ಹುಡುಗಿ ಹೆಸರು ಕೇಳುತ್ತಿದ್ದಂತೆ ಲವೀನಾ ಮೂರ್ಛೆ

ಟಾಮ್, ಡಿಕ್ ಮತ್ತು ಹ್ಯಾರಿ ಶುದ್ಧಾತಿಶುದ್ಧ ತರ್ಲೆಗಳು. ವರ್ಷದ ಮೊದಲನೇ ದಿನದ ಮೊದಲನೇ ತರಗತಿ ಮುಗಿಯಲು ಬೆಲ್ ಹೊಡೆಯಬೇಕು ಆಗ ಏದುಸಿರು ಬಿಡುತ್ತ ಮೂವರೂ ಬಂದರು. ಮೂವರನ್ನು ಹೊಸ ಬ್ಯೂಟಿಫುಲ್ ಟೀಚರ್ ಲವೀನಾ ಬಾಗಿಲಲ್ಲೇ ನಿಲ್ಲಿಸಿ, ಅವರ ಹೆಸರು ಕೇಳಿ "ಎಲ್ಲಿ ಹೋಗಿದ್ರಿ, ಯಾಕೆ ಲೇಟು" ಎಂದು ಕೆಂಗಣ್ಣು ಬಿಟ್ಟು ಕೇಳಿದಳು.

ಟಾಮ್, "ನಾನು ಬ್ಲೂಬೆರಿ ಹಿಲ್ ಮೇಲಿದ್ದೆ, ಸಾರಿ ಮ್ಯಾಮ್" ಎಂದು ಅಮಾಯಕನಂತೆ ಉತ್ತರಿಸಿದ.

ಬೆಳ್ಳಂಬೆಳಿಗ್ಗೆ ಟಾಮ್ ಬೆಟ್ಟ ಹತ್ತಲು ಹೋಗಿರಬಹುದು. ಏನೋ ಕಾರಣದಿಂದ ತಡವಾಗಿರಬಹುದು, ಸಾರಿ ಬೇರೆ ಕೇಳಿದ್ದಾನೆ. ಪರವಾಗಿಲ್ಲ ಎಂದು, ಜಾರಬಂಡೆಯಾಡುತ್ತಿದ್ದ ಸೆರಗನ್ನು ಸರಿ ಮಾಡಿಕೊಂಡು ಲವೀನಾ ಆತನನ್ನು ತರಗತಿಯೊಳಗೆ ಬಿಟ್ಟಳು. ನಂತರ ತನ್ನ ದೃಷ್ಟಿಯನ್ನು ಡಿಕ್ ಮೇಲೆ ಹಾಯಿಸಿದಳು.

ಡಿಕ್ ಕೂಡ, "ನಾನೂ ಬ್ಲೂಬೆರಿ ಹಿಲ್ ಮೇಲಿದ್ದೆ, ಸಾರಿ ಮ್ಯಾಮ್" ಎಂದು ಟಾಮ್ ನೀಡಿದ ಸಮಜಾಯಿಷಿಯನ್ನೇ ನೀಡಿದ.

ಓಹೋ ಟಾಮ್ ಜೊತೆ ಡಿಕ್ ಕೂಡ ಹೋಗಿದ್ದಿರಬಹುದು ಎಂದುಕೊಂಡ ಲವೀನಾ ಟೀಚರ್, ಆತನನ್ನೂ ತರಗತಿಯೊಳಗೆ ಬಿಟ್ಟಳು. ನಂತರ ಬಿರುಗಣ್ಣು ಹ್ಯಾರಿ ಮೇಲೆ ಹಾರಿತು.

ಪುಸಕ್ಕನೆ ಬರುತ್ತಿದ್ದ ನಗುವನ್ನು ಸಾಕಷ್ಟು ಕಷ್ಟಪಟ್ಟು ತಡೆದುಕೊಂಡ ಹ್ಯಾರಿ, "ನಾನು ಕೂಡ ಬ್ಲೂಬೆರಿ ಹಿಲ್ ಮೇಲಿದ್ದೆ ಮಿಸ್, ಐ ಆಮ್ ಆಲ್ಸೋ ಸಾರಿ" ಎಂದು ಹೇಳಿ ಟಾಮ್ ಮತ್ತು ಡಿಕ್ ನತ್ತ ನೋಡಿದ. ಟಾಮ್ ಮತ್ತು ಡಿಕ್ ಕೂತಲ್ಲೇ ಕಣ್ಣು ಮಿಟುಕಿಸಿದ್ದರು. ಹ್ಯಾರಿಯನ್ನೂ ಲವೀನಾ ಮಿಸ್ ಒಳಗೆ ಬಿಟ್ಟರು.

ಇನ್ನೇನು ಸಂತಾನೋತ್ಪತ್ತಿ ಬಗ್ಗೆ ಕ್ಲಾಸ್ ತೆಗೆದುಕೊಳ್ಳಬೇಕು ಅಷ್ಟರಲ್ಲಿ ಒಬ್ಬ ಹುಡುಗಿ ಬಂದು ಬಾಗಿಲಲ್ಲಿ ನಿಂತಳು. ಪರವಾಗಿಲ್ವೆ, ಹುಡುಗರು ಮಾತ್ರವಲ್ಲ ಹುಡುಗಿ ಕೂಡ ತಡವಾಗಿ ಬರ್ತಾಳೆ ಅಂದುಕೊಂಡು, ಆಕೆಯ ಹೆಸರು ಕೇಳಿದಳು.

ಆ ಹುಡುಗಿ, "ಬ್ಲೂಬೆರಿ ಹಿಲ್ ಮಿಸ್" ಅನ್ನುತ್ತಿದ್ದಂತೆ ಮಿಸ್ ಲವೀನಾ ಮೂರ್ಛೆ ಹೋಗಿದ್ದಳು. [ಸ್ಟುಡೆಂಟ್ ಟೀಚರ್ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+