ಓಹೋಹೋ ಗೊತ್ತಾಯ್ತು ಗೊತ್ತಾಯ್ತು ಬಿಡಿ!

ಲವೀನಾಗೆ ವಯಸ್ಸು ಇನ್ನೇನು ಇಪ್ಪತ್ತೆರಡು ದಾಟುವ ಹಂತದಲ್ಲಿತ್ತು. ಆದರೆ, ಬಾಬ್ ಕಟ್ ಮಾಡಿಸಿಕೊಂಡು ಪ್ಯಾಂಟು ಶರ್ಟು ಧರಿಸಿದರೆ ಸಾಕ್ಷಾತ್ ಗಂಡಸಿನಂತೆ ಕಾಣಿಸುತ್ತಿದ್ದಳು. ಅರ್ಥಾತ್ ಗಂಡನ್ನು ಆಕರ್ಷಿಸುವ ಸ್ತನಗಳು ಆಕೆಗಿರಲಿಲ್ಲ. ಹೀಗಾಗಿ ಆಕೆಗೆ ಕೇರಂ ಬೋರ್ಡ್ ಎಂದು ಅಡ್ಡ ಹೆಸರು ಇಟ್ಟಿದ್ದು ಆಕೆಗೆ ಹೇಗೋ ತಿಳಿದುಬಿಟ್ಟಿತ್ತು.

ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಊರೂರಿನಲ್ಲಿರುವ ಕಂಡಕಂಡ ಡಾಕ್ಟರುಗಳಿಗೆ ತೋರಿಸಿದ್ದಳು. ಪ್ರಯೋಜನವಾಗಿರಲಿಲ್ಲ. ಕೊನೆಗೆ, ಇಷ್ಟವಿಲ್ಲದಿದ್ದರೂ ಕಾವಿಧಾರಿಯೊಬ್ಬರ ಮೊರೆಹೋಗಿದ್ದಳು. ಆ ಕಾವಿಧಾರಿ ಆಕೆಗೊಂದು ರಹಸ್ಯ ಮಂತ್ರ ಹೇಳಿಕೊಟ್ಟಿದ್ದರು. ಆ ಮಂತ್ರವನ್ನು ಏಳು ಬಾರಿ ಪ್ರತಿನಿತ್ಯ ತಪ್ಪದೆ ಉಚ್ಚರಿಸಿದರೆ ಏಳೇ ದಿನಗಳಲ್ಲಿ ಯಾವುದೇ ಹೆಣ್ಣು ನಾಚುವಂಥ ಸ್ತನ ಬರುತ್ತದೆ ಎಂದು ಕಿವಿಯಲ್ಲಿ ಉಸುರಿದ್ದರು.

ಬೆಳಿಗ್ಗೆ ನೆನಪಾದ ಕೂಡಲೆ ಆ ಮಂತ್ರವನ್ನು ಮನದಲ್ಲಿ ಹೇಳದೆ ಜೋರಾಗಿ ಕೇಳುವಂತೆ ಹೇಳಬೇಕೆಂದು ಬೇರೆ ಹೇಳಿದ್ದರು. ಬೇರೆಯವರಿಗೆ ಕೇಳುವಂತೆ ಹೇಳುವಾಗ ಸಾಕಷ್ಟು ಮುಜುಗರ ಆಕೆ ಅನುಭವಿಸಿದರೂ, ಎದೆ ಮೇಲೆ ಕೈಯಾಡಿಸಿದಾಗ, ಅದಕ್ಕಿಂತ ಮಂತ್ರ ಪಠಣವೇ ಮೇಲೆಂದು ಆಕೆ ತೀರ್ಮಾನಕ್ಕೆ ಬಂದಿದ್ದಳು. ಸರಿ, ಇವಳ ಮಂತ್ರಪಠಣ ಶುರುವಾಯಿತು. ಮೊದಲ ಆರು ದಿನ ಒಂದು ದಿನವೂ ಮರೆಯಲಿಲ್ಲ.

ಆದರೆ, ಅದೇನಾಯಿತೋ ಏನೋ ಏಳನೇ ದಿನ ಬೆಳಿಗ್ಗೆ ಮರೆತುಬಿಟ್ಟಳು. ಪ್ಯಾಂಟ್ ಶರ್ಟ್ ಧರಿಸಿ, ಬಸ್ ಹತ್ತಿದಾಗ, ರಶ್ಶಿನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರ ಮೊಣಕೈ ತನ್ನ ಎದೆಗೆ ತಗುಲಿದಾಗಿ ಲವೀನಾಗೆ ಮಂತ್ರ ಪಠಣದ ನೆನಪಾಯಿತು. ಇವತ್ತು ಮಿಸ್ ಆಗಿಬಿಟ್ಟರೆ? ಎಂದು ಹೆದರಿ ಇದ್ದಲ್ಲಿಂದಲೇ ಹೇಳಬೇಕೆಂದು ನಿರ್ಧರಿಸಿದಳು. ಆ ಮಂತ್ರದ ಅರ್ಥ ಯಾರಿಗೂ ತಿಳಿಯಲಾರದು ಎಂದು ಅಲ್ಲೇ ಜೋರಾಗಿ ಹೇಳಬೇಕೆಂದು ತೀರ್ಮಾನಿಸಿದಳು.

ಆದಿದ್ದಾಗಲಿ ಎಂದು ಜೋರಾಗಿ ಹೇಳೇಬಿಟ್ಟಳು. ಎಲ್ಲರಿಗೂ ಅಚ್ಚರಿ. ಇದ್ಯಾಕೆ ಹೀಗೆ ಮಾಡುತ್ತಿದ್ದಾಳೆಂದು. ಆದರೆ, ಲವೀನಾ ಪಕ್ಕದಲ್ಲೇ ಇದ್ದ ಒಬ್ಬ ವ್ಯಕ್ತಿಗೆ ಮಾತ್ರ ಅಚ್ಚರಿಯಾಗಲಿಲ್ಲ. ಆತನಿಗೆ ತುಂಬಾ ಸಂತೋಷವಾಯಿತು. ತಡೆಯಲಾರದೆ ಕೇಳೇಬಿಟ್ಟ, "ಓಹೋ ಮೇಡಂ, ನೀವು ಆ ಆಲದಮರದ ಕೆಳಗೆ ಕೂತಿರ್ತಾನಲ್ಲ, ಆ ಕಾವಿಧಾರಿ ಸ್ವಾಮೀಜಿಯ ಬಳಿಗೆ ಹೋಗಿದ್ದಿರಾ?" ಎಂದು ಕೇಳಿದ.

ಇವಳಿಗೋ ಅಚ್ಚರಿಯೋ ಅಚ್ಚರಿ. ನಿಮಗ್ಹೇಗೆ ಗೊತ್ತಾಯಿತು ಎಂದು ಕೇಳೇಬಿಟ್ಟಳು. ಆತ ಬಾಯಿ ತೆರೆಯಲು ಹಿಂದು ಮುಂದು ನೋಡುತ್ತಿದ್ದಾಗ, "ಓಹೋಹೋ ಗೊತ್ತಾಯ್ತು ಗೊತ್ತಾಯ್ತು ಬಿಡಿ" ಎಂದು ಲವೀನಾ ಕಿಸಕ್ಕನೆ ನಕ್ಕಿದ್ದಳು. ಆ ವ್ಯಕ್ತಿ, ಯತೀಶ ಇಂಗುತಿಂದ ಮಂಗನಂತಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+