• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಲೀಸ್ ಡಾಕ್ಟರ್, ನನಗೆ ವಿಪರೀತ ನಾಚ್ಕೆ!

|

ಆಕರ್ಷಕ ಮೈಕಟ್ಟಿರುವ, ಸುಂದರ ಕೇಶರಾಶಿಯಿರುವ, ಮದುವೆಗಾಗಿ ಕಾದುನಿಂತಿರುವ, ಇನ್ನೂ ಇಪ್ಪತ್ಮೂರು ದಾಟಿಲ್ಲದ, ಕನ್ಯತ್ವವನ್ನು ಕಾಪಾಡಿಕೊಂಡಿರುವ, ಆದರೆ ವಿಪರೀತ ನಾಚಿಕೆಯ ಸ್ವಭಾವದ ಯುವತಿಯೊಬ್ಬಳು ಲೈಂಗಿಕ ವೈದ್ಯರ ಬಳಿ ಚಿಕಿತ್ಸೆಗೆಂದು ಬರುತ್ತಾಳೆ.

ಆಕೆಯನ್ನು ಮುಂದೆ ಕೂಡಿಸಿಕೊಂಡ ನುರಿತ ವೈದ್ಯ ಡಾ. ಡಿಬ್ಬಿ ಎಲ್ಲ ವಿವರಗಳನ್ನು ತನ್ನ ಲ್ಯಾಪ್ ಟಾಪಿನಲ್ಲಿ ದಾಖಲಿಸಿಕೊಳ್ಳುತ್ತಾನೆ. ನಂತರ ವಿವಸ್ತ್ರಳಾಗಿ ಪರೀಕ್ಷಾ ಟೇಬಲ್ ಮೇಲೆ ಮಲಗಿಕೊಳ್ಳಬೇಕೆಂದು ಡಿಬ್ಬಿ ಯುವತಿಗೆ ಆಜ್ಞಾಪಿಸುತ್ತಾನೆ.

ಯುವತಿ ಕ್ಷಣಕಾಲ ಬೆಚ್ಚಿಬೀಳುತ್ತಾಳೆ. "ಪ್ಲೀಸ್ ಡಾಕ್ಟರ್. ನಾನು ವಿಪರೀತ ನಾಚಿಕೆ ಸ್ವಭಾವದಳು. ಇಷ್ಟೊಂದು ಬೆಳಕಿನಲ್ಲಿ ಅದೂ ನಿಮ್ಮೆದುರಿಗೆ ವಿವಸ್ತ್ರಳಾಗುವುದು ಸಾಧ್ಯವೇ ಇಲ್ಲ. ನನಗೆ ವಿಪರೀತ ನಾಚ್ಕೆ" ಎಂದು ಆಕೆ ಗೋಗರೆದಳು.

"ಓಕೆ, ಓಕೆ ನೋ ಪ್ಲಾಬ್ಲಂ. ನಿನ್ನ ತೊಂದರೆ ನನಗೆ ಅರ್ಥ ಆಗತ್ತೆ. ಅಲ್ಲಿ ಪಕ್ಕದ ಕೋಣೆಗೆ ನಡಿ. ಅಲ್ಲಿ ದೀಪ ಸಂಪೂರ್ಣವಾಗಿ ಆರಿಸಿಬಿಡುತ್ತೇನೆ. ಅಲ್ಲಿ ನೀನು ವಿವಸ್ತ್ರಳಾಗಬಹುದು. ಪರೀಕ್ಷೆ ಮಾಡಲು ವಿವಸ್ತ್ರಳಾಗುವುದು ತೀರ ಅಗತ್ಯ" ಎಂದು ಹೇಳಿದ ಡಿಬ್ಬಿ. ಆಕೆಗೂ ಓಕೆ ಅನ್ನಿಸಿತು.

ಲೈಟ್ ಆಫ್, ಅನ್ ಡ್ರೆಸಿಂಗ್ ಆನ್. ಕೋಣೆಯಲ್ಲಿ ಸಿಕ್ಕಾಪಟ್ಟೆ ಕತ್ತಲಿತ್ತು. ಎರಡೇ ಅಡಿ ದೂರದಲ್ಲಿ ಯಾರಿದ್ದಾರೆ ಎಂದು ಕೂಡ ಕಾಣುತ್ತಿರಲಿಲ್ಲ. ವೈದ್ಯ ಹೇಳಿದಂತೆ ವಿವಸ್ತ್ರಳಾದ ನಂತರ, ಏನೂ ಕಾಣದ್ದರಿಂದ, ಬಟ್ಟೆ ಎಲ್ಲಿಡಬೇಕೆಂದು ಆಕೆ ವೈದ್ಯರನ್ನು ಕೇಳುತ್ತಾಳೆ.

ಅದಕ್ಕೆ, "ಹಂಗೇ ಕೈಯಾಡಿಸು, ಬಲಗಡೆ ಭಾಗದಲ್ಲಿ ಒಂದು ಕುರ್ಚಿ ಸಿಗತ್ತೆ. ಅದರ ಮೇಲೆ ನನ್ನ ಬಟ್ಟೆ ಇವೆ. ಅವುಗಳ ಮೇಲೆ ಇಡು!" [ಡಾಕ್ಟರ್ ಜೋಕ್ಸ್]

English summary
Doctor jokes in Kannada : A beautiful but shy girl, who is yet to be married goes to a doctor for check up. Doctor asks her to undress for a thorough check up. But, she denies to do it in front of him and in bright light. So, doctor gives a solution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X