ಮಕಮಕ ನೋಡಿಕೊಂಡ ಆಂಟಿ ಮತ್ತು ಅಕ್ಕ!
ಲಲ್ಲಲಲಾ ಲಾಲಾ ಅಂತ ಹಾಡಿಕೊಂಡು, ತನ್ನ ಕನಸಿನ ಲೋಕದಲ್ಲಿ ವಿಹರಿಸಿಕೊಂಡು ಬರುತ್ತಿದ್ದ ಹದಿಮೂರು ವರ್ಷದ ರಿಕ್ಕಿಯನ್ನು ಹಠಾತ್ತನೆ ಮಹಿಳೆಯೊಬ್ಬಳು ಕಿರುಚಿದ್ದು ವಾಸ್ತವ ಲೋಕಕ್ಕೆ ತಂದು ಬಿಸಾಕಿರುತ್ತದೆ. ಯಾರದಿರಬಹುದು ಎಂದು ತದೇಕಚಿತ್ತದಿಂದ ಕೇಳಿದಾಗ, ಅದು ಪಕ್ಕದ ಮನೆಯ ಆಂಟಿಯ ದನಿ ಎಂದು ತಿಳಿದುಬರುತ್ತದೆ.
ಕೂಡಲೆ ಅವರ ಮನೆಗೆ ಹೋಗಿ ಬಾಗಿಲುಬಡಿದು ಕೇಳುತ್ತಾನೆ. ಆಂಟಿಯ ಗಂಡ ತಾವಿಬ್ಬರು ಕಾರ್ಡ್ಸ್ ಆಡುತ್ತಿದ್ದೇವೆಂದು ಉತ್ತರ ಹೇಳುತ್ತಾನೆ. ಅದಕ್ಯಾಕೆ ಈ ಪರಿ ಕಿರುಚಬೇಕು ಎಂದು ತನ್ನಷ್ಟಕ್ಕೆ ತಾನು ಅಂದುಕೊಂಡು ಮನೆಗೆ ಮರಳುತ್ತಾನೆ. ಮನೆಯ ಒಳಗಡೆ ಕಾಲಿಡಬೇಕು ಮತ್ತೊಂದು ಅದೇ ರೀತಿ ಕಿರುಚಿದ ದನಿ ಕೇಳುತ್ತದೆ. ಈ ಬಾರಿ ಆ ದನಿ ತನ್ನ ಅಕ್ಕನದೆಂದು ತಿಳಿಯಲು ಆತನಿಗೆ ಹೆಚ್ಚು ಸಮಯ ಹಿಡಿಯುವುದಿಲ್ಲ.
ಅಕ್ಕನ ರೂಮಿಗೆ ಹೋಗಿ, ಯಾಕೆ ಕಿರುಚಿದ್ದೆಂದು ಕೇಳುತ್ತಾನೆ. ಯಾರೊಂದಿಗೆ ಎಂದು ಪ್ರಶ್ನಿಸುತ್ತಾನೆ ಕಿಕ್ಕಿ. ನನ್ನ ಬಾಯ್ ಫ್ರೆಂಡ್ ಜೊತೆ ಕಾರ್ಡ್ಸ್ ಆಡುತ್ತಿದ್ದೇನೆಂದು ಅಕ್ಕನಿಂದ ಮಾರುತ್ತರ ಬರುತ್ತದೆ. ಒಂದಿಷ್ಟು ಸಮಯದ ನಂತರ ಮತ್ತೆ ಅದೇ ಬಗೆಯ ಕಿರುಚಾಟ ರಿಕ್ಕಿಗೆ ಕೇಳಿಬರುತ್ತದೆ.
ಆಂಟಿ ಕಿರುಚಿದಾಗ ಉದ್ಭವವಾದ ಪ್ರಶ್ನೆಗೆ ತಿಳಿಯದ ಉತ್ತರ, ಅಕ್ಕ ಎರಡನೇ ಬಾರಿ ಕಿಟಾರನೆ ಕಿರುಚಿಕೊಂಡಾಗ ಹೊಳೆದಿರುತ್ತದೆ. ಸ್ವಲ್ಪ ಸಮಯದ ನಂತರ ರಿಕ್ಕಿಯೇ ಕಿಟಾರನೆ ಕಿರುಚಿಕೊಳ್ಳಲು ಆರಂಭಿಸುತ್ತಾನೆ. ಬಿಡುವು ಮಾಡಿಕೊಂಡಿದ್ದ ಪಕ್ಕದ ಮನೆ ಆಂಟಿ ಮತ್ತು ರಿಕ್ಕಿಯ ಅಕ್ಕ ರಿಕ್ಕಿಯ ಕೋಣೆಗೆ ಬಂದು, ಯಾಕೆ ಕಿರುಚಿದ್ದೆಂದು ಬಾಗಿಲು ಬಡಿದು ಕೇಳುತ್ತಾರೆ.
ರಿಕ್ಕಿ "ನಾನೂ ಕಾರ್ಡ್ಸ್ ಆಡುತ್ತಿದ್ದೇನೆ" ಎಂದು ಉತ್ತರಿಸುತ್ತಾನೆ.
ಆಂಟಿ ಮತ್ತು ಅಕ್ಕ ಅಚ್ಚರಿಯಿಂದ "ಯಾರ ಜೊತೆ ಆಡ್ತಿದ್ದಿ" ಎಂದು ಒಕ್ಕೊರಲಿನಿಂದ ಮತ್ತು ತುಸು ಗಾಬರಿಯಿಂದ ಕೇಳುತ್ತಾರೆ.
ರಿಕ್ಕಿ "ಕಾರ್ಡ್ಸ್ ಆಡೋದಕ್ಕೆ ಪಾರ್ಟನರ್ಸ್ ಯಾಕೆ ಬೇಕು, ನನ್ನ ಬಳಿ ಎರಡು ಕೈಗಳಿವೆ" ಎಂದು ಉತ್ತರ ಕೊಟ್ಟಾಗ ಆಂಟಿ ಮತ್ತು ಅಕ್ಕ ಮಕಮಕ ನೋಡಿಕೊಂಡಿರುತ್ತಾರೆ. [ವಯಸ್ಕರ ಜೋಕ್ಸ್]












Click it and Unblock the Notifications