ನನ್ನ ಗಂಡ ಮನೇಲಿದ್ದಾನೆ, ನನ್ನ ಗಂಡ ಮನೇಲಿದ್ದಾನೆ!
ಡೆಂಗ್ಯೂ ಜ್ವರ ಬಂದು ತೀವ್ರ ಅಸ್ವಸ್ಥನಾಗಿದ್ದ ಗುಂಡ ಒಂದು ವಾರಗಳ ಕಾಲ ಆಫೀಸಿಗೆ ಚಕ್ಕರ್ ಹಾಕಿದ್ದ. ಚೆನ್ನಾಗಿ ಚಿಕಿತ್ಸೆ ಪಡೆದು ಗುಂಡ ಒಂದು ದಿನ ಕಚೇರಿಗೆ ಬಂದ. ಸ್ವಲ್ಪ ನಿತ್ರಾಣನಾದಂತೆ ಕಂಡುಬಂದರೂ ಸಾಕಷ್ಟು ಚೇತರಿಸಿಕೊಂಡಿದ್ದ.
ಗುಂಡ ಕಚೇರಿಗೆ ಬಂದಿದ್ದು ತಿಳಿಯುತ್ತಿದ್ದಂತೆ ಅವನನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಲು ಸಹೋದ್ಯೋಗಿ ತಿಮ್ಮ ಆಗಮಿಸಿದ.
ತಿಮ್ಮ : ಹ್ಯಾಗಿದ್ದಿ ಗುಂಡೂರಾವ್? ಡೆಂಗ್ಯೂ ಬಂದಿತ್ತಂತೆ, ಈಗ ಹುಷಾರಾ?
ಗುಂಡ : ಸಾಕಷ್ಟು ಚೇತರಿಸಿಕೊಂಡಿದ್ದೇನೆ. ಜೀವನ ಎಷ್ಟು ಸುಂದರವಾಗಿದೆ ಎಂದು ಈ ಒಂದು ವಾರದಲ್ಲಿ ತಿಳಿದುಕೊಂಡೆ ಕಣೋ ತಿಮ್ಮ.
ತಿಮ್ಮ : ಡೆಂಗ್ಯೂ ಬಂದ್ರೆ ಜೀವನ ಸುಂದರವಾಗಿರುತ್ತೇನೋ?
ಗುಂಡ : ಇನ್ನೇನೋ ಮತ್ತೆ, ನನ್ನ ಹೆಂಡತಿ ನನ್ನ ಎಷ್ಟು ಪ್ರೀತಿಸುತ್ತಾಳೆ ಎಂದು ಈ ಒಂದು ವಾರದಲ್ಲಿ ಮನದಟ್ಟು ಮಾಡಿಕೊಟ್ಟಳು. ಮನೆಗೆ ಯಾರೇ ಬರಲಿ ನನಗೆ ಏಳುವುದಕ್ಕೇ ಬಿಡುತ್ತಿರಲಿಲ್ಲ. ಬೆಳಿಗ್ಗೆ ಹಾಲಿನವ ಬಂದ್ರೆ ಏಳಲೂ ಬಿಡದೆ ತಾನೇ ಹಾಲು ತೆಗೆದುಕೊಳ್ಳುತ್ತಿದ್ದಳು. ಮಧ್ಯಾಹ್ನ ಪೋಸ್ಟ್ ಮ್ಯಾನ್ ಬಂದು ಬಾಗಿಲು ತಟ್ಟಿದರೆ ತಾನೇ ಓಡಿ ಹೋಗಿ ಪತ್ರ ತೆಗೆದುಕೊಳ್ಳುತ್ತಿದ್ದಳು. ಎಷ್ಟು ಹೆಮ್ಮೆಯಿಂದ ನನ್ನ ಬಗ್ಗೆ ಆಕೆ ಬಂದವರ ಬಳಿ ಹೇಳಿಕೊಳ್ಳುತ್ತಿದ್ದಳು ಗೊತ್ತಾ?
ತಿಮ್ಮ : ಏನಂತ ಹೇಳುತ್ತಿದ್ದರು ಭಾಭೀಜಿ?
ಗುಂಡ : 'ನನ್ನ ಗಂಡ ಮನೇಲಿದ್ದಾರೆ, ನನ್ನ ಗಂಡ ಮನೇಲಿದ್ದಾರೆ' ಎಂದು ಆಕೆ ಅವರ ಮುಂದೆ ಹೇಳುತ್ತಿದ್ದುದು ನನ್ನ ಕಿವಿಗೆ ಬೀಳುತ್ತಿತ್ತು! [ಗಂಡ ಹೆಂಡತಿ ಜೋಕ್ಸ್]












Click it and Unblock the Notifications