ಸಿಕ್ರೆಟ್ ಸಂಗಾತಿ ಮತ್ತು ಕತ್ತಲು ಕಪಾಟು!

ಗಂಡ ಕಚೇರಿಯಲ್ಲಿ ಕತ್ತೆಯಂತೆ ದುಡಿಯುತ್ತಿರುವ ಸಮಯದಲ್ಲಿ ಮನೆಯಲ್ಲಿ ಏಕಾಂಗಿಯಾಗಿದ್ದ ಆತನ ಹೆಂಡತಿ, ಓರ್ವ ಮಗನ ತಾಯಿ ತನ್ನ ರಹಸ್ಯ ಇನಿಯನನ್ನು ಮನೆಗೆ ಕರೆಯಿಸಿಕೊಂಡಿರುತ್ತಾಳೆ. ಆ ಸಮಯದಲ್ಲಿ ಆಕೆಯ ಮಗನೂ ಯುನಿಫಾರ್ಮ್ ತೊಟ್ಟು ಶಾಲೆಗೆ ಹೋಗಿರುತ್ತಾನೆ. ಅವಳೇನು ಚೌಕಾಬಾರಾ ಆಡಲು ತನ್ನ ಇನಿಯನನ್ನು ಕರೆಸಿಕೊಂಡಿರುವುದಿಲ್ಲ.

ಹುಟ್ಟುಡುಗೆಯಲ್ಲಿ ಪಲ್ಲಂಗದ ಮೇಲೆ ಇಬ್ಬರೂ ಕುಸ್ತಿ ಆಡುತ್ತಿದ್ದ ಸಂದರ್ಭದಲ್ಲಿ, ಹೊಟ್ಟೆ ನೋವೆಂದು ನೆವ ಹೇಳಿ ಮಗ ಮನೆಗೆ ಮರಳಿಬಂದುಬಿಡುತ್ತಾನೆ. ನಡೆಯಬಾರದ್ದು ನಡೆಯುತ್ತಿರುವುದನ್ನು ನೋಡಿದ ಆತ ಮೆಲ್ಲಗೆ ಹೋಗಿ ಆ ರೂಮಿನ ಕಪಾಟಿನೊಳಗೆ ಹೋಗಿ ಮೆಲ್ಲಗೆ ಅವಿತುಕೊಂಡುಬಿಡುತ್ತಾನೆ. ಕೆಲವೇ ಕ್ಷಣಗಳಲ್ಲಿ ಗಂಡ ಕೂಡ ತಲೆ ನೋವೆಂದು ಮನೆಗೆ ಮರಳಿ ಬಂದುಬಿಡುತ್ತಾನೆ.

ಇದು ಹೆಂಡತಿಯ ಗಮನಕ್ಕೆ ಬರುತ್ತಿದ್ದಂತೆಯೆ, ಗೌನನ್ನು ಮೈಮೇಲೆ ಎಳೆದುಕೊಂಡು, ಸಿಕ್ರೆಟ್ ಸಂಗಾತಿಯನ್ನು ಮಗ ಅವಿತುಕೊಂಡಿದ್ದ ಕಪಾಟಿನೊಳಗಿ ಬಚ್ಚಿಟ್ಟುಬಿಡುತ್ತಾಳೆ. ಅಚ್ಚರಿಯಾದರೂ ತೋರಿಸಿಕೊಳ್ಳದೆ, ಹಾಸಿಗೆಯನ್ನು ಸರಿಮಾಡಿ, ಸ್ನಾನ ಮಾಡಿ ಬರುತ್ತೇನೆಂದು ಬಚ್ಚಲುಮನೆಗೆ ಲಗುಬಗನೆ ಓಡಿಬಿಡುತ್ತಾಳೆ. ಇತ್ತಕಡೆ ಕಪಾಟಿನಲ್ಲಿ ಕುಶಲೋಪರಿ ಶುರುವಾಗುತ್ತದೆ.

"ಸಿಕ್ಕಾಪಟ್ಟೆ ಕತ್ತಲಿದೆಯಿಲ್ಲಿ" ಮಗ ಪಿಸುದನಿಯಲ್ಲಿ ಅಂದಿರುತ್ತಾನೆ.

"ಹೌದು" ಎಂಬ ಉತ್ತರ ಸಿಕ್ರೆಟ್ ಇನಿಯನಿಂದ ಬರುತ್ತದೆ.

