ಹೆಂಡತಿ ಇಂಥ ಮೋಸಗಾತಿ ಅಂತ ಗೊತ್ತಿರಲಿಲ್ಲ!

ಇದೊಂದು ಕಾಕತಾಳೀಯ ಘಟನೆಯಲ್ಲದೆ ಮತ್ತೇನೂ ಅಲ್ಲ. ಆಡ್ ಕಂಪನಿ ಮಾಲೀಕನಾಗಿದ್ದ ಯತೀಶನ ಹೆಂಡತಿ ಕೆಲಸದ ಮೇಲೆ ಪ್ರವಾಸಕ್ಕೆ ಹೋಗುವುದಕ್ಕೂ, ಯತೀಶನ ಸೆಕ್ರೆಟರಿಯಾಗಿದ್ದ ಲವೀನಾಳ ಗಂಡ ಅದೇ ದಿನ ಫಾರಿನ್ ಟೂರಿಗೆ ಹೋಗುವುದಕ್ಕೂ, ಅವರಿಬ್ಬರ ನಡುವೆ ಎಂದೂ ಇಲ್ಲದ ಇನ್‌ಫ್ಯಾಚುವೇಷನ್ ಬೆಳೆಯುವುದಕ್ಕೂ... ಏನು ಟೈಮಿಂಗ್ ಅಂತೀರಿ?

ಇಬ್ಬರೂ ಒಂದೇ ಒಂದು ಮಾತನ್ನೂ ಆಡಿರುವುದಿಲ್ಲ, ಆದರೆ ಅವರಿಬ್ಬರ ಕಣ್ಣಗಳೇ ಇಡೀ ದಿನ ಸಂಭಾಷಣೆ ಮಾಡಿರುತ್ತವೆ. ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ ಅಂತ ಅವರಿಗೇ ಗೊತ್ತಿಲ್ಲದಂತೆ ಎರಡೂ ಹೃದಯಗಳು ಹಾಡಿಕೊಂಡಿರುತ್ತವೆ. ಹತ್ತಿರ ಬಂದಾಗ ಆಕೆಯ ಎದೆಬಡಿತ ಹೆಚ್ಚಾಗಿರುವುದು ಆತನಿಗೆ ಗೊತ್ತಾಗಿರುತ್ತದೆ, ಹಾಗೆಯೇ ವೈಸ್ ವರ್ಸಾ.

ಸರಿ ಇನ್ನೇನು ಅಂತ, ಭಾಸ್ಕರ ಕೆಂಪೇರಿ ಬಾನಿಂದ ಜಾರುವ ಹೊತ್ತಿಗೆ ಕಾರಿನ ಹಾರ್ನ್ ಕೀಕ್ ಕೀಕ್ ಅಂದಿರುತ್ತದೆ, ಲವೀನಾ ಬಂದು ಪಕ್ಕದಲ್ಲಿ ವಿರಾಜಮಾನಳಾಗಿರುತ್ತಾಳೆ. ನಾಚಿಕೆಯಿಂದ ಕೆಂಪೇರಿದ ಮುಖ ಹೊತ್ತುಕೊಂಡೇ ಇಬ್ಬರೂ ಯತೀಶನ ಮನೆಗೆ ಬಂದಿರುತ್ತಾರೆ.

ಲವೀನಾ ಹಿಂದೆಮುಂದೆ ನೋಡುತ್ತಿರುವುದನ್ನು ಗಮನಿಸಿದ ಯತೀಶ, "ಡೋಂಟ್ ವರಿ ನನ್ನ ಮಡದಿ ಊರಲ್ಲಿಲ್ಲ, ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾಳೆ. ಬರುವುದು ಏನಿಲ್ಲವೆಂದರೂ ಒಂದು ವಾರವಾಗುತ್ತದೆ. ಸೋ, ನೋ ಪ್ರಾಬ್ಲಂ" ಅಂತ ಹೆಸರಾಂತ ನಟನೊಬ್ಬ ಹೆಂಡತಿ ಇಲ್ಲದ ಸಮಯದಲ್ಲಿ ಪ್ರೇಯಸಿ ಪ್ರೇಮಿಸುವ ಹಾಗೆ ಮಾಡುವಂತೆ ಡೈಲಾಗ್ ಹೊಡೆದಿರುತ್ತಾನೆ.

