ಹೋಟೆಲ್ ರೂಮಲ್ಲಿ ಸುಂದರಿ ನೋಡಿದ ಸುಬ್ಬು ತಬ್ಬಿಬ್ಬು!
ಸತತ ಹತ್ತು ವರ್ಷಗಳ ಕಾಲ ಕತ್ತೆಯಂತೆ ದುಡಿದು ಕಂಪನಿಯ ಲಾಭವನ್ನು ತ್ರಿಗುಣಗೊಳಿಸಿದ ಸುಬ್ಬುವಿನ ಸೇವೆಯನ್ನು ಮೆಚ್ಚಿದ ಕಂಪನಿಯ ಬಾಸ್ ಡಿಬ್ಬಿ ಆತನನ್ನು ಮಾರಿಷಸ್ ದ್ವೀಪಕ್ಕೆ ಮಾಜಾ ಮಾಡಿಬಾ ಎಂದು ಕಳಿಸುತ್ತಾನೆ.
ಟೆನ್ ಸ್ಟಾರ್ ಹೋಟೆಲ್ ವಾಸ್ತವ್ಯ, ಊಟ ತಿಂಡಿ, ಅಡ್ಡಾಟದ ಎಲ್ಲ ಖರ್ಚುವೆಚ್ಚಗಳನ್ನು ಡಿಬ್ಬಿಯೇ ಭರಿಸಿರುತ್ತಾನೆ. ಸುಬ್ಬುವಿಗೆ ಸಂತೋಷವೋ ಸಂತೋಷ. ಅದ್ಭುತವಾದ ಹೋಟೆಲಿಗೆ ಸುಬ್ಬು ಆಗಮಿಸುತ್ತಾನೆ. ಆತ ಕೋಣೆಯೊಳಗೆ ಬರುತ್ತಿದ್ದಂತೆ ಆತನಿಗೆ ಭಾರೀ ಅಚ್ಚರಿ ಕಾದಿರುತ್ತದೆ.
ಒಂದೆಳೆ ನೂಲಿನಷ್ಟು ಬಟ್ಟೆಯನ್ನೂ ಧರಿಸದ ಹದಿನೆಂಟರ ಹರೆಯದ ತ್ರಿಪುರ ಸುಂದರಿಯೊಬ್ಬಳು ಹಾಸಿಗೆಯ ಮೇಲೆ ಬೋರಲು ಮಲಗಿರುತ್ತಾಳೆ. ತುಸುವೇ ಹೊರಳಿ ಸುಬ್ಬುವಿಗೆ ಒಂದು ನಗೆಯನ್ನು ಚೆಲ್ಲುತ್ತಾಳೆ. ಇವನೋ ಗರಬಡಿದಂತವನಾಗಿರುತ್ತಾನೆ. ಹೇಗೆ ರಿಯಾಕ್ಟ್ ಮಾಡಬೇಕೆಂದೇ ತಿಳಿಯುವುದಿಲ್ಲ. ಕ್ಷಣಹೊತ್ತಿನಲ್ಲಿ ಹಾಕಿಕೊಂಡ ಅಂಗಿಯೆಲ್ಲ ಒದ್ದೆಯಾಗಿರುತ್ತದೆ.
ಆಕೆಯೇ ಮಾತಿಗೆ ಶುರುಹಚ್ಚಿಕೊಳ್ಳುತ್ತಾಳೆ, "ಮಿಸ್ಟರ್ ಸುಬ್ಬು, ನಿಮ್ಮ ಬಾಸ್ ನನಗೆ ಎಲ್ಲವನ್ನೂ ಹೇಳಿದ್ದಾರೆ. ವಾರಗಳ ಕಾಲ ನಿಮ್ಮೊಂದಿಗೆ ಕಾಲ ಕಳೆಯಬೇಕೆಂದು ಆದೇಶಿಸಿದ್ದಾರೆ. ನನ್ನ ಎಲ್ಲ ಖರ್ಚುಗಳನ್ನು ಕೂಡ ಅವರೇ ಭರಿಸುತ್ತಾರೆ" ಎಂದು ಅಚ್ಚ ಕನ್ನಡದಲ್ಲಿ ಸುಂದರಿ ಉಲಿಯುತ್ತಾಳೆ.
ಆಕೆಯ ಮಾತಿಗೆ ಪ್ರತಿಕ್ರಿಯೆಯನ್ನೂ ನೀಡದೆ ಸುಬ್ಬು, ಫೋನನ್ನೆತ್ತಿಕೊಂಡು "ಏನ್ರೀ ಡಿಬ್ಬಿ. ನನ್ನನ್ನ ಏನಂತ ತಿಳಿದುಕೊಂಡಿದ್ದೀರಿ? ಏನಿದು ನಿಮ್ಮ ಅರೇಂಜ್‌ಮೆಂಟು? ನಾನೆಷ್ಟು ಗೌರವಸ್ಥ ಮನುಷ್ಯನೆಂದು ನಿಮಗೆ ತಿಳಿದಿಲ್ಲವೆ? ನಾನಿದನ್ನೆಲ್ಲ ಸಹಿಸಿಕೊಳ್ಳುತ್ತೇನೆಂದು ಹೇಗೆ ತಿಳಿದಿರಿ? ನಿಮ್ಮ ಮೇಲೆ ನನಗೆ ನಖಶಿಖಾಂತ ಕೋಪ ಬಂದಿದೆ" ಎಂದು ಸುಬ್ಬು ಬುಸುಗುಡಲು ಪ್ರಾರಂಭಿಸುತ್ತಾನೆ.
ಸುಬ್ಬುವಿನ ರೌದ್ರಾವತಾರವನ್ನು ನೋಡಿ ಸುಂದರಿ ಗಡಗಡ ನಡುಗಲು ಪ್ರಾರಂಭಿಸುತ್ತಾಳೆ. ಚೆಂಗನೆ ನೆಗೆದು ಮಂಚದ ಕೆಳಗೆ ಸರಿಸಿಟ್ಟಿದ್ದ ತನ್ನ ಬಟ್ಟೆಗಳನ್ನು ಎತ್ತಿಕೊಂಡು ಹಾಕಿಕೊಂಡು ಇನ್ನೇನು ಜಾಗಖಾಲಿಮಾಡಬೇಕು ಎಂದು ಅಂದುಕೊಂಡಿರುತ್ತಾಳೆ, ಆಕೆಯೆಡೆಗೆ ಹೊರಳಿದ ಸುಬ್ಬು, "ಮಿಸ್ ಸುಂದರಿ, ನೀನೆಲ್ಲಿ ಹೋಗುತ್ತಿದ್ದೀಯಾ? ನಾನು ಕೋಪಗೊಂಡಿರುವುದು ನನ್ನ ಬಾಸ್ ಮೇಲೆಯೇ ಹೊರತು ನಿನ್ನ ಮೇಲಲ್ಲ!" ಎಂದು ಟಂಗನೆ ಸುಂದರಿಯಿದ್ದಲ್ಲಿ ನೆಗೆದಿರುತ್ತಾನೆ. [ವಯಸ್ಕರ ಜೋಕ್ಸ್]












Click it and Unblock the Notifications