• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋ ಚಾನ್ಸ್, ಯಪ್ಪೋ ಸಿಕ್ಕಾಪಟ್ಟೆ ತುಟ್ಟಿ!

|

ವಿದೇಶದಲ್ಲಿ ನೆಲೆಸಿದ್ದ ಮಾರವಾಡಿ ಮಂಗೇಶ ಒಂದು ದಿನ ಇರುಳಿನ ಹೊತ್ತಿನಲ್ಲಿ ಒಬ್ಬಂಟಿಯಾಗಿ ವಾಕಿಂಗ್ ಹೋಗಿರುತ್ತಾನೆ. ಅದು ನಿರ್ಜನವಾದ ಪ್ರದೇಶ. ದೂರದಲ್ಲಿ ಕಡಲತೀರಕ್ಕೆ ಅಪ್ಪಳಿಸುತ್ತಿದ್ದ ಅಲೆಯ ಹೊಡೆತಗಳ ಶಬ್ದ ಬಿಟ್ಟರೆ ಬೇರೇನೂ ಕೇಳುತ್ತಿರುವುದಿಲ್ಲ. ಅದೇ ಸಮಯದಲ್ಲಿ ಅತ್ಯದ್ಭುತವಾದ ದೇಹಸೌಂದರ್ಯವುಳ್ಳ ವಿದೇಶಿ ಯುವತಿ ಲವೀನಾ ಅದೇ ದಾರಿಯಲ್ಲಿ ಬರುತ್ತಿರುತ್ತಾಳೆ.

ಆಕೆಯನ್ನು ವಿಚಿತ್ರವಾಗಿ ನೋಡಿ, ಧೈರ್ಯ ತಂದುಕೊಂಡು, "ನಿನ್ನ ಸ್ತನವನ್ನು ಒಂದೇ ಒಂದು ಸಾರಿ ಕಚ್ಚಿಬಿಡ್ತೀನಿ. ನೂರು ಡಾಲರ್ ಕೊಡ್ತೀನಿ" ಎಂದು ಚಟಕ್ಕನೆ ಹೇಳಿ ಆಸೆ ಹುಟ್ಟಿಸಲು ನೋಡುತ್ತಾನೆ.

ಅವನ ಮಾತಿನಿಂದ ದಂಗಾದರೂ ಧೈರ್ಯ ತಂದುಕೊಂಡ ಆಕೆ, "ಏಯ್ ನಡಿಯಾಚೆ, ಏನ್ ತಿಳ್ಕೊಂಡಿದ್ದಿಯಾ ನನ್ನ?" ಎಂದು ಝಾಡಿಸುತ್ತಾಳೆ.

ಬಿಡಬೇಕಲ್ಲ ಮಾರವಾಡಿ, "ಸಾವಿರ ಡಾಲರ್? ಯಾರಿಗುಂಟು ಯಾರಿಗಿಲ್ಲ?" ಮತ್ತೆ ಆಸೆ ತೋರಿಸಲು ಯತ್ನಿಸುತ್ತಾನೆ ಮಾರವಾಡಿ ಮಂಗಣ್ಣ.

"ಗೆಟ್ ಲಾಸ್ಟ್, ನಾನು ಅಂಥವಳು ಅಲ್ಲವೇ ಅಲ್ಲ" ಎಂದು ದಿಟ್ಟವಾಗಿ, ಆದರೆ ಸ್ಥಿರವಾಗಿ ನಿಂತು ಹೇಳುತ್ತಾಳೆ ಲವೀನಾ.

"10 ಸಾವಿರ ಡಾಲರ್? ಇಂಥ ಅವಕಾಶ ಯಾರಿಗೆ ಸಿಗತ್ತೆ? ಕೆಲವೇ ಕ್ಷಣದಲ್ಲಿ 10 ಸಾವಿರ ಡಾಲರ್ ಅಂದ್ರೆ ತಮಾಷೇನಾ?" ಎನ್ನುತ್ತ ಮಾತಿನ ಗುಂಡು ಎಸೆದಿರುತ್ತಾನೆ. ಗುಂಡು ಗುರಿ ಮುಟ್ಟಿರುತ್ತದೆ. ಆಕೆ ಓಕೆ ಎಂದು ಹೇಳುತ್ತಾಳೆ.

ಟಾಪ್ ಲೆಸ್ ಆದ ಆಕೆಯೊಡನೆ ಎಲ್ಲ ರೀತಿಯ ಆಟವಾಡಲು ಶುರು ಮಾಡುತ್ತಾನೆ, ಕಚ್ಚುವುದನ್ನೊಂದು ಹೊರತುಪಡಿಸಿ. ಸುಮಾರು ಹೊತ್ತು ಆಟವಾಡಿದ ಮೇಲೆ ಇನ್ನು ಸಾಕು ಎಂದು ಹಿಂದೆ ಸರಿಯುತ್ತಾನೆ. ಯುವತಿಗೆ ಅಚ್ಚರಿ ಜೊತೆ ಸಿಕ್ಕಾಪಟ್ಟೆ ಕೋಪ ಬಂದಿರುತ್ತದೆ.

"ಯಾಕೋ ನಿಂದು ಜಾಸ್ತಿಯಾಯ್ತು. ಕಚ್ತಿಯೋ ಇಲ್ವೋ" ಎಂದು ಕಿರುಚುತ್ತಾಳೆ.

"ನೋ ಚಾನ್ಸ್, ಯಪ್ಪೋ ಸಿಕ್ಕಾಪಟ್ಟೆ ತುಟ್ಟಿ" ಎಂದು ಹೇಳಿ ಮಾರವಾಡಿ ಅಲ್ಲಿಂದ ಜಾಗ ಖಾಲಿ ಮಾಡಿಬಿಡುತ್ತಾನೆ. ಯುವತಿ ಏನು ನಡೆಯಿತು ಎಂದು ತಿಳಿಯದೆ ದಂಗಾಗಿ ನಿಂತಿರುತ್ತಾಳೆ.

English summary
Adult kannada jokes. Marwadi Manganna gets a wild thought of biting breasts of a young beautiful lady, when both were walking alone on the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X