ಲವೀನಾ ಮಾತು ಕೇಳಿ ಸ್ಟನ್ ಆದ ಯತೀಶ!

ಅಮೆರಿಕಕ್ಕೆ ಹೋದ ಎರಡು ವರ್ಷದಲ್ಲಿ ಅಲ್ಲಿಯ ಜೀವನ ಹೇಗೆಂದು ಸಾಫ್ಟ್ ವೇರ್ ಇಂಜಿನಿಯರ್ ಯತೀಶ್ ನೋಡಿಬಿಟ್ಟಿದ್ದ. ಮದುವೆಯಾದ್ರೆ ಸತಿ ಸಾವಿತ್ರಿಯಂಥ ಹುಡುಗಿಯನ್ನೇ ಮದುವೆಯಾಗಬೇಕು, ಹಳ್ಳಿಗುಗ್ಗು ಆಗಿದ್ರೂ ಸರಿ, ಅನಕ್ಷರಸ್ಥೆಯಾಗಿದ್ರೂ ಸರಿ ಎಂದು ದಿಟ್ಟ ನಿರ್ಧಾರ ಮಾಡಿಬಿಟ್ಟಿದ್ದ. ಒಟ್ಟಿನಲ್ಲಿ ಚೆನ್ನಾಗಿ ಅಡುಗೆ ಮಾಡಿ ಹಾಕುತ್ತ, ಇಡೀ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡ್ರೆ ಸಾಕು ಎಂಬ ತೀರ್ಮಾನಕ್ಕೆ ಬಂದ.

ಆತನ ತಂದೆ ತಾಯಿ ಕೂಡ ಅದನ್ನೇ ಬಯಸಿದ್ದರು. ಸೊಸೆ ಕೂಡ ಕೆಲಸಕ್ಕೆ ಹೋಗಿ ಕಡಿದು ಕಟ್ಟೆ ಹಾಕುವುದು ಅಷ್ಟರಲ್ಲೇ ಇರಲಿ, ಸುಮ್ಮನೆ ಮನೇಲಿದ್ದು, ನಾಲ್ಕಾರು ಮೊಕ್ಕಳನ್ನು ಕೊಟ್ಟು ಸುಖವಾಗಿರಲಿ ಎಂದು ಬಯಸಿದ್ದರು. ಮಗನನ್ನು ತಮ್ಮ ಹಳ್ಳಿಗೆ ಒನ್ ಫೈನ್ ಡೇ ಕರೆಸಿಕೊಂಡರು. ಹುಡುಗಿ ನೋಡುವ ಕಾರ್ಯಕ್ರಮ ಫಿಕ್ಸ್ ಮಾಡಿದರು.

ಹುಡುಗಿ ಮತ್ಯಾರೂ ಅಲ್ಲ, ಅವರ ಮನೆಯಿಂದ ಎಂಟು ಮನೆ ದೂರವಿದ್ದ ಲವೀನಾ. ನೋಡಲು ಎಷ್ಟು ಚೆನ್ನಾಗಿದ್ದಳು, ಎಷ್ಟು ಸಹಜವಾಗಿದ್ದಳು, ಎಷ್ಟು ದಷ್ಟಪುಷ್ಟವಾಗಿದ್ದಳೆಂದರೆ ಮೊದಲನೇ ನೋಟದಲ್ಲೇ ಯತೀಶ್ ಆಕೆಯ ಸೌಂದರ್ಯಕ್ಕೆ ಮರುಳಾಗಿಬಿಟ್ಟ. ಆಕೆ ನಾಲ್ಕನೇ ತರಗತಿ ದಾಟಿಲ್ಲದಿದ್ದುದು ಆತನಿಗೆ ಇನ್ನೂ ಇಷ್ಟವಾಗಿತ್ತು. ಯಾಕೆಂದರೆ, ಸಿಕ್ಕಾಪಟ್ಟೆ ಕಲಿತ ಸಾಫ್ಟ್ ವೇರ್ ಇಂಜಿನಿಯರ್ ಹುಡುಗಿಯರು ಹ್ಯಾಗೆ ವರ್ತಿಸುತ್ತಾರೆ ಎಂದು ಆತ ಕಣ್ಣಾರೆ ಕಂಡಿದ್ದ.