"ನನ್ನ ಬಳಿ ಫುಟ್ಬಾಲ್ ಇದೆ ಕೊಂಡ್ಕೊಳ್ತಿಯಾ?" ಮಗ ಕೇಳುತ್ತಾನೆ.

"ನೋ ಚಾನ್ಸ್" ಲವರ್ ಉತ್ತರಿಸುತ್ತಾನೆ.

"ನನ್ನ ಅಪ್ಪ ಹೊರಗಿದ್ದಾನೆ. ನೀನು ಕೊಳ್ಳಲಿಲ್ಲವೆಂದರೆ ಅಪ್ಪನನ್ನು ಕರೆಯುತ್ತೇನೆ" ಕಿಲಾಡಿಯ ಬ್ಲಾಕ್ ಮೇಲಿಂಗ್ ಶುರು.

"ಓಕೆ, ಓಕೆ ಎಷ್ಟು?" ಲವರ್ ಕತ್ತಲಲ್ಲೇ ಬೆವರಿರುತ್ತಾನೆ.

"ಸಾವಿರ ರು." ಎಂಬ ಮಾತಿಗೆ ಲವರ್ ದಂಗಾದರೂ ಗತ್ಯಂತರವಿಲ್ಲದೆ ಕೊಂಡಿರುತ್ತಾನೆ.

ಒಂದು ವಾರದ ನಂತರ ಅದೇನು ಕಾಕತಾಳೀಯವೋ ಏನೋ ಇದೇ ಘಟನೆ ಮರುಕಳಿಯಾಗಿರುತ್ತದೆ. ಮಗ ಮತ್ತು ಹೆಂಡತಿಯ ಸಿಕ್ರೆಟ್ ಸಂಗಾತಿ ಕಪಾಟಿನಲ್ಲಿ ಅವಿತುಕೊಂಡಿರುತ್ತಾರೆ. ಮಗ ಅದೇ ಚಾಣಾಕ್ಷತನದಿಂದ ತನ್ನ ಬೂಟನ್ನೂ ಮಾರಿಬಿಟ್ಟಿರುತ್ತಾನೆ.

ಅದರ ಮುಂದಿನ ಭಾನುವಾರ ಮಗನನ್ನು ಕರೆದು "ನಡಿ ಫುಟ್ಬಾಲ್ ಆಡೋಣ" ಅಂತ ಅಪ್ಪ ಮಗನನ್ನು ಕೇಳುತ್ತಾನೆ. ಮಗ, "ಇಲ್ಲ ಅವನ್ನು ಐದು ಸಾವಿರ ರು.ಗೆ ಮಾರಿಬಿಟ್ಟೆ" ಎಂದು ನಿರ್ಭಾವುಕನಾಗಿ ಹೇಳುತ್ತಾನೆ. ನಖಶಿಖಾಂತ ಉರಿದ ಅಪ್ಪ, "ಇದು ಮಹಾ ಪಾಪ, ನಡಿ ನಿನ್ನ ತಪ್ಪನ್ನು ಒಪ್ಪಿಕೊಂಡು ಪಾಪ ಪರಿಹಾರ ಮಾಡಿಕೋ" ಎಂದು ಮಗನನ್ನು ದರದರ ಎಳೆದುಕೊಂಡು ಚರ್ಚಿಗೆ ಹೋಗುತ್ತಾನೆ.

ಕನ್ಫೆಷನ್ ರೂಂ ಸೇರಿಕೊಂಡ ಮಗ, ಕದ ಹಾಕಿಕೊಳ್ಳುತ್ತಾನೆ. ಹೊರಗಡೆ ಫಾದರ್ ನಿಂತಿರುತ್ತಾರೆ. ಅವರು "ಯಸ್" ಅನ್ನುತ್ತಿದ್ದಂತೆ, "ಸಿಕ್ಕಾಪಟ್ಟೆ ಕತ್ತಲಿದೆಯಿಲ್ಲಿ" ಎಂದು ಮಗ ಹೇಳುತ್ತಿದ್ದಂತೆ...

"ಏಯ್, ಮತ್ತೆ ಶುರು ಮಾಡಿದೆಯೇನೋ, ಇದು ಚರ್ಚ್ ನಿನ್ನ ಮನೆಯ ಬೆಡ್ ರೂಂ ಅಲ್ಲ" ಎಂದು ಒಂದೇ ಸವನೆ ಒದರಲು ಶುರುಮಾಡುತ್ತಾನೆ. ಹುಡುಗ ಕದ ತೆಗೆದು ಅಲ್ಲಿಂದ ಪರಾರಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+