲು ಪ್ರಾರಂಭಿಸುತ್ತಾನೆ.

ಆತ ಪರಿಚಯದವನೇ ಇದ್ದರಿಂದ, "ಲೋ, ಮೊದಲು ಏನಾಗಿದೆ, ಏನು ಸಮಸ್ಯೆ ಅದನ್ನು ಬೊಗಳಯ್ಯ" ಅಂತ ಇತ್ತಕಡೆಯಿಂದ ವೈದ್ಯ ಬೊಗಳುತ್ತಾನೆ.

"ಏನು ಹೇಳಲಿ ಡಾಕ್ಟರ್, ವಯಾಗ್ರ ತೆಗೆದುಕೊಂಡುಬಿಟ್ಟಿದ್ದೇನೆ. ಹೆಂಡತಿಗೆ ಫೋನ್ ಮಾಡಿದ್ರೆ ಟ್ರಾಫಿಕ್‌ನಲ್ಲಿ ಸಿಗ್ಹಾಕ್ಕಿಕೊಂಡಿದ್ದಾಳಂತೆ. ಬರೋದಿಕ್ಕೆ ಸ್ವಲ್ಪ ಹೊತ್ತಾಗುತ್ತದಂತೆ. ನೀವೇ ಸಜೆಸ್ಟ್ ಮಾಡಿ ಡಾಕ್ಟರ್" ಅಂತ ವಿಚಿತ್ರ ದನಿಯಲ್ಲಿ ಕಿರುಚುತ್ತಾನೆ.

ಕಿಸಕ್ಕನೆ ನಕ್ಕ ರಸಿಕ ವೈದ್ಯ, "ಅಷ್ಟೂ ಗೊತ್ತಾಗಲ್ವೇನೋ ಪೆದ್ದ. ಪಕ್ಕದಲ್ಲಿ ನರ್ಸ್, ಐ ಮೀನ್ ಮನೆಗೆಲಸದವಳು ಇಲ್ವಾ ಅಲ್ಲಿ..." ಅಂತ ಪಕ್ಕದಲ್ಲೇ ನಿಂತಿದ್ದ ನರ್ಸ್‌ನತ್ತ ಕಣ್ಣು ಮಿಟುಕಿಸುತ್ತಾನೆ.

"ಅಯ್ಯೋ, ನಿಮ್ಮ ಸಜೆಶನ್ನಿಗೆ ಬೆಂಕಿ ಹಾಕಾ, ಮನೆಗೆಲಸದವಳ ಜೊತೆ ರತಿಕ್ರೀಡೆ ನಡೆಸಬೇಕಾದರೆ ವಯಾಗ್ರ ಬೇಕಾಗೇ ಇಲ್ಲ" ಅಂತ ಹೇಳಿ ಫೋನ್ ಕುಕ್ಕಿಬಿಡುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+