ಗಂಡಸ್ತನ ಪ್ರಶ್ನಿಸಿದ ಹೆಂಡತಿಗೆ ಗಂಡನ ತಕ್ಕ ಉತ್ತರ!
ಒಂದು ಬಾರಿ ಗಂಡ ಹೆಂಡತಿಯ ನಡುವೆ ಭೀಷಣ ಮಾತಿನ ಯುದ್ಧ ಆರಂಭವಾಯಿತು. ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ ಅವರಿಬ್ಬರ ಸಂಬಂಧಿಗಳನ್ನೆಲ್ಲ ಎಳೆದುತಂದು, ಅಡುಗೆಮನೆಯೊಳಗೂ ಹೊಕ್ಕು ಕಡೆಗೆ ಬೆಡ್ ರೂಂ ಒಳಗೂ ನುಸುಳಿಬಿಟ್ಟಿತು.
ಕೋಪೋದ್ರಿಕ್ತನಾಗಿದ್ದ ಗಂಡ, "ನೀನು ಮಾಡುವ ಅಡುಗೆ ತಿನ್ನುವ ಬದಲು ಸೂಯಿಸೈಡ್ ಮಾಡಿಕೊಳ್ಳುವುದೇ ಒಳ್ಳೆಯದು. ಅಷ್ಟು ಕೆಟ್ಟದಾಗಿರುತ್ತದೆ" ಎಂದು ಮಾತಿನ ಭರದಲ್ಲಿ ಹೇಳಿಬಿಟ್ಟ.
ಆಕೆಯೂ ಕಡಿಮೆಯೇನಿರಲಿಲ್ಲ, "ನನ್ನ ಅಡುಗೆ ಬಗ್ಗೆ ಮಾತಾಡ್ತೀರಾ? ಇದೋ ಕೇಳಿ, ಹಾಸಿಗೆಯಲ್ಲಿ ನಿಮ್ಮಿಂದ ಸುಖ ಪಡೆಯುವ ಬದಲು, ಬದಲು..." ಎಂದು ಕೆಂಪಗಾಗಿದ್ದ ಮುಖ ಹೊತ್ತುಕೊಂಡೇ ತನ್ನ ಕಚೇರಿಗೆ ತೆರಳಿಬಿಟ್ಟಳು. ವಿಪರೀತ ಅವಮಾನವಂತಾಗಿದ್ದ ಗಂಡ ಅಂದು ಕಚೇರಿಗೆ ಹೋಗಲೇ ಇಲ್ಲ.
ಹೆಂಡತಿಗೆ ತಾನು ಮಾತನಾಡಿದ್ದು ವಿಪರೀತವಾಯಿತು. ಹಾಗೆ ಮಾತನಾಡಬಾರದಿತ್ತು ಎಂದು ಅನ್ನಿಸಿ ಮಧ್ಯಾಹ್ನದ ನಂತರ ಗಂಡನಿಗೆ ಫೋನಾಯಿಸಿದಳು. ಸುಮಾರು ಹದಿನೈದು ನಿಮಿಷಗಳ ಕಾಲ ಸತತವಾಗಿ ಕಾಲ್ ಮಾಡಿದ ನಂತರ ಗಂಡ ಫೋನ್ ಎತ್ತಿಕೊಂಡ.
"ಯಾಕೆ ಇಷ್ಟು ಲೇಟ್ ಮಾಡಿದ್ರಿ ಫೋನ್ ತೆಗೆದುಕೊಳ್ಳಲು? ನಾನೆಷ್ಟು ಹೆದರಿದ್ದೆ ಗೊತ್ತಾ? ಎಲ್ಲಿದ್ರಿ ಇಷ್ಟೊತ್ತು?" ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು.
"ಹಾಸಿಗೆಯಲ್ಲಿದ್ದೆ ಕಣೇ, ಎದ್ದು ಬರಲು ಇಷ್ಟು ಹೊತ್ತು ಬೇಕಾಯಿತು" ಎಂದು ಗಂಡ ಕೊಂಚ ಸುಸ್ತಾದವನಂತೆ ಹೇಳಿದ.
"ಬೆಡ್ಡಲ್ಲಿದ್ರಾ, ಯಾಕೆ ಹುಷಾರಿಲ್ವಾ? ಏನಾಯಿತು ಡಾರ್ಲಿಂಗ್? ಏನು ಮಾಡ್ತಾಯಿದ್ರಿ? ಮನೆಗೆ ಬಂದುಬಿಡ್ಲಾ?" ಕಣ್ಣೀರಿನ ಜೊತೆಗೆ ಪ್ರಶ್ನೆಗಳ ಮಳೆಯನ್ನೂ ಸುರಿಸಿದಳು.
"ನೋನೋ, ಬೇಡಬೇಡ. ಹಾಸಿಗೆ, ಗಂಡಸ್ತನ ಅಂತ ಏನೇನೋ ಮಾತಾಡಿದೆಯಲ್ಲ, ಅದಕ್ಕೆ ಕೆಲಸದವಳ ಅಭಿಪ್ರಾಯ ಕೇಳಿದೆ!"












Click it and Unblock the Notifications