ಇನ್ನೇನು ಆಕ್ಷನ್ ಶುರುವಾಗಬೇಕು ಆಗ, ಏನೋ ನೆನಪಾದಂತಾಗಿ ಲವೀನಾ ತನ್ನ ಪರ್ಸ್ ತಡಕಾಡುತ್ತಾಳೆ. "ಓ ಮೈ ಗಾಡ್, ನಾನು ಗರ್ಭ ನಿರೋಧಕ ತರಲು ಮರೆತೇಬಿಟ್ಟೆ. ದಯವಿಟ್ಟು ಕ್ಷಮಿಸಿ. ನಾನು ವಾಪಸ್ ಹೋಗಬೇಕು" ಎಂದು ಅಂಗಲಾಚುತ್ತಾಳೆ.

ಅವಳನ್ನು ಸಮಾಧಾನ ಮಾಡುವಂತೆ, "ಡೋಂಟ್ ವರಿ ಡಾರ್ಲಿಂಗ್, ಬೀರುವಿನಲ್ಲಿ ನನ್ನ ಹೆಂಡತಿಯದು ಇದ್ದೇ ಇರುತ್ತದೆ. ಅದನ್ನೇ ಬಳಸುವಿಯಂತೆ. ಒಂದ್ನಿಮಿಷ ಬಂದೆ" ಅಂತ ಒಳಕೋಣೆಗೆ ಹೋಗುತ್ತಾನೆ. ಹೋದ ವೇಗದಲ್ಲೇ ವಾಪಸ್ ಕೂಡ ಬಂದಿರುತ್ತಾನೆ. ಆದರೆ, ಮುಖದ ವರ್ಣ ಸಂಪೂರ್ಣ ಬದಲಾಗಿಬಿಟ್ಟಿರುತ್ತದೆ. ನಗುವಿನ ಜಾಗದಲ್ಲಿ ಕಣ್ಣು ಬೆಂಕಿ ಉಗುಳುತ್ತಿರುತ್ತದೆ, ಕಿವಿಗಳು ಹೊಗೆ ಕಾರುತ್ತಿರುತ್ತವೆ.

"ನನ್ನ ಹೆಂಡತಿ ಇಂಥ ಮೋಸಗಾತಿ ಅಂತ ಗೊತ್ತಿರಲಿಲ್ಲ. ಆಕೆ ನನಗೆ ಮೋಸ ಮಾಡುತ್ತಿದ್ದಾಳೆ ಅಂತ ಒಂದು ಅನುಮಾನವಿದ್ದೇ ಇತ್ತು. ಈಗ ಅದು ಸಾಬೀತಾಗಿದೆ. ಏನ್ಮಾಡಿದ್ದಾಳೆ ಗೊತ್ತಾ? ಗರ್ಭ ನಿರೋಧಕವನ್ನು ತನ್ನ ಜೊತೆ ತೆಗೆದುಕೊಂಡು ಹೋಗಿದ್ದಾಳೆ" ಅಂತ ಹೇಳಿ ಹಾಸಿಗೆಯ ಮೇಲೆ ಕುಸಿದುಕುಳಿತುಕೊಳ್ಳುತ್ತಾನೆ. ಏನೋ ನೆನಪಾದಂತಾಗಿ ಲವೀನಾಳೂ ಶರವೇಗದಲ್ಲಿ ತನ್ನ ಮನೆ ತಲುಪಿರುತ್ತಾಳೆ. [ಲವ್ಲಿ ಲವೀನಾ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+