ನೋಡಿಯಾದ ಮೇಲೆ ಇಬ್ಬರೂ ಮಹಡಿಯ ಮೇಲೆ ಹೋಗಿ ಕುಳಿತು ಮಾತನಾಡಿದರು. ಇಷ್ಟಕಷ್ಟಗಳನ್ನೆಲ್ಲ ತಿಳಿದುಕೊಂಡರು. ಮದುವೆಯಾದ ಮೇಲೆ ನಿನ್ನನ್ನು ಊಹಿಸದೆ ಇರುವಂಥ ಸ್ಥಳಕ್ಕೆ ಹನಿಮೂನಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಆಕೆಯನ್ನು ಆಸೆಯ ಅಟ್ಟದ ಮೇಲೆ ಹತ್ತಿಸಿಬಿಟ್ಟ. 'ಹನಿಮೂನ್' ಶಬ್ದ ಕೇಳಿ ಚಂದ್ರನ ಮೇಲೆ ಕರೆದುಕೊಂಡು ಹೋಗುತ್ತಾನೆ ಎಂದು ಲವೀನಾ ತಿಳಿದು ಸಖತ್ ಥ್ರಿಲ್ ಆಗಿಬಿಟ್ಟಳು.

ಸರಿ, ಇಬ್ಬರದೂ ಮದುವೆಯಾಯಿತು, ಅಮೆರಿಕಾಕ್ಕೆ ಬಂದರು. ಮೊದಲ ರಾತ್ರಿಯನ್ನು ಕೂಡ ಅಮೆರಿಕದಲ್ಲಿಯೇ ಭರ್ಜರಿಯಾಗಿ ಆಚರಿಸಿಕೊಂಡರು. ಅದೇದಿನ ಆತನ ಎದೆಯ ಮೇಲಿನ ಕೂದಲಿನ ಮೇಲೆ ಬೆರಳಾಡಿಸುತ್ತ ಲವೀನಾ ಕೇಳೇಬಿಟ್ಟಳಲ್ಲ, "ಮದುವೆಯಾದ ಮೇಲೆ ಚಂದ್ರನ ಮೇಲೆ ಕರೆದುಕೊಂಡು ಹೋಗ್ತೀನಂತ ಹೇಳಿದ್ರಲ್ಲ. ಯಾವಾಗ ಹೋಗೋಣ? ಆ ಕಾರಣಕ್ಕಾಗಿಯೇ ನಿಮ್ಮನ್ನು ಮದುವೆಯಾಗಲು ನಾನು ಒಪ್ಪಿದ್ದು" ಎಂದು ಒಂದೇ ಸವನೆ ಕೇಳಿದಳು.

"ಲೇಲೇ ಪೆದ್ದಿ ಪೆದ್ದಿ, ಹನಿಮೂನಂದ್ರೆ ಚಂದ್ರನಲ್ಲವೇ ಲವಿ, ಮದುವೆಯಾದ ಮೇಲೆ ಗಂಡ ಹೆಂಡತಿ ಸೇರಿ ಅಡ್ಡಾಡಿಕೊಂಡು, ಒಬ್ಬರನ್ನೊಬ್ಬರು ತಬ್ಬಿಕೊಂಡು ಸಖತ್ ಮಜಾ ಮಾಡಲು ಹೋಗುವ ಒಂದು ಸುಂದರವಾದ ತಾಣ" ಎಂದು ಯತೀಶ್ ವಿವರಿಸಿದ. ತನ್ನ ಹೆಂಡತಿ ಈ ಪರಿಯ ಪೆದ್ದಿ ಎಂದು ಆತ ಲೆಕ್ಕ ಹಾಕಿರಲಿಲ್ಲ. ಆದರೆ, ಲವೀನಾ ಮಾತು ಕೇಳಿ ಸ್ಟನ್ ಆಗಿಬಿಟ್ಟ ಯತೀಶ.

"ಅಯ್ಯ ನಿಮ್ಮ ನಿಮ್ಮ ನಿಮ್ಮ, ಹನಿಮೂನಂದ್ರೆ ಆದಾ. ಇಂಥ ಹನಿಮೂನುಗಳಿಗೆ ನಮ್ಮ ಹೊಲದಲ್ಲಿ ಅದೆಷ್ಟು ಬಾರಿ ಹೋಗಿ ಬಂದೇನೋ ಲೆಕ್ಕವೇ ಇಲ್ಲ" ಎಂದು ಬಟ್ಟೆ ಸರಿಮಾಡಿಕೊಂಡು ಲವೀನಾ ಹೊರಟುಬಿಟ್ಟಳು. ತಾನೊಬ್ಬ ಭಾರೀ ಬುದ್ಧಿವಂತ ಅಂತ ಅಂದುಕೊಂಡಿದ್ದ ಯತೀಶನ ಜಾಣತನಕ್ಕೇ ಲವೀನಾ ಕೊಟ್ಟಿದ್ದಳು ನೋಡಿ ಭರ್ಜರಿ ಏಟು. [ಲವೀನಾ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+