ರಿಕ್ಕಿ ಗರ್ಲ್‌ಫ್ರೆಂಡ್ ಆಗಬೇಕೆಂದು ಬಯಸಿದ್ದೇನೆ!

ಏಳನೇ ತರಗತಿ ದಾಟಿ, ಚಡ್ಡಿ ಕಳಚಿ ಪ್ಯಾಂಟಿ ತೊಟ್ಟಿರುವ ಹುಡುಗರು ಮತ್ತು ಫ್ರಾಕು ತ್ಯಜಿಸಿ ಚೂಡಿದಾರ ಧರಿಸುತ್ತಿರುವ ಹುಡುಗಿಯರು ಇರುವ ತರಗತಿಗೆ ಮಿಡಿ ತೊಟ್ಟ ಮಿಸ್ ಲವೀನಾ ಪಾಠ ಮಾಡುತ್ತಿರುತ್ತಾರೆ. ಮೊದಲನೇ ದಿನವೇ ಮಿಸ್ ಲವೀನಾಗೆ ಮಕ್ಕಳು ಮುಂದೆ ದೊಡ್ಡವರಾಗಿ ಏನು ಮಾಡಬೇಕೆಂದು ಬಯಸಿದ್ದಾರೆ ಎಂದು ತಿಳಿಯುವ ಹಂಬಲ.

"ಮಕ್ಕಳಾ, ಮುಂದೆ ನೀವು ಏನು ಆಗಬೇಕೆಂದು ಬಯಸಿದ್ದೀರಿ? ಡಾಕ್ಟರ್, ಇಂಜಿನಿಯರ್, ಟೀಚರ್, ಉದ್ಯಮಿ, ವಿಜ್ಞಾನಿ, ವಕೀಲ, ರೈತ..." ಅಂತ ಇಡೀ ತರಗತಿಯನ್ನು ಉದ್ದೇಶಿಸಿ ಕೇಳಿದಳು. ಕೆಲವರು ಮುಸಿಮುಸಿ ನಗಲು ಪ್ರಾರಂಭಿಸಿದರೆ, ಕೆಲವರು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳಲು ಆರಂಭಿಸಿದರು.

ನೋಡಲು ಸಖತ್ ಸ್ಮಾರ್ಟಾಗಿದ್ದ, ಆಗತಾನೆ ಚಿಗುರು ಮೀಸೆ ಚಿಗುರುತ್ತಿದ್ದ ರಿಕ್ಕಿಯನ್ನು ಲವೀನಾ ಕೇಳಿದಳು, "ಪುಟ್ಟಾ ನಿನ್ನ ಹೆಸರೇನು? ಮುಂದೆ ಏನಾಗಬೇಕೆಂದು ಬಯಸಿದ್ದೀ?"

"ಐ ಆಮ್ ರಿಕ್ಕಿ ಮ್ಯಾಮ್. ನಾನು ಮಲ್ಟಿ ಮಿಲಿಯನೇರ್ ಆಗಬೇಕೆಂದು ಬಯಸಿದ್ದೇನೆ. ಅಡ್ಡಾಡಲು ಐಷಾರಾಮಿ ಕಾರುಗಳಿರಬೇಕು, ಎಣಿಸಲಾರದಷ್ಟು ಬ್ಯಾಂಕ್ ಬ್ಯಾಲನ್ಸ್ ಇರಬೇಕು, ವಾಸಿಸಲು ಪ್ಯಾರಿಸ್, ಸ್ವಿಟ್ಜರ್‌ಲೆಂಡ್, ನ್ಯೂಜಿಲೆಂಡ್‌ಗಳಲ್ಲಿ ಅರಮನೆಯಂಥ ಮನೆಗಳಿರಬೇಕು, ಬೇಕೆಂದಾಗಲೆಲ್ಲ ತಿರುಗಾಡಲು ಖಾಸಗಿ ವಿಮಾನಗಳಿರಬೇಕು, ದೊಡ್ಡ ಗೋಲ್ಫ್ ಕೋರ್ಸ್ ಹೊಂದಿರಬೇಕು..." ಆತ ಹೇಳುತ್ತಿದ್ದುದನ್ನು ಕೇಳಿ ಲವೀನಾ ಮುಖ ಸಂತೋಷದಿಂದ ಅರಳಿಬಿಟ್ಟಿತು.

"ವಾವ್" ಅಂತ ಉದ್ಗಾರ ಹೊರಡಿಸಿದಳು. ಬೇರೆಯವರನ್ನು ಕೇಳಬೇಕೆಂದು ಅಂದುಕೊಳ್ಳುವಷ್ಟರಲ್ಲಿ,

ಮುಂದುವರಿಸಿದ ಆತ, "ಇನ್ನೂ ಮುಗಿದಿಲ್ಲ ಮಿಸ್. ಜೊತೆಗೊಬ್ಬಳು ರಂಭೆ, ಮೇನಕೆ, ಊರ್ವಶಿಯರನ್ನು ಮೀರಿಸುವಂಥ ಸುಂದರವಾದ ಗರ್ಲ್ ಫ್ರೆಂಡ್ ಇರಬೇಕು. ಮನೆಯಲ್ಲಿ ನಾವಿಬ್ಬರೇ ಇರಬೇಕು. ಮೂರು ಹೊತ್ತು..." ನಿಂತಲ್ಲಿಯೇ ಸ್ಟನ್ ಆದ ಮಿಸ್ ಲವೀನಾ, ಮುಂದೆ ಆತ ಏನು ಹೇಳಲಿದ್ದಾನೆ ಎಂದು ಊಹಿಸಿ, ಆತನ ಮಾತನ್ನು ಅಲ್ಲೇ ಕಟ್ ಮಾಡಿ, ತನ್ನ ಗಮನವನ್ನು ತರಗತಿಯಲ್ಲೇ ಬ್ಯೂಟಿಫುಲ್ ಆಗಿದ್ದ ರೀಟಾ ಮೇಲೆ ಹೊರಳಿಸಿದಳು.

ಆಕೆಯನ್ನು ಎಬ್ಬಿಸಿ, "ಮುಂದೆ ಏನಾಗಬೇಕೆಂದು ನೀನು ಬಯಸಿದ್ದಿ ಲವ್ಲಿ ಗರ್ಲ್?" ಎಂದು ಕೇಳಿದಳು.

"ಮಿಸ್, ಮಿಸ್, ಮಿಸ್... ನಾನು ರಿಕ್ಕಿಯ ಗರ್ಲ್‌ಫ್ರೆಂಡ್ ಆಗಬೇಕೆಂದು ಬಯಸಿದ್ದೇನೆ!" ಎಂದು ರೀಟಾ ಉತ್ತರಿಸಿದಳು. [ಲವೀನಾ ಜೋಕ್ಸ್]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+