ಬಿದ್ಕೊಳ್ಳೀ ಸುಮ್ನೆ, ನಾಳೆ ಬೇಗನೆ ಏಳಬೇಕು!
ಮನೆಗೆ ಮರಳಿ ಬಂದ ಯತೀಶನ ಮುಖ ಹಿಸುಕಿಹಾಕಿದ ಡೇರೆ ಹೂವಿನಂತಾಗಿತ್ತು. ಸೋತು ಸುಣ್ಣವಾದವನಂತೆ ಕಾಣುತ್ತಿದ್ದ ಯತೀಶ ಭಾರವಾದ ಹೆಜ್ಜೆಗಳನ್ನಿಟ್ಟುಕೊಂಡು ಮನೆಯೊಳಗೆ ಬಂದ. ಆಗ ಮಡದಿ ಲವೀನಾ ರಾತ್ರಿ ಅಡುಗೆ ಮುಗಿಸಿ ತನ್ನ ಫೆವರಿಟ್ ಸೀರಿಯಲ್ ನೋಡುತ್ತಿದ್ದಳು. ಗಂಡನ ಮುಖ ನೋಡಿ ಆಕೆಗೆ ಜಂಘಾಬಲವೇ ಉಡುಗಿಹೋದಂತಾಯಿತು. ಏನಾಯಿತೆಂದು ಕೇಳಿದಳು.
"ಎಲ್ಲಾ ಮುಗಿದ್ಹೋಯ್ತು ಕಣೇ, ಎಲ್ಲಾ ಮುಗಿದ್ಹೋಯ್ತು. ಡಾಕ್ಟರ್ ಸುಬ್ಬು ಬಳಿ ಹೋಗಿದ್ದೆ. ನನ್ನ ಆಯಸ್ಸು ಬರೀ 24 ಗಂಟೆ ಮಾತ್ರ ಎಂದು ಡಾಕ್ಟರ್ ಹೇಳಿದ್ದಾರೆ" ಎಂದು ಆತ ಹೇಳುತ್ತಿದ್ದಂತೆ ಲವೀನಾಗೆ ಭೂಮಿಯೇ ಬಾಯಿಬಿರಿದಂತಾಗಿತ್ತು. ಕಣ್ಣಲ್ಲಿ ನೀರು ಜಿನುಗಿತ್ತು. ಆತನೇ ಸಾವರಿಸಿಕೊಂಡು... ತನ್ನ ಕಡೆಯ ಆಸೆಯಾಗಿ ಆಕೆಯನ್ನು ಕೂಡಿಕೊಳ್ಳಬೇಕೆಂಬ ಬಯಕೆ ವ್ಯಕ್ತಪಡಿಸಿದ. ಆಕೆ ಓಕೆ ಅಂದಳು.
ಮಾಡಿದ್ದ ಅಡುಗೆಯನ್ನು ಅಲ್ಲಿಯೇ ಬಿಟ್ಟು ಇಬ್ಬರೂ ರೂಮು ಸೇರಿಕೊಂಡರು. ಇಬ್ಬರೂ ಮನಸೋಇಚ್ಛೆ ಸುಖಿಸಿದರು. ಆತ ನಿದ್ದೆಗೆ ಜಾರಿದವನಂತೆ ಕಂಡರೆ, ಲವೀನಾ ಮುಂದೇನಪ್ಪಾ ಗತಿ ಎಂದು ಚಿಂತಿಸುತ್ತ ಮೌನಗಂಬನಿ ಮಿಡಿಯುತ್ತಿದ್ದಳು. ಕಾಲ ಸರಿಯುತ್ತಲೇ ಇತ್ತು. ನಾಲ್ಕು ಗಂಟೆ ಕಳೆಯುತ್ತಿದ್ದಂತೆ ಎಚ್ಚರವಾದ ಯತೀಶ ಮತ್ತೆ ಆಕೆಯನ್ನು ಕೂಡಬೇಕೆಂಬ ಆಸೆ ವ್ಯಕ್ತಪಡಿಸಿದ. ಲವೀನಾಗೆ ಸುಸ್ತಾಗಿದ್ದರೂ ಗಂಡನ ಆಸೆಯನ್ನು ತೀರಿಸಲೇಬೇಕಾಯಿತು.
ಮತ್ತೊಂದು ರೌಂಡು ಮುಗೀತು. ಈ ಬಾರಿ ನಿದ್ದೆಗೆ ಜಾರುವ ಸರದಿ ಲವೀನಾದಾಗಿತ್ತು. ಯತೀಶ ಕಣ್ಣುಬಿಟ್ಟು ಕುಳಿತಿದ್ದ, ಏನೇನೋ ಯೋಚನೆ ಮಾಡುತ್ತಿದ್ದ. ಅಷ್ಟರಲ್ಲಿ ಮತ್ತೊಂದೆರಡು ಗಂಟೆಗಳು ಕಳೆದುಹೋಗಿದ್ದವು. ತನ್ನ ಸಾವು ಇನ್ನೇನು ಹತ್ತಿರ ಬರುತ್ತಿದೆ, ಇನ್ನು ಕೆಲವೇ ಗಂಟೆಗಳು ಬಾಕಿ, ಯಮ ಬಂದು ನರಕಕ್ಕೆ ಕರೆದುಕೊಂಡು ಹೋಗುತ್ತಾನೆ, ಅಷ್ಟರಲ್ಲಿ ಕಟ್ಟಕಡೆಯಬಾರಿಗೆ ಸ್ವರ್ಗಸುಖ ಅನುಭವಿಸಿಬಿಡೋಣ ಅಂತ ತೀರ್ಮಾನಿಸಿದ.
ಗೊರಕೆ ಹೊಡೆಯುತ್ತಿದ್ದ ಲವೀನಾಳನ್ನು ಪಟಪಟ ಬಡಿದು ಎಬ್ಬಿಸಿದ, ಏನೆಂದು ನಿದ್ದೆಗುಂಗಿನಲ್ಲಿ ಲವೀನಾ ಕೇಳಿದಳು. ಕಟ್ಟಕಡೆಯ ಬಾರಿ ಕಣೇ ಪ್ಲೀಸ್ ಎಂದು ಅಂಗಲಾಚಿದ. ಮೊದಲೇ ನಿದ್ದೆ ಹಾಳಾಗಿತ್ತು, ಎರಡು ಬಾರಿ ಕಾಮಕೇಳಿ ನಡೆಸಿ ಸುಸ್ತಾಗಿದ್ದಳು. ಮತ್ತೊಂದು ಕೋರಿಕೆ ಬಂದಾಗ ಸಿಕ್ಕಾಪಟ್ಟೆ ರೇಗಿದ ಲವೀನಾ, "ರೀ ಬಿದ್ಕೊಳ್ಳೀ ಸುಮ್ನೆ, ನಾಳೆ ಬೇಗನೆ ಏಳಬೇಕು" ಅಂತ ಗದರಿದಳು. ಯತೀಶ ಬಾಲ ಮುದುರಿಕೊಂಡಿದ್ದ. [ಗಂಡ ಹೆಂಡತಿ ಜೋಕ್ಸ್]












Click it and Unblock the Notifications